ಸದಾ ಹೊಸ ಬಗೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದೆ ಸ್ಟಾರ್ ಸುವರ್ಣ ವಾಹಿನಿ. ಸ್ಟಾರ್ ಸುವರ್ಣ ವಾಹಿನಿಯ ಬೊಂಬಾಟ್ ಭೋಜನ ಕಾರ್ಯಕ್ರಮ ಕಿರುತೆರೆ ವೀಕ್ಷಕರ ಅಚ್ಚುಮೆಚ್ಚಿನ ಅಡುಗೆ ಕಾರ್ಯಕ್ರಮ. ಪಾಕ ಪ್ರವೀಣ ಸಿಹಿಕಹಿ ಚಂದ್ರು ಅವರು ನಡೆಸಿಕೊಡುವ ಈ ಕಾರ್ಯಕ್ರಮ ವಿನೂತನ ಅಡುಗೆ, ವಿಶೇಷ ಅತಿಥಿಗಳಿಂದಾಗಿ ಕಿರುತೆರೆಯ ಮಧ್ಯಾಹ್ನದ ಮನರಂಜನೆಯಲ್ಲಿ ಅಗ್ರಗಣ್ಯವಾಗಿದೆ. ಬೊಂಬಾಟ್ ಭೋಜನದಲ್ಲಿ ಈ ವಾರ ಪೂರ್ತಿ ಸೆಲಬ್ರಿಟಿಗಳು ಭಾಗವಹಿಸಲಿದ್ದಾರೆ. ಮೇ.2ರಂದು ಹಿರಿಯ ನಟ ದೊಡ್ಡಣ್ಣ , ಮೇ 3 ರಂದು ರಂಗಭೂಮಿ ನಿರ್ದೇಶಕರಾದ ಝಾಫರ್ ಮೋಹಿಯುದ್ದೀನ್ ಬರಲಿದ್ದಾರೆ. ಮೇ 4ರಂದು ದಿಯಾ ಸಿನಿಮಾ ಖ್ಯಾತಿಯ ನಾಯಕ ನಟಿ ಖುಷಿ, ಮೇ 5 ಮತ್ತು 6 ರಂದು ಹಿರಿಯ ನಟಿ ಭವ್ಯ ಮತ್ತು ನಿರ್ದೇಶಕ ಸಿಂಪಲ್ ಸುನಿ ಬಂದು ಅಡುಗೆ ಮಾಡಲಿದ್ದಾರೆ. ಮೇ 7 ರಂದು ನಟಿ ಸಂಜನ ಆನಂದ್ ಬೊಂಬಾಟ್ ಭೋಜನದಲ್ಲಿ ತಮ್ಮ ಕೈರುಚಿ ತೋರಿಸಲಿದ್ದಾರೆ. ಸೋಮವಾರಂದಿಂದ ಶನಿವಾರ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ವಿಶೇಷ ಅತಿಥಿಗಳ ನಳಪಾಕ ನೋಡಲು ಮಿಸ್ ಮಾಡಬೇಡಿ.