ಸ್ಟಾರ್ ಸುವರ್ಣದ ಬೊಂಬಾಟ್ ಭೋಜನ ಮಹಿಳೆಯರಿಗೆ ಮೋಡಿ ಮಾಡಿತ್ತು. ಮಧ್ಯಾಹ್ನ 12 ಗಂಟೆಯಾದ್ರೆ ಸಾಕು, ಎಲ್ಲರೂ ತಪ್ಪದೇ ಸ್ಟಾರ್ ಸುವರ್ಣ ನೋಡ್ತಾರೆ.
2/ 8
ಈಗ ಮತ್ತೆ ಮಹಿಳೆಯರಿಗೆ ರುಚಿ ರುಚಿಯಾದ ಅಡುಗೆ ಹೇಳಿಕೊಡಲು ಬೊಂಬಾಟ್ ಭೋಜನ ಸೀಸನ್ 3 ಬರ್ತಾ ಇದೆ. ಸಿಹಿ ಕಹಿ ಚಂದ್ರು ಅವರು ಮತ್ತಷ್ಟು ಅಡುಗೆಗಳನ್ನು ಹೇಳಿಕೊಡಲಿದ್ದಾರೆ.
3/ 8
ನಟರಾಗಿ ಜನರ ಮನಸ್ಸು ಗೆದ್ದಿದ್ದ ಸಿಹಿ ಕಹಿ ಚಂದ್ರು ಅವರು ತಮ್ಮ ರುಚಿಕರ ಅಡುಗೆ ಮೂಲಕವೂ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಿನನಿತ್ಯ ಬಳಸುವ, ಕೈಗೆಟುಕುವ ಸಾಮಾಗ್ರಿಗಳಲ್ಲೇ ರುಚಿಕರ ಅಡುಗೆ ಮಾಡುತ್ತಾರೆ.
4/ 8
ಬೊಂಬಾಟ್ ಭೋಜನದ ಬಗ್ಗೆ ಮಾಹಿತಿ ನೀಡಿರುವ ಸಿಹಿ ಕಹಿ ಚಂದ್ರು ಅವರು, ಸ್ಟಾರ್ ಸುವರ್ಣ ವಾಹಿನಿಯಲ್ಲಿ 2019 ರಲ್ಲಿ ಬೊಂಬಾಟ್ ಭೋಜನ ಕಾರ್ಯಕ್ರಮದ ಮೊದಲ ಸೀಸನ್ ಶುರು ಮಾಡಿದ್ದೆ. ಎರಡನೇ ಸೀಸನ್ ಕೂಡ ಮುಕ್ತಾಯವಾಗಿ, ಮೂರನೇ ಸೀಸನ್ ಶುರು ಮಾಡಿದ್ದೇವೆ ಎಂದು ಹೇಳಿದ್ದಾರೆ.
5/ 8
ಈ ಸೀಸನ್ನಲ್ಲಿ ಬಯಲೂಟ, ಸವಿಯೂಟ, ಮನೆ ಊಟ, ಅಂದ ಚಂದ, ಅಂಗೈಯಲ್ಲಿ ಆರೋಗ್ಯ, ಟಿಪ್ ಟಿಪ್ ಟಿಪ್ ಹಾಗೂ ಅತಿಥಿ ದೇವೋಭವ ಎಂಬ ಏಳು ಬಗೆಯ ವಿಶೇಷತೆಗಳನ್ನು ಒಳಗೊಂಡಿದೆ.
6/ 8
ಇನ್ನು ಕಳೆದ ಸೀಸನ್ ನಂತೆ ಆರೋಗ್ಯದ ಕುರಿತು ಮನೆಮದ್ದುಗಳನ್ನು ಡಾ. ಗೌರಿ ಸುಬ್ರಹ್ಮಣ್ಯ ತಿಳಿಸುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿದ ಚಿಕ್ಕ ಚಿಕ್ಕ ವಿಷಯಗಳಿಗೆ ಆಸ್ಪತ್ರೆಗೆ ಹೋಗಬೇಡಿ. ಅದಕ್ಕೆ ಮನೆಯಲ್ಲೇ ಅನೇಕ ಮದ್ದುಗಳಿವೆ ಎಂದು ಡಾ. ಗೌರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.
7/ 8
ಸೋಮವಾರದಿಂದ ಶನಿವಾರದವರೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಬೊಂಬಾಟ್ ಭೋಜನ ಸೀಸನ್ 3 ಪ್ರಸಾರವಾಗಲಿದೆ. ಕಾರ್ಯಕ್ರಮದ ಕೊನೆಯಲ್ಲಿ ದುಂಡಿರಾಜ್ ಅವರ ಹನಿಗವನನ್ನು ಹೇಳುತ್ತಾರೆ.
8/ 8
ಸಿಹಿಕಹಿ ಚಂದ್ರು ಅವರು ಈ ಎಲ್ಲಾ ವಿಷಯಗಳನ್ನು ಸುದ್ದಿಗೋಷ್ಠಿ ಮಾಡಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಾಹಿತಿ ದುಂಡಿರಾಜ್, ಸಿಹಿ ಕಹಿ ಗೀತಾ, ಖುಷಿ, ಶ್ರೀಪಾದ, ಪರಿ ಮುಂತಾದವರು ಹಾಜರಿದ್ದರು.