ಸ್ಯಾಂಡಲ್ವುಡ್ ರೋರಿಂಗ್ ಸ್ಟಾರ್ ಭರ್ಜರಿಯಾಗಿ ಭರಾಟೆ ಸದ್ದಿನೊಂದಿಗೆ ಮತ್ತೊಂದು ಎಂಟ್ರಿಗೆ ಸಜ್ಜಾಗಿ ನಿಂತಿದ್ದಾರೆ. ಅದು ಅಂತಿಂಥ ಎಂಟ್ರಿ ಆಗಿರಲಂತು ಸಾಧ್ಯವೇ ಇಲ್ಲ. ಏಕೆಂದರೆ ಚಿತ್ರದ ಟೈಟಲ್ನಲ್ಲೇ ಆನೆಬಲ ಇದೆ.
2/ 11
ಹೌದು, ಶ್ರೀಮುರುಳಿ ಅಭಿನಯದ ಮುಂದಿನ ಚಿತ್ರ ಮದಗಜ ಚಿತ್ರಕ್ಕೆ ಕಾಶಿಯಲ್ಲಿ ಮಹಾಶಿವರಾತ್ರಿಯಂದು ಮುಹೂರ್ತ ನಡೆದಿದೆ. ಅಲ್ಲದೆ ಅದೇ ದಿನದಿಂದಲೇ ಶೂಟಿಂಗ್ ಕೂಡ ಆರಂಭಿಸಿದೆ.
3/ 11
ಅಯೋಗ್ಯ ಚಿತ್ರ ನಿರ್ದೇಶಕ ಮಹೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಮದಗಜ ತಂಡ ಕಾಶಿ ಶೂಟಿಂಗ್ ಪೂರ್ಣಗೊಳಿಸಿ ಹಿಂತಿರುಗಿದ್ದಾರೆ.
4/ 11
ಈ ಬಗ್ಗೆ ಮಾತನಾಡಿರುವ ರೋರಿಂಗ್ ಸ್ಟಾರ್ ಶ್ರೀಮುರುಳಿ, ನಾನು ಕಾಶಿಗೆ ತೆರಳಿರುವುದು ಇದೇ ಮೊದಲ ಬಾರಿ. ಅಲ್ಲಿನ ಪ್ರತಿಯೊಂದೂ ಕೂಡ ನನಗೆ ವಿಶೇಷ ಅನುಭವ ನೀಡಿತ್ತು. ಅದರಲ್ಲೂ ಶಿವರಾತ್ರಿ ದಿನ ಅಘೋರಿಗಳ ಜೊತೆ ನಾನು ನಟಿಸಿರುವುದು ಮರೆಲಾಗದ ಘಟನೆ ಎಂದರು.
5/ 11
ಮದಗಜ ಚಿತ್ರದಲ್ಲಿನ ನನ್ನ ಬಾಲ್ಯದ ಘಟನೆಗಳನ್ನು ಮತ್ತು ಆನಂತರದ ಸನ್ನಿವೇಶಗಳನ್ನು ಕಾಶಿಯಲ್ಲಿ ಚಿತ್ರೀಕರಿಸಲಾಗಿದೆ. 15 ದಿನಗಳ ಕಾಲದಲ್ಲಿ ನಮ್ಮ ಪ್ಲ್ಯಾನ್ ಪ್ರಕಾರವೇ ಶೂಟಿಂಗ್ ಮುಗಿಸಿದ್ದೇವೆ. ಇವೆಲ್ಲದರ ಝಲಕ್ಗಳನ್ನು ಯುಗಾದಿ ಹಬ್ಬಕ್ಕೆ ಟೀಸರ್ ಮೂಲಕ ಜನರ ಮುಂದಿಡುವುದಾಗಿ ಶ್ರೀಮುರಳಿ ತಿಳಿಸಿದ್ದಾರೆ.
