ಮನೋರಂಜನ್ ರವಿಚಂದ್ರನ್-ಸ್ಯಾಂಡಲ್‍ವುಡ್‍ನ ಅದ್ಭುತ ಕಲಾವಿದ ರವಿಚಂದ್ರನ್ ವರು ಪುತ್ರ ಮನೋರಂಜನ್ ರವಿಚಂದ್ರನ್ ಸಹ ಕನ್ನಡ ಸಿನಿಮಾ ರಂಗದಲ್ಲಿ ನೆಲೆಯೂರಲು ಆಗಿಲ್ಲ. 'ಸಾಹೇಬ' ಚಿತ್ರದ ಮೂಲಕ ಮನೋರಂಜನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಅದು ಅಷ್ಟು ಹಿಟ್ ಆಗಲಿಲ್ಲ.ನಂತರ ಬೃಹಸ್ಪತಿ, ಮುಗಿಲ್ ಪೇಟೆ, ಪ್ರಾರಂಭ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಅವು ಕೂಡ ಹಿಟ್ ಆಗಲಿಲ್ಲ.
ಗುರುರಾಜ್ ಜಗ್ಗೇಶ್- ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್. ಇವರು ಬಾಲನಟನಾಗಿ `ಬೇಡ ಕೃಷ್ಣ ರಂಗಿನಾಟ' ಚಿತ್ರದಲ್ಲಿ ನಟಿಸಿದ್ದರು. ಗಿಲ್ಲಿ ಚಿತ್ರದ ಮೂಲಕ ಕನ್ನಡ ಸಿನಿಮಾಗೆ ನಾಯಕನಾಗಿ ಎಂಟ್ರಿ ಕೊಟ್ಟರು. ಜಗ್ಗೇಶ್ ನಿರ್ದೇಶನದ ಗುರು ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ನಂತರ ಸಂಕ್ರಾತಿ, ಪೈಪೆÇೀಟಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದ್ರೆ ಆ ಸಿನಿಮಾಗಳೂ ಸಕ್ಸಸ್ ಕಾಣಲಿಲ್ಲ.
ನಿಖಿಲ್ ಕುಮಾರಸ್ವಾಮಿ- ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪುತ್ರ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮೊಮ್ಮಗ - ನಿಖಿಲ್ ಗೌಡ. `ಜಾಗ್ವಾರ್' ಚಿತ್ರದ ಮೂಲಕ ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.'ಸೀತಾರಾಮ ಕಲ್ಯಾಣ',`ಕುರುಕ್ಷೇತ್ರ',ರೈಡರ್ ಸಿನಿಮಾದಲ್ಲಿ ನಟಿಸಿದ್ದರು. ಆದ್ರೂ ಸಿನಿಮಾ ಕ್ಷೇತ್ರದಲ್ಲಿ ಅಷ್ಟು ಹೆಸರು ಗಳಿಸಲು ಸಾಧ್ಯವಾಗಿಲ್ಲ.