ಸುಕುಮಾರ್ ಅವರ ಕ್ರಿಯೇಟಿವಿಟಿಗೆ ಅಲ್ಲು ಅರ್ಜುನ್ ಪ್ರತಿಭೆ ಸೇರಿಕೊಂಡು, ಪುಷ್ಪ ಸುನಾಮಿ ಇಂದಿಗೂ ನಿಂತಿಲ್ಲ. ಈ ನಡುವೆ ಪುಷ್ಪ 2 ರೂಪದಲ್ಲಿ ಈ ಸಿನಿಮಾದ ಸೀಕ್ವೆಲ್ ಮಾಡಲಾಗುತ್ತಿದೆ. ಇದಕ್ಕಾಗಿ ಅದ್ಧೂರಿ ರೇಂಜ್ಗೆ ಸಿನಿಮಾ ಸ್ಕೆಚ್ ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಹೊರಬಿದ್ದಿರುವ ವಿಚಾರವೊಂದು ಅಭಿಮಾನಿಗಳಿಗೆ ಸಂತಸ ತಂದಿದೆ.