ಇತ್ತಿಚೇಗೆ ರಾಣಿ ಧಾರಾವಾಹಿ ಶುರುವಾಗಿದೆ. 'ರಾಣಿ' ಧಾರಾವಾಹಿಯು ಒಂದು ಸುಂದರವಾದ ತಾರಾಬಳಗವನ್ನು ಹೊಂದಿದ್ದು, ನಾಯಕನ ಪಾತ್ರದಲ್ಲಿ ಪ್ರವೀಣ್ ಅಥರ್ವ, ನಾಯಕಿಯಾಗಿ ಚಂದನ ಎಮ್ ರಾವ್ ಹಾಗೂ ಸೌದಾಮಿನಿ ಪಾತ್ರದಲ್ಲಿ ಸ್ವಾತಿ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ/ನಿರ್ಮಾಪಕರಾದ ರಾಮ್ ಜೀ ಅವರ ಸಾರಥ್ಯದಲ್ಲಿ ಈ ಧಾರಾವಾಹಿಯನ್ನು ಬಾನಿಜೆ ಏಷಿಯಾ ಸಂಸ್ಥೆ ನಿರ್ಮಿಸುತ್ತಿದ್ದು, ಸಹನಿರ್ಮಾಣದ ಜವಾಬ್ದಾರಿಯನ್ನು ಗಗನ ಎಂಟರ್ ಪ್ರೈಸಸ್ ಸಂಸ್ಥೆ ಹೊತ್ತಿಕೊಂಡಿದೆ.