Sumalatha Ambareesh-Abhishek Ambareesh ಮನೆಯಲ್ಲಿ ಕಳೆಗಟ್ಟಿದ ಗಣೇಶ ಹಬ್ಬದ ಸಂಭ್ರಮ
ಎಲ್ಲರೂ ಸಂಭ್ರಮದಿಂದ ಗಣೇಶ ಚತುರ್ಥಿ (Ganesha Chaturthi) ಆಚರಿಸಿದ್ದಾರೆ. ಮನೆಗೆ ಗಣಪನನ್ನು ತಂದು, ನಾನಾ ರೀತಿಯ ಸಿಹಿ ತಿನಿಸುಗಳನ್ನು ಮಾಡಿ, ಗಣಪತಿಗೆ ನೈವೇದ್ಯ ಮಾಡಿ ಪೂಜೆ ಸಲ್ಲಿಸಿದ್ದಾರೆ. ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಸುಮಲತಾ (Sumalatha Ambareesh) ಅವರೂ ಸಹ ತಮ್ಮ ರಾಜಕೀಯ ಕೆಲಸಗಳಿಂದ ಬಿಡುವು ಮಾಡಿಕೊಂಡು ಮನೆಯಲ್ಲಿ ಮಗ ಅಭಿಷೇಕ್ ಅಂಬರೀಷ್ (Abhishek Ambareesh) ಜೊತೆ ಹಬ್ಬ ಆಚರಿಸಿದ್ದಾರೆ. (ಚಿತ್ರಗಳು ಕೃಪೆ: ಸುಮಲತಾ ಇನ್ಸ್ಟಾಗ್ರಾಂ ಖಾತೆ)
ಸುಮಲತಾ ಅಂಬರೀಷ್ ಅವರು ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮುಂದಿನ ಚುನಾವಣೆಗೂ ತಯಾರಿ ನಡೆಸಿರುವ ಸುಮಲತಾ ಅವರು ಮಂಡ್ಯದಲ್ಲೇ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ.
2/ 5
ತಮ್ಮ ಎಲ್ಲ ಕೆಲಸಗಳಿಂದ ಬಿಡುವು ಮಾಡಿಕೊಂಡ ಸುಮಲತಾ ಅವರನ್ನು ಮನೆಯಲ್ಲಿ ಗಣೇಶ ಚತುರ್ಥಿ ಆಚರಿಸಿದ್ದಾರೆ.
3/ 5
ತಮ್ಮ ಮನೆಯಲ್ಲಿ ಮಗ ಅಭಿಷೇಕ್ ಜೊತೆ ಗಣೇಶನ ಪೂಜೆ ಮಾಡಿದ್ದು, ಪೂಜೆಯ ನಂತರ ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
4/ 5
ಹಬ್ಬದಂದು ಅರಿಶಿನ ಹಾಗೂ ಗುಲಾಬಿ ಬಣ್ಣದ ರೇಷ್ಮೆ ಸೀರೆಯುಟ್ಟು ಸುಮಲತಾ ಅವರು ಲಕ್ಷ್ಮಿಯಂತೆ ಕಂಗೊಳಿಸಿದ್ದಾರೆ. ಆಗಾಗ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ ಈ ನಟಿ.
5/ 5
ಮಂಡ್ಯದಲ್ಲಿ ಬಾಡಿಗೆ ಮನೆಯಲ್ಲಿದ್ದ ಸುಮಲತಾ ಈಗ, ಅಲ್ಲಿ ಸ್ವಂತ ಮನೆ ಕಟ್ಟಲಾರಂಭಿಸಿದ್ದಾರೆ. ಅದಕ್ಕಾಗಿ ಜಾಗ ಸಹ ಖರೀದಿಸಿದ್ದು, ಇತ್ತೀಚೆಗಷ್ಟೆ ಸುದ್ದಿಯಾಗಿತ್ತು.