ಸ್ಟಾರ್ ಸುವರ್ಣ ಭಕ್ತಿಪೂರ್ವಕ ಧಾರಾವಾಹಿಗಳನ್ನು ನೀಡುತ್ತಾ ಬಂದಿದೆ. ಅದರ ಸಾಲಿಗೆ ಈಗ ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಧಾರಾವಾಹಿ ಪ್ರಸಾರವಾಗಲಿದೆ.
2/ 8
ಸೋಮವಾರದಿಂದ ಪ್ರತಿ ದಿನ ರಾತ್ರಿ 8.30ಕ್ಕೆ ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಧಾರಾವಾಹಿ ಪ್ರಸಾರವಾಗಲು ಸಜ್ಜಾಗಿ ನಿಂತಿದೆ. ರೇಣುಕಾ ಯಲ್ಲಮ್ಮನ ಪವಾಡವನ್ನು ನೀವು ಕಣ್ತುಂಬಿಕೊಳ್ಳಬಹುದು.
3/ 8
ಇಬ್ಬರ ರೂಪ ಬೇರೆ ಬೇರೆ ಆತ್ಮ ಒಂದೇ. ದುಷ್ಟ ಸಂಹಾರಕ್ಕೆ ಅವತಾರ ಎತ್ತಿದ್ದಾರೆ ರೇಣುಕಾ ಯಲ್ಲಮ್ಮ. ಭಕ್ತಿಪೂರ್ವಕ ಸೀರಿಯಲ್ ಜನವರಿ ಜನವರಿ 23 ರಿಂದ ಪ್ರಸಾರವಾಗುತ್ತೆ.
4/ 8
ರೇಣುಕಾ ಅರಮನೆಯಲ್ಲಿ ಬೆಳೆದ ರಾಜಕುಮಾರಿ. ಆಕೆ ಕ್ಷತ್ರಿಯ ಗುಣಗಳನ್ನು ಕಲಿಯುತ್ತ ಬೆಳೆದಿದ್ದಾಳೆ. ಆಕೆ ತಂದೆ ಸಹ ಪ್ರಜೆಗಳನ್ನು ಉಳಿಸುವ ಜವಾಬ್ದಾರಿ ನೀಡುತ್ತಿದ್ದಾರೆ.
5/ 8
ಯಲ್ಲಮ್ಮ ಬಡ ಕುಟುಂಬದಲ್ಲಿ ಜನಿಸಿದ್ದಾಳೆ. ಅವಳಿಗೆ ಕೆಲ ಗುಣಗಳು ರಕ್ತಗತವಾಗಿ ಬಂದಿರುತ್ತದೆ. ಯಲ್ಲಮ್ಮ ಪ್ರಕೃತಿಯ ಮಡಿಲಲ್ಲಿ ಬೆಳೆದಿದ್ದರು ಬೇರೆಯವರ ಕಷ್ಟಕ್ಕೆ ಸ್ಪಂದಿಸುತ್ತಾಳೆ.
6/ 8
ಲೋಕ ಕಲ್ಯಾಣಕ್ಕಾಗಿ, ದುಷ್ಟ ಸಂಹಾರಕ್ಕಾಗಿ ಈ ರೇಣುಕಾ ಯಲ್ಲಮ್ಮ ಜನಿಸಿದ್ದಾರೆ. ಮುಂಬರುವ ಕಷ್ಟ ಕೋಟಲೆಗಳನ್ನು ನಿವಾರಿಸುವುದೇ ಈ ದೇವರುಗಳ ಕೆಲಸ.
7/ 8
ರೇಣುಕಾ ಪಾತ್ರವನ್ನು 777 ಚಾರ್ಲಿ ಸಿನಿಮಾ ನಟಿ ಶಾರ್ವರಿ ಅವರು ನಿರ್ವಹಿಸುತ್ತಿದ್ದಾರೆ. ಅರಸನ ಮಗಳಾಗಿರುವ ರೇಣುಕಾ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ನೋಡಬೇಕು.
8/ 8
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲು ರೆಡಿಯಾಗಿರುವ ರೇಣುಕಾ ಯಲ್ಲಮ್ಮ ಧಾರಾವಾಹಿ ಬಗ್ಗೆ ಹಲವು ಜನ ಮಾತನಾಡಿದ್ದಾರೆ. ರೇಣುಕಾ ಯಲ್ಲಮ್ಮ ಪವಾಡದ ಬಗ್ಗೆ ಮಾತನಾಡಿದ್ದಾರೆ.