ತಮಿಳಿನ '96'ರ ಕನ್ನಡ ರೀಮೇಕ್ '99' ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನ್ಯೂ ಲುಕ್ಸ್..!
ರಾಮು ಫಿಲ್ಮ್ಸ್ ನಿರ್ಮಾಣದ '99' ಕನ್ನಡ ಸಿನಿಮಾವನ್ನು ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಭಾವನಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಶಾ ಅಭಿನಯದ '96' ಕಳೆದ ವರ್ಷ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ರೀಮೇಕ್ ಕನ್ನಡದ '99'. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಇನ್ನೇನು ಸದ್ಯದಲ್ಲೇ ತೆರೆಗಪ್ಪಳಿಸಲಿದೆ ಈ ಸಿನಿಮಾ.