Nandamuri Balakrishna: 62 ವರ್ಷದ ಬಾಲಯ್ಯ ಜೊತೆ 21 ವರ್ಷದ ಶ್ರೀಲೀಲಾ ರೊಮ್ಯಾನ್ಸ್ ಮಾಡ್ತಾರಾ?

Sreeleela: ಯುವ ನಟಿ ಶ್ರೀಲೀಲಾ ಸದ್ಯ ಸಾಲು ಸಾಲು ಆಫರ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಾಲಯ್ಯ ಜೊತೆಗೂ ಶ್ರೀಲೀಲಾ ನಟಿಸಲಿದ್ದು ಅವರು ನಟಿಸುತ್ತಿರುವ ಚಿತ್ರದ ಪ್ರಮುಖ ಅಪ್ಡೇಟ್ ಹೊರಬಿದ್ದಿದೆ.

First published:

  • 18

    Nandamuri Balakrishna: 62 ವರ್ಷದ ಬಾಲಯ್ಯ ಜೊತೆ 21 ವರ್ಷದ ಶ್ರೀಲೀಲಾ ರೊಮ್ಯಾನ್ಸ್ ಮಾಡ್ತಾರಾ?

    ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡದ ನಟಿ ಶ್ರೀಲೀಲಾ ಸದ್ಯ ಸಾಲು ಸಾಲು ಆಫರ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮಾಸ್ ಮಹಾರಾಜ ರವಿತೇಜ ಜೊತೆ ಧಮಾಕಾ ಚಿತ್ರದಲ್ಲಿ ನಟಿಸಿ ಬ್ಲಾಕ್ ಬಸ್ಟರ್ ಹಿಟ್ ಗಳಿಸಿದ್ದ ಶ್ರೀಲೀಲಾ ಸದ್ಯ ನಂದಮೂರಿ ಬಾಲಕೃಷ್ಣ ಅವರ ಜೊತೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

    MORE
    GALLERIES

  • 28

    Nandamuri Balakrishna: 62 ವರ್ಷದ ಬಾಲಯ್ಯ ಜೊತೆ 21 ವರ್ಷದ ಶ್ರೀಲೀಲಾ ರೊಮ್ಯಾನ್ಸ್ ಮಾಡ್ತಾರಾ?

    ಎನ್‌ಬಿಕೆ 108 ಎಂಬ ವರ್ಕಿಂಗ್ ಶೀರ್ಷಿಕೆಯೊಂದಿಗೆ ಅನಿಲ್ ರವಿಪುಡಿ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗುತ್ತಿದೆ. ತಮ್ಮದೇ ಬ್ರಾಂಡ್ ಕಾಮಿಡಿ ಸೇರಿಸಿ ಪವರ್ ಫುಲ್ ಆಕ್ಷನ್ ಎಂಟರ್ ಟೈನರ್ ಆಗಿ ಈ ಸಿನಿಮಾವನ್ನು ನಿರ್ಮಿಸಲು ಹೊರಟಿರುವ ಅನಿಲ್ ರವಿಪುಡಿ, ಈ ಸಿನಿಮಾಗಾಗಿ ಪರ್ಫೆಕ್ಟ್ ಪ್ಲಾನ್ ಮಾಡುತ್ತಿದ್ದಾರೆ. ಬಾಲಯ್ಯ ಬಾಬು ಅವರ ಕೆರಿಯರ್‌ನಲ್ಲಿ ಇದೊಂದು ವಿಭಿನ್ನ ಸಿನಿಮಾ ಎಂದು ಸ್ಕೆಚ್ ಹಾಕಲಾಗಿತ್ತು.

    MORE
    GALLERIES

  • 38

    Nandamuri Balakrishna: 62 ವರ್ಷದ ಬಾಲಯ್ಯ ಜೊತೆ 21 ವರ್ಷದ ಶ್ರೀಲೀಲಾ ರೊಮ್ಯಾನ್ಸ್ ಮಾಡ್ತಾರಾ?

    ಈ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿರುವಾಗಲೇ ಇತ್ತೀಚೆಗಷ್ಟೇ ಕ್ರೇಜಿ ಅಪ್ಡೇಟ್ ಹೊರಬಿದ್ದಿದೆ. ಈ ಚಿತ್ರದಲ್ಲಿ ಬಾಲಯ್ಯ ಅವರ ಮಗಳಾಗಿ ಶ್ರೀಲೀಲಾ ನಟಿಸುತ್ತಿದ್ದು, ಕಾಜಲ್ ಮುಖ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಕೇಳಿದ್ದೆವು. ಅಪ್ಪ-ಮಗಳ ಸೆಂಟಿಮೆಂಟ್ ಈ ಸಿನಿಮಾದಲ್ಲಿ ಹೈಲೈಟ್ ಆಗಲಿದೆ ಎನ್ನಲಾಗಿತ್ತು.

