ತ್ರಿಬಲ್ ಆರ್ ಸಿನಿಮಾ ರಿಲೀಸ್ ಆಗಿ ಸಖತ್ ಟ್ರೆಂಡ್ ಆಗಿದೆ. ಎಸ್.ಎಸ್. ರಾಜಮೌಳಿ ಅವರ ನಿರ್ದೇನದಲ್ಲಿ ಮೂಡಿ ಬಂದ ಸಿನಿಮಾ ಸಖತ್ ಕ್ರೇಜ್ ಸೃಷ್ಟಿಮಾಡಿತು.
2/ 8
ಈ ಸಿನಿಮಾದಲ್ಲಿ ರಾಮ್ ಚರಣ್ ಹಾಗೂ ಜೂನಿಯರ್ ಎನ್.ಟಿ.ಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ಸ್ ಅಜಯ್ ದೇವಗನ್ ಹಾಗೂ ನಟಿ ಆಲಿಯಾ ಭಟ್ ಕೂಡಾ ನಟಿಸಿದ್ದಾರೆ.
3/ 8
ಜಪಾನ್ನಲ್ಲಿ ತ್ರಿಬಲ್ ಆರ್ ಸಿನಿಮಾ ಸಖತ್ ಕ್ರೇಜ್ ಹುಟ್ಟಿಸಿದೆ. ಈಗ ಅಮೆರಿಕಾದಲ್ಲಿಯೂ ತ್ರಿಬಲ್ ಆರ್ ಪ್ರೇಕ್ಷಕರ ಮನಸು ಗೆದ್ದಿದೆ.
4/ 8
ಬಿಯಾಂಡ್ ಫೆಸ್ಟ್ ಟ್ವಿಟರ್ ಖಾತೆಯಲ್ಲಿ ಈ ಸುದ್ದಿ ಹಂಚಿಕೊಳ್ಳಲಾಗಿದೆ. ಐಮ್ಯಾಕ್ಸ್ ಹಾಗೂ ಚೈನೀಸ್ ಥಿಯೇಟರ್ನಲ್ಲಿ ಬರೀ 98 ಸೆಕೆಂಡ್ನಲ್ಲಿ ತ್ರಿಬಲ್ ಆರ್ ಸಿನಿಮಾ ಟಿಕೆಟ್ ಖಾಲಿಯಾಗಿದೆ ಎಂದು ಟ್ವೀಟ್ ಮಾಡಲಾಗಿದೆ.
5/ 8
ಸಿನಿಮಾ ಭರ್ಜರಿ ಹಿಟ್ ಆಗಿದ್ದು ಇದರ ಹಾಡು ನಾಟು ನಾಟು ಕೂಡಾ ವೈರಲ್ ಆಗಿದೆ. ಇನ್ನು ಸಿನಿಮಾದ ಲೀಡ್ ನಟರ ಹೆಸರನ್ನು ಆಸ್ಕರ್ಗೆ ನಾಮನಿರ್ದೇಶನ ಮಾಡಲಾಗಿದೆ.
6/ 8
ತೆಲುಗಿನ ಇಬ್ಬರು ಲೀಡ್ ನಟರ ಈ ಸಿನಿಮಾ ತ್ರಿಬಲ್ ಆರ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ವ್ಯಾಪಕ ಮೆಚ್ಚುಗೆ ಗಳಿಸಿತು. ಇದು ಬಾಹುಬಲಿ ನಂತರ ಬಿಗ್ ಹಿಟ್ ಆಗಿ ಹೊರಹೊಮ್ಮಿದೆ.
7/ 8
2023ರಲ್ಲಿ ತ್ರಿಬಲ್ ಆರ್ 2 ಸಿನಿಮಾ ರಿಲೀಸ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಸಿನಿಮಾದ ಸೀಕ್ವೆಲ್ ಬಗ್ಗೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
8/ 8
ಆದರೆ ಸಿನಿಮಾ ಯಾವಾಗ ರೆಡಿಯಾಗುತ್ತದೆ, ಯಾರು ಯಾರು ನಟಿಸುತ್ತಾರೆ. ಕಥೆಯ ಟ್ವಿಸ್ಟ್ ಏನು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.