6/ 11
ಕಳೆದೆರೆಡು ವರ್ಷಗಳಿಂದ ರಗಡ್ ಅವತಾರದಲ್ಲೇ ಕಾಣಿಸಿಕೊಳ್ಳುತ್ತಿರುವ ಶ್ರೀಮುರುಳಿ ಮದಗಜ ಚಿತ್ರದಲ್ಲಿ ಅನಿವಾಸಿ ಭಾರತೀಯನ ಪಾತ್ರದಲ್ಲಿ ತೆರೆಮೇಲೆ ಬರಲಿದ್ದಾರೆ. ಅದರೊಂದಿಗೆ ಈಗ ಕಾಶಿಯಲ್ಲಿ 3 ಸಾವಿರ ಅಘೋರಿಗಳೊಂದಿಗೆ ರೋರಿಂಗ್ ಸ್ಟಾರ್ ಕಾಣಿಸಿಕೊಂಡಿರುವುದು ಚಿತ್ರವು ವಿಭಿನ್ನ ಕಥೆ ಹೊಂದಿರಲಿದೆ ಎಂಬ ನಿರೀಕ್ಷೆ ಹುಟ್ಟುಹಾಕಿದೆ.
7/ 11
ರೋರಿಂಗ್ ಸ್ಟಾರ್ ಪತ್ನಿ ಶ್ರೀವಿದ್ಯಾ ಮದಗಜ ಚಿತ್ರದಲ್ಲಿ ಪತಿಗಾಗಿ ಕಾಸ್ಟ್ಯಾಮ್ ಡಿಸೈನ್ ಮಾಡಲಿದ್ದಾರೆ.
8/ 11
ಈ ಹಿಂದೆ ಮಫ್ತಿ ಚಿತ್ರದಲ್ಲಿ ಶಿವಣ್ಣ ಹಾಗೂ ಮುರುಳಿಗೆ ಶ್ರೀವಿದ್ಯಾ ವಸ್ತ್ರ ವಿನ್ಯಾಸ ಮಾಡಿದ್ದರು.
9/ 11
ಇನ್ನು ಈ ಚಿತ್ರವನ್ನು ಹೆಬ್ಬುಲಿ, ರಾಬರ್ಟ್ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಮಿಸಲಿದ್ದು, ಈಗಾಗಲೇ ಚಿತ್ರಕ್ಕೆ ಬೇಕಾದ ಸಕಲ ತಯಾರಿ ಮಾಡಿಕೊಂಡಿದ್ದಾರೆ .
10/ 11
ಅಂದಹಾಗೆ ನಿರ್ದೇಶಕ ಮಹೇಶ್ ಕುಮಾರ್ ಬರೆದಿರುವ ಮದಗಜ ಕಥೆಯನ್ನು ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಕೂಡ ಕೇಳಿದ್ದಾರೆ. ಅಲ್ಲದೆ ಚಿತ್ರದ ಕಥೆಯಲ್ಲಿ ಕೊಂಚ ಬದಲಾವಣೆಯನ್ನು ಮಾಡುವ ಮೂಲಕ ಸ್ಕ್ರಿಪ್ಟ್ನ್ನು ಮತ್ತಷ್ಟು ಇಂಟ್ರೆಸ್ಟಿಂಗ್ ಆಗಿಸಿದ್ದಾರೆ.
11/ 11
ಒಟ್ಟಿನಲ್ಲಿ ಮದಗಜ ಚಿತ್ರ ಶೂಟಿಂಗ್ ಬೆನ್ನಲ್ಲೇ ಹೊಸ ಕ್ರೇಜ್ ಹುಟ್ಟುಹಾಕುತ್ತಿದ್ದು, ರೋರಿಂಗ್ ಸ್ಟಾರ್ ಅಭಿಮಾನಿಗಳಿಗೆ ಮತ್ತೊಂದು ರಸದೌತಣ ನೀಡಲು ಶ್ರೀಮುರುಳಿ ಸಕಲ ತಯಾರಿಯಲ್ಲಿದ್ದಾರೆ.