Sridevi Death Anniversary: ಕಗ್ಗಂಟಾಗಿಯೇ ಉಳಿದ ನಟಿ ಶ್ರೀದೇವಿ ಸಾವಿನ ಪ್ರಕರಣ..!
Remembering Sridevi: ಸಿನಿರಂಗದಲ್ಲಿ ಅತಿಲೋಕ ಸುಂದರಿಯಾಗಿ ಮಿಂಚಿದ್ದ ಶ್ರೀದೇವಿ ಮರೆಯಾಗಿ ಇಂದಿಗೆ ಮೂರು ವರ್ಷಗಳು ಕಳೆದಿವೆ. ದುಬೈನಲ್ಲಿ ಸಂಬಂಧಿಕರ ಮದುವೆಗೆಂದು ಹೋಗಿದ್ದ ಶ್ರೀದೇವಿ, ಅಲ್ಲೇ ಉಳಿದುಕೊಂಡಿದ್ದ ಹೋಟೆಲ್ ರೂಮ್ನ ಸ್ನಾನದ ಕೋಣೆಯ ಬಾತ್ಟಬ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಸಹಜ ಸಾವೆಂದು ಹೇಳಲಾಗಿತ್ತು. ಆದರೆ ಇಂದೀಗೂ ಶ್ರೀದೇವಿ ಅಭಿಮಾನಿಗಳಿಗೆ ಮಾತ್ರ ಇಂದಿಗೂ ಅದು ಸಹಜ ಸಾವಲ್ಲ ಅನ್ನೋ ಅನುಮಾನ ಇದೆ. (ಚಿತ್ರಗಳು ಕೃಪೆ: ಟ್ವಿಟರ್ ಖಾತೆ)