ಟಾಟಾ ಮೋಟಾರ್ಸ್ ನಲ್ಲಿ ಭಾವುಕಳಾದೆ: ಕಾರ್ಯಕ್ರಮದಲ್ಲಿ ತಮ್ಮ ಟಾಟಾ ಮೋಟಾರ್ಸ್ ಭೇಟಿಯನ್ನು ಹಂಚಿಕೊಂಡಿದ್ದಾರೆ ಸುಧಾಮೂರ್ತಿ. “ಕಳೆದ ತಿಂಗಳು ನಾನು ಟಾಟಾ ಮೋಟಾರ್ಸ್ ಗೆ ಹೋಗಿದ್ದೆ. ನಾನು ಸುಮಾರು ಕಳೆದ 50 ವರ್ಷಗಳಿಂದಲೂ ಟಾಟಾಗೆ ಭೇಟಿ ನೀಡುತ್ತಿದ್ದೇನೆ. ಇತ್ತೀಚೆಗೆ ನಾನು ಕಂಪೆನಿಗೆ ಭೇಟಿ ಕೊಟ್ಟಾಗ ಕಾರ್ ವಿಭಾಗದಲ್ಲಿ ಸುಮಾರು 300 ಹುಡುಗಿಯರು ಕಾರಿನ ಬಿಡಿಭಾಗಗಳನ್ನು ಜೋಡಿಸುತ್ತಿದ್ದರು.