SS Rajamouli: ಖ್ಯಾತ ನಿರ್ದೇಶಕ ರಾಜಮೌಳಿ ಹಾಗೂ ಕುಟುಂಬ ಸದಸ್ಯರಿಗೆ ಕೊರೋನಾ..!
SS Rajamouli: 450 ಕೋಟಿ ರೂ.ಗಳ ಬಜೆಟ್ ನಿರ್ಮಾಣವಾಗುತ್ತಿರುವ ಈ ಚಿತ್ರವು ಭಾರತದ ಅತ್ಯಂತ ದುಬಾರಿ ಸಿನಿಮಾ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ 2021 ರ ಜನವರಿ 8 ರಂದು ಆರ್ಆರ್ಆರ್ ಬಿಡುಗಡೆಯಾಗಲಿದೆ.
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕೊರೋನಾ ಸೋಂಕು ತಗುಲಿದೆ. ಈ ವಿಚಾರವನ್ನು ಖುದ್ದು ಬಾಹುಬಲಿ ನಿರ್ದೇಶಕ ಸೋಷಿಯಲ್ ಮೀಡಿಯಾ ಮೂಲಕ ಖಚಿತ ಪಡಿಸಿದ್ದಾರೆ.
2/ 8
ಈ ಬಗ್ಗೆ ಟ್ವೀಟ್ ಮಾಡಿರುವ ರಾಜಮೌಳಿ, ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಕೆಲ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ನಂತರ ದಿನಗಳಲ್ಲಿ ಔಷಧಿಯಿಂದ ಜ್ವರವು ಕಡಿಮೆಯಾದರೂ ಕೋವಿಡ್-19 ಟೆಸ್ಟ್ ಮಾಡಿಸಿದ್ದೆವು.
3/ 8
ಇದೀಗ ಅದರ ಫಲಿತಾಂಶ ಬಂದಿದ್ದು, ಕೊರೋನಾ ವೈರಸ್ ತಗುಲಿರುವುದು ಕನ್ಫರ್ಮ್ ಆಗಿದೆ. ಹೀಗಾಗಿ ನಾವೆಲ್ಲರೂ ವೈದ್ಯರ ಸಲಹೆಯಂತೆ ಹೋಮ್ ಕ್ವಾರಂಟೈನ್ನಲ್ಲಿರುವುದಾಗಿ ತಿಳಿಸಿದ್ದಾರೆ.
4/ 8
ಇನ್ನು ನಮ್ಮಲ್ಲಿ ಯಾವುದೇ ಕೊರೋನಾ ಲಕ್ಷಣಗಳು ಕಂಡು ಬರಲಿಲ್ಲ ಎಂದಿರುವ ರಾಜಮೌಳಿ, ಅದಾಗ್ಯೂ ಸರ್ಕಾರದ ಸೂಚನೆಯಂತೆ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸುತ್ತಿದ್ದೇವೆ ಎಂದಿದ್ದಾರೆ.
5/ 8
ಹಾಗೆಯೇ ನಮ್ಮ ಕುಟುಂಬದ ಸದಸ್ಯರು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಮಾರಣಾಂತಿಕ ವೈರಸ್ ಸೋಂಕಿಗೆ ತುತ್ತಾಗಿರುವ ಇತರರ ಚಿಕಿತ್ಸೆಗೆ ಪ್ಲಾಸ್ಮಾ ದಾನ ಮಾಡುವುದಾಗಿ ತಿಳಿಸಿದ್ದಾರೆ ಎಸ್ಎಸ್ ರಾಜಮೌಳಿ.
6/ 8
ಸದ್ಯ ಹೈದಾರಾಬಾದ್ನಲ್ಲಿ ನೆಲೆಸಿರುವ ಎಸ್ಎಸ್ ರಾಜಮೌಳಿ, ಮತ್ತೆ ಬಿಗ್ ಬಜೆಟ್ ಚಿತ್ರ ಆರ್ಆರ್ಆರ್ ಕೆಲಸವನ್ನು ಪುನರಾರಂಭಿಸಲು ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಇದೇ ವೇಳೆ ಕೊರೋನಾ ಸೋಂಕು ತಗುಲಿರುವುದು ಗೊತ್ತಾಗಿದ್ದು, ಹೀಗಾಗಿ ಸಿನಿಮಾ ಕೆಲಸಗಳು ಮತ್ತಷ್ಟು ಮುಂದಕ್ಕೆ ಹೋಗಲಿದೆ.
7/ 8
ಬಾಹುಬಲಿ ಚಿತ್ರದ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಟಾಲಿವುಡ್ ಸೂಪರ್ಸ್ಟಾರ್ಗಳಾದ ಜೂ.ಎನ್ಟಿಆರ್ ಮತ್ತು ರಾಮ್ ಚರಣ್ ತೇಜ ಇದೇ ಮೊದಲ ಬಾರಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
8/ 8
ಹಾಗೆಯೇ 450 ಕೋಟಿ ರೂ.ಗಳ ಬಜೆಟ್ ನಿರ್ಮಾಣವಾಗುತ್ತಿರುವ ಈ ಚಿತ್ರವು ಭಾರತದ ಮೋಸ್ಟ್ ಎಕ್ಸ್ಪೆನ್ಸಿವ್ ಸಿನಿಮಾ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ 2021 ರ ಜನವರಿ 8 ರಂದು ಆರ್ಆರ್ಆರ್ ಬಿಡುಗಡೆಯಾಗಲಿದೆ.