Varisu vs Thunivu: ಸ್ಟಾರ್ವಾರ್ ತಂದ ಸಾವು! ಅಜಿತ್ ಅಭಿಮಾನಿಗೆ ದೊಣ್ಣೆಯಿಂದ ಹೊಡೆದು ಸಾಯಿಸಿದ್ರಾ ವಿಜಯ್ ಫ್ಯಾನ್ಸ್?
Ajith vs Vijay: ಎರಡು ಸಿನಿಮಾಗಳ ಫಸ್ಟ್ ಶೋ ಮುಗಿದ ಬಳಿಕ ಎರಡು ನಟರ ಅಭಿಮಾನಿಗಳ ಹೊರ ಬಂದು ಜೋರಾಗಿ ಕೂಗುತ್ತಿದ್ದರಂತೆ. ಈ ನಡುವೆ ಮೃತಪಟ್ಟಿರುವ ಅಜಿತ್ ಅಭಿಮಾನಿ ಅಲ್ಲೇ ಹಾಕಿದ್ದ ವಿಜಯ್ ಸಿನಿಮಾದ ಪೋಸ್ಟರ್ ಹರಿಯಲು ಮುಂದಾಗಿದ್ದರಂತೆ.
ಕಾಲಿವುಡ್ನಲ್ಲಿ ಸ್ಟಾರ್ ವಾರ್ ಅನ್ನೋದು ನಿನ್ನೆ ಮೊನ್ನೆಯದ್ದಲ್ಲ, 4 ದಶಕಗಳಿಂದಲೂ ಈ ಸ್ಟಾರ್ ವಾರ್ ನಡೆದುಕೊಂಡು ಬಂದಿದೆ. ಅದರಲ್ಲೂ ದಳಪತಿ ವಿಜಯ್ ಹಾಗೂ ತಲಾ ಅಜಿತ್ ನಡುವೆ ಏನೂ ಇಲ್ಲದಿದ್ದರೂ, ಅವರ ಅಭಿಮಾನಿಗಳ ಮಧ್ಯೆಯಂತೂ ಸ್ಟಾರ್ ವಾರ್ ಜೋರಿದೆ.
2/ 8
ಮೊನ್ನೆಯಷ್ಟೇ ವಿಜಯ್ ಅಭಿನಯದ ವಾರಿಸು ಹಾಗೂ ಅಜಿತ್ ಅಭಿನಯದ ತುಣಿವು ಸಿನಿಮಾ ಒಂದೇ ದಿನ ರಿಲೀಸ್ ಆಗಿರುವುದು ಗೊತ್ತೆ ಇದೆ. 12 ನೇ ಬಾರಿ ಇಬ್ಬರು ಸ್ಟಾರ್ ನಟರು ನಟಿಸಿರುವ ಸಿನಿಮಾ ಮುಖಮುಖಿಯಾಗಿದೆ.
3/ 8
2 ಸಿನಿಮಾ ರಿಲೀಸ್ ಆದ ದಿನವೇ ನಡೆಯಬಾರದ ಘಟನೆಯೊಂದು ನಡೆದುಹೋಗಿದೆ. ಅಜಿತ್ ಅಭಿಮಾನಿಯೊಬ್ಬ ಸಿನಿಮಾ ರಿಲೀಸ್ ಆದ ಸಂಭ್ರಮಾಚರಣೆಯಲ್ಲಿ ಮೃತಪಟ್ಟಿದ್ದಾನೆ.
4/ 8
ಕಳೆದ ಎರಡು ದಿನಗಳ ಹಿಂದೆ 19 ವರ್ಷದ ಅಜಿತ್ ಫ್ಯಾನ್ಸ್ ಲಾರಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
5/ 8
ಇದೀಗ ಈ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಅದೇನಪ್ಪಾ ಅಂದರೆ ವಿಜಯ್ ಅಭಿಮಾನಿಗಳು ದೊಣ್ಣೆಯಿಂದ ಅಜಿತ್ ಫ್ಯಾನ್ಗೆ ಹೊಡೆದು ಸಾಯಿಸಿದ್ದಾರೆ ಅಂತ ಸೋಷಿಯಲ್ ಮಿಡೀಯಾದಲ್ಲಿ ಚರ್ಚೆಯಾಗುತ್ತಿದೆ.
6/ 8
ಎರಡು ಸಿನಿಮಾಗಳ ಫಸ್ಟ್ ಶೋ ಮುಗಿದ ಬಳಿಕ ಎರಡು ನಟರ ಅಭಿಮಾನಿಗಳ ಹೊರ ಬಂದು ಜೋರಾಗಿ ಕೂಗುತ್ತಿದ್ದರಂತೆ. ಈ ನಡುವೆ ಮೃತಪಟ್ಟಿರುವ ಅಜಿತ್ ಅಭಿಮಾನಿ ಅಲ್ಲೇ ಹಾಕಿದ್ದ ವಿಜಯ್ ಸಿನಿಮಾದ ಪೋಸ್ಟರ್ ಹರಿಯಲು ಮುಂದಾಗಿದ್ದರಂತೆ.
7/ 8
ಈ ವೇಳೆ ವಿಜಯ್ ಅಭಿಮಾನಿಗಳು ಅಜಿತ್ ಅಭಿಮಾನಿಗೆ ದೊಣ್ಣೆಯಿಂದ ಹೊಡೆದಿದ್ದಾರಂತೆ. ಈ ವೇಳೆ ಆ ಯುವಕ ಬಿದ್ದು ಸಾವನ್ನಪ್ಪಿದ್ದಾನೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
8/ 8
ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೂ ಅಜಿತ್ ಕೆಲ ಅಭಿಮಾನಿಗಳು ವಿಜಯ್ ಅಭಿಮಾನಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ.