Actress Akshatha: ಕತೆಯೊಂದು ಶುರುವಾಗಿದೆ ಕೃತಿ ಕತೆ, ಅಕ್ಷತಾ ಜರ್ನಿ ಹೇಗಿತ್ತು ಗೊತ್ತಾ?

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಕತೆಯೊಂದು ಶುರುವಾಗಿದೆ ಕೃತಿ ಯಾರು? ಅಕ್ಷತಾ ದೇಶಪಾಂಡೆ ರಿಯಲ್ ಸ್ಟೋರಿ ಇಲ್ಲಿದೆ ನೋಡಿ.

First published:

  • 18

    Actress Akshatha: ಕತೆಯೊಂದು ಶುರುವಾಗಿದೆ ಕೃತಿ ಕತೆ, ಅಕ್ಷತಾ ಜರ್ನಿ ಹೇಗಿತ್ತು ಗೊತ್ತಾ?

    ಸ್ಟಾರ್ ಸುವರ್ಣದಲ್ಲಿ ಸಂಜೆ 7 ಗಂಟೆಗೆ ಕತೆಯೊಂದು ಶುರುವಾಗಿದೆ ಧಾರಾವಾಹಿ ಪ್ರಸಾರವಾಗ್ತಿದೆ. ಆ ಧಾರಾವಾಹಿಯ ಎಲ್ಲಾ ಪಾತ್ರಗಳು ಜನರಿಗೆ ಹತ್ತಿರವಾಗಿವೆ. ಅದೇ ರೀತಿ ನಟಿ ಕೃತಿ ಪಾತ್ರ ಅಭಿಮಾನಿಗಳನ್ನು ಸೆಳೆದಿದೆ.

    MORE
    GALLERIES

  • 28

    Actress Akshatha: ಕತೆಯೊಂದು ಶುರುವಾಗಿದೆ ಕೃತಿ ಕತೆ, ಅಕ್ಷತಾ ಜರ್ನಿ ಹೇಗಿತ್ತು ಗೊತ್ತಾ?

    ಧಾರಾವಾಹಿಯಲ್ಲಿ ಕೃತಿ ಪಾತ್ರ ತುಂಬಾ ವಿಭಿನ್ನವಾಗಿದೆ. ಅಕ್ಕ ಮದುವೆಯಾಗಬೇಕಿದ್ದ ಹುಡುಗನನ್ನು ಕೃತಿ ಮದುವೆಯಾಗಿದ್ದಾಳೆ. ತನ್ನದಲ್ಲದ ತಪ್ಪಿಗೆ ಕೃತಿ ಯಾವತ್ತೂ ಕ್ಷಮೆ ಕೇಳಲ್ಲ. ನ್ಯಾಯದ ಪರ ನಿಲ್ಲುವಂತಹ ಪಾತ್ರ.

    MORE
    GALLERIES

  • 38

    Actress Akshatha: ಕತೆಯೊಂದು ಶುರುವಾಗಿದೆ ಕೃತಿ ಕತೆ, ಅಕ್ಷತಾ ಜರ್ನಿ ಹೇಗಿತ್ತು ಗೊತ್ತಾ?

    ಕೃತಿಯ ನಿಜವಾದ ಹೆಸರು ಅಕ್ಷತಾ ದೇಶಪಾಂಡೆ. ಬೆಳಗಾವಿಯವರು. ಇವರು ಪಿಯುಸಿ ಮಾಡುವಾಗ ಏನು ಮಾಡಬೇಕೆಂದು ಅಷ್ಟೊಂದು ಐಡಿಯ ಇರಲಿಲ್ವಂತೆ. ಓದಿನಲ್ಲೂ ಟಾಪರ್ ಅಲ್ವಂತೆ.

    MORE
    GALLERIES

  • 48

    Actress Akshatha: ಕತೆಯೊಂದು ಶುರುವಾಗಿದೆ ಕೃತಿ ಕತೆ, ಅಕ್ಷತಾ ಜರ್ನಿ ಹೇಗಿತ್ತು ಗೊತ್ತಾ?

    ಅಕ್ಷತಾ ಅವರಿಗೆ ನಟನೆಯಲ್ಲಿ ಆಸಕ್ತಿಯಿತ್ತಂತೆ. ಆದ್ರೆ ಹೇಗೆ ಕಿರುತೆರೆಗೆ ಬರುವುದು ಎಂದು ಗೊತ್ತಿರಲಿಲ್ವಂತೆ. ಫೇಸ್‍ಬುಕ್‍ನಲ್ಲಿ ಸೀರಿಯಲ್‍ನಲ್ಲಿ ಅವಕಾಶ ಇದೆ ಎಂದು ಮೆಸೇಜ್ ಬಂದಿತ್ತಂತೆ. ಆದ್ರೆ ಮೊದಲು ನಂಬಲಿಲ್ವಂತೆ. ಎರಡನೇ ಬಾರಿ ಬಂದಾಗ ಆಡಿಷನ್‍ಗೆ ಹೋಗಿದ್ರಂತೆ.

    MORE
    GALLERIES

  • 58

    Actress Akshatha: ಕತೆಯೊಂದು ಶುರುವಾಗಿದೆ ಕೃತಿ ಕತೆ, ಅಕ್ಷತಾ ಜರ್ನಿ ಹೇಗಿತ್ತು ಗೊತ್ತಾ?

    'ಮೊದಲ ಆಡಿಷನ್‍ನಲ್ಲಿಯೇ ನೆಗೆಟಿವ್ ರೋಲ್‍ಗೆ ಸೆಲೆಕ್ಟ್ ಆಗಿದ್ದೆ. ವರ್ಕ್ ಶಾಪ್ ಇರುತ್ತೆ ಎಂದಾಗ ಬ್ಯಾಗ್ ತೆಗೆದುಕೊಂಡು ಬೆಳಗಾವಿಯಿಂದ ಬೆಂಗಳೂರಿಗೆ ಬಂದೆ. ಆದ್ರೆ ಆಮೇಲೆ ಮೂರು ದಿನದಲ್ಲಿಯೇ ನನ್ನ ಪಾತ್ರಕ್ಕೆ ರಿಪ್ಲೇಸ್ ಮಾಡಿದ್ರು. ತಂಗಿ ಪಾತ್ರಕ್ಕೆ ಹೇಳಿದ್ರು. ನಾನು ಒಪ್ಪಲಿಲ್ಲ. ಮತ್ತೆ ಬೆಳಗಾವಿಗೆ ವಾಪಸ್ ಬಂದೆ' ಎಂದು ಅಕ್ಷತಾ ಹೇಳಿದ್ದಾರೆ.

    MORE
    GALLERIES

  • 68

    Actress Akshatha: ಕತೆಯೊಂದು ಶುರುವಾಗಿದೆ ಕೃತಿ ಕತೆ, ಅಕ್ಷತಾ ಜರ್ನಿ ಹೇಗಿತ್ತು ಗೊತ್ತಾ?

    ಮತ್ತೊಂದು ಸೀರಿಯಲ್‍ಗೆ ಸೆಲೆಕ್ಟ್ ಆದೆ. 'ಹಳೆ ಸೀರಿಯಲ್‍ಗೆ ಸಾಕಷ್ಟು ಹಣ ಖರ್ಚು ಮಾಡಿದ್ದೆ. ಆಡಿಷನ್‍ಗೆ ಅಂತ ಮತ್ತೆ ಕರೆದಾಗ ನಾನು ಬರಲ್ಲ, ಫೈನಲ್ ಸೆಲೆಕ್ಟ್ ಆದ್ಮೇಲೆ ಹೇಳಿ ಅಂದಿದ್ದೆ. ಯಾಕಂದ್ರೆ, ಮತ್ತೆ ಮತ್ತೆ ಅಪ್ಪ ಅಮ್ಮನ ಬಳಿ ಹಣ ತೆಗೆದುಕೊಳ್ಳುವುದಕ್ಕೆ ನನಗೆ ಇಷ್ಟವಿರಲಿಲ್ಲ. ಇಲ್ಲ ನೀವೇ ಸೆಲೆಕ್ಟ್ ಆಗಿದ್ದೀರಿ ಬನ್ನಿ ಎಂದಾಗ, ಹೋದೆ. ಅಲ್ಲಿಂದ ನನ್ನ ಜರ್ನಿ ಶುರುವಾಯ್ತು' ಎಂದು ಅಕ್ಷತಾ ಹೇಳಿಕೊಂಡಿದ್ದಾರೆ.

    MORE
    GALLERIES

  • 78

    Actress Akshatha: ಕತೆಯೊಂದು ಶುರುವಾಗಿದೆ ಕೃತಿ ಕತೆ, ಅಕ್ಷತಾ ಜರ್ನಿ ಹೇಗಿತ್ತು ಗೊತ್ತಾ?

    ಕಥೆಯೊಂದು ಶುರುವಾಗಿದೆ ಧಾರಾವಾಹಿ ಒಪ್ಪಿಕೊಳ್ಳುವುದಕ್ಕೆ ಕಾರಣ ಸ್ಟಾರ್ ಸುವರ್ಣ. ಮತ್ತೊಂದು ಕಾರಣ ಅನಿಲ್ ಕೋರಮಂಗಲ ಸರ್. ಅಮೃತ ವರ್ಷಿಣಿ ಧಾರಾವಾಹಿಯಲ್ಲೂ ಇವರೇ ಡೈರೆಕ್ಟರ್. ಅವರೇ ಕೇಳಿದಾಗ ನಾನು ಒಪ್ಪಿಕೊಂಡೆ. ಕೃತಿ ಪಾತ್ರ ನನಗೆ ಹತ್ತಿರವಾಗಿದೆ ಎಂದು ಹೇಳಿದ್ದಾರೆ.

    MORE
    GALLERIES

  • 88

    Actress Akshatha: ಕತೆಯೊಂದು ಶುರುವಾಗಿದೆ ಕೃತಿ ಕತೆ, ಅಕ್ಷತಾ ಜರ್ನಿ ಹೇಗಿತ್ತು ಗೊತ್ತಾ?

    ಸದ್ಯ ಧಾರಾವಾಹಿಯಲ್ಲಿ ಕೃತಿ ತನ್ನ ಅಕ್ಕ ವರ್ಣಿಕಾಳನ್ನು ಮದುವೆ ಮಾಡಿಸಿದ್ದಾಳಡ. ಆದ್ರೆ ಅಕ್ಕ ತಾನು ಗರ್ಭಿಣಿ ಎಂದು ಸುಳ್ಳು ಹೇಳಿ ಮದುವೆಯಾಗಿರುವುದು ಗೊತ್ತಾಗಿದೆ. ಅದಕ್ಕೆ ಕೃತಿ ಬೇಸರ ಮಾಡಿಕೊಂಡಿದ್ದಾಳೆ.

    MORE
    GALLERIES