ಆದರೆ ಅರ್ಜುನ್ ತಾಯಿ ಸೌದಾಮಿನಿಗೆ ರಾಣಿಯ ಮೇಲೆ ದ್ವೇಷವಿರುತ್ತೆ ಇಂತಹ ಪರಿಸ್ಥಿತಿಯಲ್ಲಿ ಅರ್ಜುನ್ ತನ್ನ ಪ್ರೀತಿಯನ್ನು ಹೇಗೆ ಪಡೆದುಕೊಳ್ಳುತ್ತಾನೆ, ಅಂದು ನಡೆದ ಘಟನೆಗೆ ಯಾರು ಕಾರಣ ಎಂಬುದನ್ನು ರಾಣಿ ಹೇಗೆ ಕಂಡುಕೊಳ್ಳುತ್ತಾಳೆ, ರಾಣಿ ಶ್ರವಣ ದೋಷ ಹೊಂದಿರುವವವಳು ಎಂಬ ಸತ್ಯ ಅರ್ಜುನ್ ಗೆ ಗೊತ್ತಾದ್ರೆ ಮುಂದೇನಾಗುತ್ತೆ ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.
'ರಾಣಿ' ಧಾರಾವಾಹಿಯು ಒಂದು ಸುಂದರವಾದ ತಾರಾಬಳಗವನ್ನು ಹೊಂದಿದ್ದು, ನಾಯಕನ ಪಾತ್ರದಲ್ಲಿ ಪ್ರವೀಣ್ ಅಥರ್ವ, ನಾಯಕಿಯಾಗಿ ಚಂದನ ಎಮ್ ರಾವ್ ಹಾಗೂ ಸೌದಾಮಿನಿ ಪಾತ್ರದಲ್ಲಿ ಸ್ವಾತಿ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ/ನಿರ್ಮಾಪಕರಾದ ರಾಮ್ ಜೀ ಅವರ ಸಾರಥ್ಯದಲ್ಲಿ ಈ ಧಾರಾವಾಹಿಯನ್ನು ಬಾನಿಜೆ ಏಷಿಯಾ ಸಂಸ್ಥೆ ನಿರ್ಮಿಸುತ್ತಿದ್ದು, ಸಹನಿರ್ಮಾಣದ ಜವಾಬ್ದಾರಿಯನ್ನು ಗಗನ ಎಂಟರ್ ಪ್ರೈಸಸ್ ಸಂಸ್ಥೆ ಹೊತ್ತಿಕೊಂಡಿದೆ.