Suniel Shetty: ಕೊರೋನಾ ಸಂಕಷ್ಟ: ಬೆಂಗಳೂರಿಗರ ನೆರವಿಗೆ ಬಂದ ನಟ ಸುನೀಲ್ ಶೆಟ್ಟಿ..!
ಕೊರೋನಾ 2ನೇ ಅಲೆಯಿಂದಾಗಿ ಇಡೀ ದೇಶವೇ ತತ್ತರಿಸುತ್ತಿದೆ. ಆಸ್ಪತ್ರೆಗಳಲ್ಲಿ ಐಸಿಯೂ ಬೆಡ್, ಆಮ್ಲಜನಕಗಳ ಕೊರತೆಯಿಂದಾಗಿ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೇ ಬಾಲಿವುಡ್ ನಟ ಹಾಗೂ ಕರಾವಳಿಯ ಕುವರ ಸುನೀಲ್ ಶೆಟ್ಟಿ ಮುಂಬೈ ಹಾಗೂ ಬೆಂಗಳೂರಿನಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ನೆರವಿಗೆ ಬಂದಿದ್ದಾರೆ. (ಚಿತ್ರಗಳು ಕೃಪೆ: ಸುನೀಲ್ ಶೆಟ್ಟಿ ಇನ್ಸ್ಟಾಗ್ರಾಂ ಖಾತೆ)
ಕರಾವಳಿಯ ಕಟ್ಟುಮಸ್ತು ಹೈದ ಹಾಗೂ ಬಾಲಿವುಡ್ ನಟಸುನೀಲ್ ಶೆಟ್ಟಿ ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಬೆಂಗಳೂರಿಗರ ನೆರವಿಗೆ ಧಾವಿಸಿದ್ದಾರೆ.
2/ 7
ದಿನೇ ದಿನೇ ಹೆಚ್ಚುತ್ತಿರುವ ಸೋಂಕಿತರಿಗೆ ಆಮ್ಲಜನಕದ ಕೊರತೆಯಿಂದಾಗಿ ತುಂಬಾ ತೊಂದರೆಯಾಗುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಬೆಂಗಳೂರಿಗರಿಗೆ ಉಚಿತವಾಗಿ ಆಮ್ಲಜಕ ಸಾಂದ್ರಕ ಯಂತ್ರಗಳನ್ನು (ಆಕ್ಸಿಜನ್ ಕಾನ್ಸನ್ಟ್ರೇಟರ್ಸ್) ನೀಡಲು ಮುಂದಾಗಿದ್ದಾರೆ.
3/ 7
ಮುಂಬೈ ಹಾಗೂ ಬೆಂಗಳೂರಿನಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಆಮ್ಲಜನ ಸಾಂದ್ರಕ ಯಂತ್ರಗಳನ್ನು ನೀಡುತ್ತಿದ್ದಾರೆ.
4/ 7
ಕೆವಿಎನ್ ಪ್ರತಿಷ್ಠಾನದ ಜೊತೆ ಸೇರಿ ಸುನೀಲ್ ಶೆಟ್ಟಿ ಈ ಕಾರ್ಯ ಮಾಡುತ್ತಿದ್ದಾರೆ.
5/ 7
ಇದು ಕಷ್ಟದ ಸಮಯ, ಯಾರಿಗಾದರೂ ಸಹಾಯ ಬೇಕಾದಲ್ಲಿ ಅಥವಾ ಸಹಾಯ ಮಾಡುವವರು ಇದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ ಸುನೀಲ್ ಶೆಟ್ಟಿ.
6/ 7
ಸುದೀಪ್ ಜತೆ ಪೈಲ್ವಾನ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಸುನೀಲ್ ಶೆಟ್ಟಿ.
7/ 7
ಮೂಲತಃ ಮಂಗಳೂರಿನವರಾದ ಸುನೀಲ್ ಶೆಟ್ಟಿ ಅವರಿಗೆ ರಾಜ್ಯದ ಬಗ್ಗೆ ವಿಶೇಷ ಒಲವಿದೆ.