ಸ್ಟಾರ್ ಸುವರ್ಣ ವಾಹಿನಿಯಲ್ಲಿ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಗ್ರ್ಯಾಂಡ್ ಆಗಿ ಆಚರಣೆ ಮಾಡಿದ್ದಾರೆ. ಸುವರ್ಣ ಸಂಕ್ರಾಂತಿ ಸಂಭ್ರಮಕ್ಕೆ ನಟ ಡಾಲಿ ಧನಂಜಯ್ ಅವರು ಬಂದಿದ್ದಾರೆ.
2/ 8
ಇನ್ನು ಕಾರ್ಯಕ್ರಮ ಭಾನುವಾರ ಮಧ್ಯಾಹ್ನ 3 ಗಂಟೆಗೆ ಪ್ರಸಾರವಾಗಲಿದೆ. ನಟಿ ಅಮೃತಾ ಅಯ್ಯಂಗಾರ್ ಅವರು ಸುವರ್ಣ ಸಂಕ್ರಾಂತಿ ಸಂಭ್ರಮದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅವರ ತಾಯಿಯನ್ನು ಸಪ್ರ್ರೈಸ್ ಆಗಿ ಕರೆಸಲಾಗಿದೆ.
3/ 8
ಬಿಗ್ ಬಾಸ್ ಸೀಸನ್ 09ರಲ್ಲಿ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದ ಅನುಪಮಾ ಗೌಡ ಕಾರ್ಯಕ್ರದಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ನಿರೂಪಕ ಶಿವರಾಜ್ ಆಡಿಸಿದ ಗೇಮ್ ಆಡಿ ಎಂಜಾಯ್ ಮಾಡಿದ್ದಾರೆ.
4/ 8
ಇನ್ನು ಬೊಂಬಾಟ್ ಭೋಜನ ಕಾರ್ಯಕ್ರಮದ ಕಲಾವಿದರು ಸಹ ಕಾರ್ಯಕ್ರಮಲ್ಲಿ ಭಾಗವಹಿಸಿದ್ದರು. ಸಿಹಿ ಕಹಿ ಚಂದ್ರು ಅವರು ಡ್ಯಾನ್ಸ್ ಮಾಡಿ ಖುಷಿ ಪಟ್ರು.
5/ 8
ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ್ ಸಹ ಸುವರ್ಣ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದಿತಿ ಅವರಿಗೆ ಮದುವೆ ಆದ ಮೇಲೆ ಮೊದಲ ಸಂಕ್ರಾಂತಿ ಹಬ್ಬ ಇದು.
6/ 8
ಇವರಷ್ಟೇ ಅಲ್ಲ, ನಟ ಪೃಥ್ವಿ ಅಂಬಾರ್ ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಹಳಷ್ಟು ಕಲಾವಿದರು ಬಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹಬ್ಬವನ್ನು ಎಂಜಾಯ್ ಮಾಡಿದ್ದಾರೆ.
7/ 8
ಬಿಗ್ ಬಾಸ್ ಸೀಸನ್ 09 ರ ಸ್ಪರ್ಧಿಯಾಗಿದ್ದ ಅಮೂಲ್ಯ ಗೌಡ ಸುವರ್ಣ ಸಂಕ್ರಾಂತಿ ಸಂಭ್ರಮದಲ್ಲಿ ಮುದ್ದಾಗಿ ಡ್ಯಾನ್ಸ್ ಮಾಡಿದ್ದಾರೆ. ತಾವು ಮದುವೆ ಆಗಬೇಕು ಎಂದುಕೊಂಡಿರುವ ಹುಡುಗನ ಬಗ್ಗೆ ಹೇಳಿದ್ದಾರೆ.
8/ 8
ಸ್ಟಾರ್ ಸುವರ್ಣದಲ್ಲಿ ಈ ಬಾರಿ ಸಂಕ್ರಾಂತಿ ಸಂಭ್ರಮ ಅದ್ಧೂರಿಯಾಗಿ ನಡೆದಿದೆ. ಅಲ್ಲದೇ ಸಂಜೆ ಕಾಂತಾರ ಸಿನಿಮಾ ಬೇರೆ ಇದೆ. ನಿಮ್ಮನ್ನು ರಂಜಿಸಲು ಸ್ಟಾರ್ ಸುವರ್ಣ ಹಲವು ಕಾರ್ಯಕ್ರಮಗಳನ್ನು ಮಾಡ್ತಾ ಇದೆ.