Star Suvarna: ತಾಯಂದಿರ ಜೊತೆ ತಾರೆಯರ ಮಸ್ತಿ; ಮಿಸ್ ಮಾಡ್ದೆ ನೋಡಿ ‘ಅಮ್ಮ, ಹ್ಯಾಪಿ ಮದರ್ಸ್ ಡೇ’ ಪ್ರೋಗ್ರಾಂ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಾಯಂದಿರ ದಿನ ಸಂಭ್ರಮ. ಸುವರ್ಣ ಸೂಪರ್ ಸ್ಟಾರ್ ನಲ್ಲಿ ತಾಯಂದಿರ ಜೊತೆಗೆ ಮಕ್ಕಳು ಸಹ ಭಾಗವಹಿಸಿ, ಕಾರ್ಯಕ್ರಮದ ರಂಗು ಹೆಚ್ಚಿಸಿದ್ದು. ಇದರ ಬೆನ್ನಲ್ಲೇ ತಾಯಂದಿರ ದಿನಕ್ಕಾಗಿಯೇ ಸ್ಪೆಷಲ್ ಕಾರ್ಯಕ್ರಮ ಅಮ್ಮ, ಹ್ಯಾಪಿ ಮದರ್ಸ್ ಡೇ ಕಾರ್ಯಕ್ರಮ ಬರ್ತಿದೆ
ಸ್ಟಾರ್ ಸುವರ್ಣ ವಾಹಿನಿಯಲ್ಲಿ "ಅಮ್ಮ ... ಹ್ಯಾಪಿ ಮದರ್ಸ್ ಡೇ" ಹೊಸ ಕಾರ್ಯಕ್ರಮ ಮೂಡಿಬರುತ್ತಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಸಿನಿಮಾ ನಟರು ಮತ್ತು ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿ ಕಲಾವಿದರು ಪಾಲ್ಗೊಂಡಿದ್ದಾರೆ.
2/ 8
ಸ್ಟಾರ್ ಸುವರ್ಣ ವಾಹಿನಿಯ ಕಲಾವಿದರು ಹಿಂದೆಂದು ಕಾಣದ ರೀತಿಯಲ್ಲಿ ಈ ಕಾರ್ಯಕ್ರಮದಲ್ಲಿ ಕಾಣಸಿಗಲಿದ್ದಾರೆ. ತಮ್ಮ-ತಾಯಿಯ ಜೊತೆ ಕಾಣಿಸಿಕೊಳ್ತಿರೋದು ವಿಶೇಷವಾಗಿದೆ.
3/ 8
ಜೇನು ಗೂಡು, ಬೆಟ್ಟದ ಹೂ, ಮನಸೆಲ್ಲಾ ನೀನೆ ಮತ್ತು ರಾಜಿ ಧಾರಾವಾಹಿಗಳ ನಟ- ನಟಿಯರು ತಮ್ಮ ತಾಯಂದಿರ ಜೊತೆಯಲ್ಲಿ "ಅಮ್ಮ" ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
4/ 8
ತಮ್ಮ ಕಂಠದಿಂದಲೇ ಜನಪ್ರಿಯವಾಗಿರೋ ನಟ ವಸಿಷ್ಠ ಸಿಂಹ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ತಮ್ಮ ತಾಯಿಯನ್ನು ನೆನದು ಭಾವುಕರಾಗಿದ್ದಾರೆ.
5/ 8
ದಿಯಾ ಚಿತ್ರದ ನಟಿ ಖುಷಿ, ತಮ್ಮ ಮಗಳ ಜೊತೆಯಲ್ಲಿ ಸ್ಪೆಷಲ್ ಪರ್ಫಾಮೆನ್ಸ್ ನೀಡಿದ್ದಾರೆ. ದಿಯಾ ಚಿತ್ರದ ಮೂಲಕ ಜನರ ಮನಗೆದ್ದಿರೋ ಖುಷಿ ತಮ್ಮ ಮಗಳ ಜೊತೆಗಿನ ಖುಷಿ ಹಂಚಿಕೊಂಡಿದ್ದಾರೆ.
6/ 8
ಈ ಎಲ್ಲಾ ಕಲಾವಿದರೊಂದಿಗೆ ನಟ ಶರಣ್, ನಟಿ ಭವ್ಯ ಮತ್ತು ನಿರ್ದೇಶಕ ಸುನಿ ಸಹ “ಅಮ್ಮ.. ಹ್ಯಾಪಿ ಮದರ್ಸ್ ಡೇ” ಕಾರ್ಯಕ್ರಮದ ಭಾಗವಾಗಿದ್ದಾರೆ.
7/ 8
ಇವರೊಂದಿಗೆ ನಟಿ ಅನು ಪ್ರಭಾಕರ್ ಮತ್ತು ಅವರ ತಾಯಿ ಗಾಯತ್ರಿ ಪ್ರಭಾಕರ್ ತಮ್ಮ ಬಾಂಧವ್ಯದ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
8/ 8
ಮೇ 8ರಂದು ಭಾನುವಾರ, ಸಂಜೆ 6 ಗಂಟೆಗೆ ಅಮ್ಮಂದಿರ ದಿನದ ಈ ವಿಶೇಷ ಕಾರ್ಯಕ್ರಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.