ಸದ್ಯ ಚಿತ್ರೀಕರಣ ನಡೆಯುತ್ತಿರುವ ಈ ಸಿನಿಮಾದಲ್ಲಿ ಶ್ರೀಲೀಲಾ ಐಟಂ ಸಾಂಗ್ ಮಾಡಲಿದ್ದಾರೆ ಎಂಬುದು ಲೇಟೆಸ್ಟ್ ಟಾಕ್ ಆಗಿದೆ. ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳಲು ಶ್ರೀಲೀಲಾ ಭಾರೀ ಸಂಭಾವನೆಯನ್ನೆ ಪಡೆಯು ತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ.ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ದೇವರಾಗಿ ಕಾಣಿಸಿಕೊಳ್ಳಲಿರುವುದರಿಂದ ಈ ಸಿನಿಮಾಗೆ ದೇವರು ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆಯಂತೆ. (ಟ್ವಿಟರ್/ಫೋಟೋ)
ಶೀಘ್ರದಲ್ಲೇ ಚಿತ್ರತಂಡ ಟೈಟಲ್ ಬಗ್ಗೆ ಫೈನಲ್ ಮಾಡಲಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಶೀರ್ಷಿಕೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರಿಗೆ ಇಷ್ಟ ಆದ್ರೆ ಕೆಲವರು ಈ ಟೈಟಲ್ ಬಗ್ಗೆ ಅಪಸ್ವರ ಎತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಇದೇ ಟೈಟಲ್ ನಲ್ಲಿ ಬಾಲಯ್ಯ ಸಿನಿಮಾ ಬಂದಿತ್ತು. ಶೂಟಿಂಗ್ ಶೀಘ್ರದಲ್ಲೇ ಮುಗಿಸಿ ಆಗಸ್ಟ್ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಫೋಟೋ: ಟ್ವಿಟರ್
ಇನ್ನು ವಿನೋದಾಯ ಸೀತಂನ ಕಥೆಯು ತಂಬಿ ರಾಮಯ್ಯ ಎಂಬ ವ್ಯಕ್ತಿ ಸುತ್ತ ಸುತ್ತಲಿದೆ. ಆತನ ಕುಟುಂಬದ ಬಗ್ಗೆ ಕುಟುಂಬದ ಮುಖ್ಯಸ್ಥನಾಗಿ ತಂಬಿ ರಾಮಯ್ಯ ತನ್ನ ಜವಾಬ್ದಾರಿಯನ್ನು ಸಲೀಸಾಗಿ ನಿಭಾಯಿಸುತ್ತಾನೆ. ಕಾರು ಅಪಘಾತದಲ್ಲಿ ಆಕಸ್ಮಿಕವಾಗಿ ಸಾಯುತ್ತಾನೆ. ಆದರೆ ಇನ್ನೂ ಮಗಳ ಮದುವೆ ಮಾಡಿಲ್ಲ.. ಮಗ ಇನ್ನೂ ಸೆಟ್ ಆಗಿಲ್ಲ ಅಂತ ದೇವರು ಮೊರೆ ಹೋಗುತ್ತಾನೆ ಮತ್ತು ತಂಬಿಗೆ ಮತ್ತೆ 3 ತಿಂಗಳು ಬದುಕುವ ಅವಕಾಶವನ್ನು ನೀಡುತ್ತಾನೆ. ಫೋಟೋ: ಟ್ವಿಟರ್
ವಾಪಸ್ ಬಂದ ತಂಬಿ, ಅಂದುಕೊಂಡಿದ್ದ ಕೆಲಸವನ್ನು ಮುಗಿಸಿದ್ದೇಕೆ, ಈ ಮೂರು ತಿಂಗಳಲ್ಲಿ ಕುಟುಂಬದಿಂದ ಎದುರಾದ ಸವಾಲುಗಳೇನು? ಅದೇ ಕಥೆಯನ್ನು ತೆಲುಗಿನಲ್ಲಿ ಸ್ವಲ್ಪ ಬದಲಾವಣೆ ಮಾಡಿ ತೋರಿಸಲಾಗುತ್ತದೆಯಂತೆ. ತೆಲುಗಿನಲ್ಲಿ ಐಟಂ ಸಾಂಗ್ ಸೇರ್ಪಡೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಚಿತ್ರ ನಿರ್ಮಿಸುತ್ತಿದ್ದು. ತಮನ್ ಸಂಗೀತ ನೀಡುತ್ತಿದ್ದಾರೆ.
ಎಂದಿನಂತೆ ಈ ಚಿತ್ರಕ್ಕೆ ತ್ರಿವಿಕ್ರಮ್ ಚಿತ್ರಕಥೆ ಮತ್ತು ಮಾತುಗಳನ್ನು ನೀಡಲಿದ್ದಾರೆ.. ಈ ಚಿತ್ರಕ್ಕೆ ಪವನ್ ಕೇವಲ 15 ರಿಂದ 20 ದಿನಗಳ ಡೇಟ್ ನಿಗದಿಪಡಿಸಿದ್ದಾರೆ. ಪವನ್ ಕಲ್ಯಾಣ್ ಎಲ್ಲಾ ದಿನಗಳಿಗೂ 50 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಈ ಚಿತ್ರದ ಪೂಜಾ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್, ಸಾಯಿ ಧರಮ್ ತೇಜ್, ನಟ ನಿರ್ದೇಶಕ ಸಮುದ್ರಕನಿ, ತ್ರಿವಿಕ್ರಮ್, ತಮನ್, ನಿರ್ಮಾಪಕರಾದ ವಿಶ್ವಪ್ರಸಾದ್ ಮತ್ತು ವಿವೇಕ್ ಕೂಚಿಬೋಟ್ಲ ಭಾಗವಹಿಸಿದ್ದರು. ಫೋಟೋ: ಟ್ವಿಟರ್