ಸುಹಾನಾ ಖಾನ್....ಬಾಲಿವುಡ್ನಲ್ಲಿ ಕಿಂಗ್ ಖಾನ್ ಎಂದೇ ಖ್ಯಾತರಾಗಿರುವ ಶಾರುಖ್ ಖಾನ್ ಅವರ ಮಗಳು. ಸುಹಾನಾ ಬಾಲಿವುಡ್ಗೆ ಕಾಲಿಡುವ ಮುನ್ನವೇ ಸದಾ ಸುದ್ದಿಯಲ್ಲಿರುತ್ತಾರೆ. ಸುಹಾನಾ ಖಾನ್ ನಿನ್ನೆಯಷ್ಟೆ ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರು ಲೆಟೆಸ್ಟ್ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಅದು ವೈರಲ್ ಆಗಿದೆ. ಫೋಟೋ ಶೇರ್ ಮಾಡಿದ ಒಂದು ಗಂಟೆಯೊಳಗೆ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ಸುಹಾನಾರ ಫೋಟೋಗಳಿಗೆ ಎಂದಿನಂತೆ ಅವರ ಬಾಲ್ಯದ ಸ್ನೇಹಿತರಾದ ಅನನ್ಯಾ ಪಾಂಡೆ, ಆಲಿಯಾ ಚಿಬ್ಬಾ ಹಾಗೂ ಶನಾಯಾ ಕಪೂರ್ ಕಮೆಂಟ್ ಮಾಡಿದ್ದಾರೆ. ನ್ಯೂಯಾರ್ಕ್ನಲ್ಲಿರುವ ಸ್ನೇಹಿತರೊಂದಿಗೆ ಸುಹಾನಾ ಖಾನ್