ಬಾಲಿವುಡ್‌ನ ಅತ್ಯುತ್ತಮ ನಟರಲ್ಲಿ ಒಬ್ಬರಾದ ಸುನಿಲ್ ಶೆಟ್ಟಿ ಇತ್ತೀಚೆಗೆ ಲ್ಯಾಂಡ್ ರೋವರ್ ಡಿಫೆಂಡರ್ 110 ಅನ್ನು ಖರೀದಿಸಿದ್ದಾರೆ. ಇದು ಪವರ್ಫುಲ್ SUV ಆಗಿದ್ದು 1.5 ಕೋಟಿ ರೂ ಬೆಲೆ ಇದೆ. ಸುನಿಲ್ ಶೆಟ್ಟಿ ಫ್ಯೂಜಿ ವೈಟ್ ಬಣ್ಣದ ಈ ಕಾರನ್ನು ಹೊಂದಿದ್ದಾರೆ. ಲ್ಯಾಂಡ್ ರೋವರ್ ಡಿಫೆಂಡರ್ 110 ಮೂರು ಎಂಜಿನ್ ರೂಪಾಂತರಗಳಲ್ಲಿ ಬರುತ್ತದೆ. ಇದು 2.0 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 4 ಸಿಲಿಂಡರ್ ಘಟಕವಾಗಿದ್ದು 300 Bhp ಪವರ್ ಮತ್ತು 400 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಹಮ್ಮರ್ ಕೂಡಾ ಬಹುಬೇಡಿಕೆಯ SUV ಆಗಿದೆ. ಇದನ್ನು ವರ್ಲ್ಡ್ ವಾರ್ 2 ರ ಸಮಯದಲ್ಲಿ ಅಮೆರಿಕನ್ ಸೈನ್ಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ, ನಂತರ ಖಾಸಗಿ ಬಳಕೆಗೂ ಕಾರನ್ನು ತಯಾರಿಸಲಾರಂಭಿಸಿದರು. ಈ ಕಾರಿನ ವಿಶೇಷತೆಯೆಂದರೆ ಅದರ ಖಡಕ್ ಲುಕ್ ಮತ್ತು ಬೃಹತ್ ಗಾತ್ರ. ಇದು 3900 ಸಿಸಿಯ 4 ಸಿಲಿಂಡರ್ ಎಂಜಿನ್ ಹೊಂದಿದೆ. ಗಾತ್ರದಲ್ಲಿ ದೊಡ್ಡದಾಗಿದ್ದರೂ, ಇದು ಇನ್ನೂ 5 ಆಸನಗಳ SUV ಆಗಿದೆ.