    MORE
    GALLERIES

  • 48

    Nandamuri Balakrishna: 62 ವರ್ಷದ ಬಾಲಯ್ಯ ಜೊತೆ 21 ವರ್ಷದ ಶ್ರೀಲೀಲಾ ರೊಮ್ಯಾನ್ಸ್ ಮಾಡ್ತಾರಾ?

    ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಶ್ರೀಲೀಲಾ ಬಾಲಯ್ಯ ಅವರ ಮಗಳಾಗಿ ನಟಿಸುತ್ತಿಲ್ಲವಂತೆ. ಬಾಕ್ಸರ್ ಪಾತ್ರ ಮಾಡಲಿದ್ದಾರೆ ಎಂದು ಗೊತ್ತಾಗಿದೆ. ಸದ್ಯ ಬಾಲಕೃಷ್ಣ ಹಾಗೂ ಶ್ರೀಲೀಲಾ ಅವರ ಮೇಲೆ ಮಹತ್ವದ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.

    MORE
    GALLERIES

  • 58

    Nandamuri Balakrishna: 62 ವರ್ಷದ ಬಾಲಯ್ಯ ಜೊತೆ 21 ವರ್ಷದ ಶ್ರೀಲೀಲಾ ರೊಮ್ಯಾನ್ಸ್ ಮಾಡ್ತಾರಾ?

    NBK108 ಇತ್ತೀಚಿನ ಶೆಡ್ಯೂಲ್ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಬಾಲಕೃಷ್ಣ ಮತ್ತು ಶ್ರೀಲೀಲಾ ಪ್ರಮುಖ ದೃಶ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು ಕೆಲವು ದಿನಗಳ ಕಾಲ ಇಲ್ಲಿ ಚಿತ್ರೀಕರಣ ನಡೆಸಲಿದ್ದು, ಕಾಜಲ್ ಕೂಡ ಇದರಲ್ಲಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರೊಂದಿಗೆ ಈ ಸಿನಿಮಾದಲ್ಲಿ ಶ್ರೀಲೀಲಾ ಪಾತ್ರ ಏನು ಎಂಬುದು ಈಗ ಕುತೂಹಲ ಮೂಡಿಸಿದೆ.

    MORE
    GALLERIES

  • 68

    Nandamuri Balakrishna: 62 ವರ್ಷದ ಬಾಲಯ್ಯ ಜೊತೆ 21 ವರ್ಷದ ಶ್ರೀಲೀಲಾ ರೊಮ್ಯಾನ್ಸ್ ಮಾಡ್ತಾರಾ?

    ಇತ್ತೀಚೆಗಷ್ಟೇ ಎಫ್3 ಸಿನಿಮಾ ಮೂಲಕ ಮೋಜು ಮಸ್ತಿಯ ಹಿನ್ನೆಲೆಯಲ್ಲಿ ಫನ್ ಕ್ರಿಯೇಟ್ ಮಾಡಿದ್ದ ಅನಿಲ್ ರವಿಪುಡಿ ಈ ಬಾರಿ ಬಾಲಯ್ಯ ಜೊತೆ ವಿನೂತನ ಪ್ರಯೋಗ ಮಾಡುತ್ತಿದ್ದಾರೆ. ವಿಶಿಷ್ಟ ಕಾಂಬೋದಲ್ಲಿ ಬರುತ್ತಿರುವ ಈ ಸಿನಿಮಾದ ಮೇಲೆ ನಂದಮೂರಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    MORE
    GALLERIES

  • 78

    Nandamuri Balakrishna: 62 ವರ್ಷದ ಬಾಲಯ್ಯ ಜೊತೆ 21 ವರ್ಷದ ಶ್ರೀಲೀಲಾ ರೊಮ್ಯಾನ್ಸ್ ಮಾಡ್ತಾರಾ?

    ಈ ಚಿತ್ರವನ್ನು ಶೈನ್ ಸ್ಕ್ರೀನ್ ಬ್ಯಾನರ್ ಅಡಿಯಲ್ಲಿ ಹರೀಶ್ ಪೆದ್ದಿ ಮತ್ತು ಸಾಹು ಗರಪಾಟಿ ನಿರ್ಮಿಸುತ್ತಿದ್ದಾರೆ. ಎಸ್ ಎಸ್ ಥಮನ್ ಸಂಗೀತ ನೀಡಿದ್ದಾರೆ. ಅಖಂಡ ಮತ್ತು ವೀರಸಿಂಹ ರೆಡ್ಡಿಯಂತಹ ದೊಡ್ಡ ಹಿಟ್‌ಗಳ ನಂತರ ಬರುತ್ತಿರುವ ಬಾಲಯ್ಯ ಈ ಸಿನಿಮಾದ ಮೂಲಕ ಹ್ಯಾಟ್ರಿಕ್ ಪಡೆಯುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

    MORE
    GALLERIES

  • 88

    Nandamuri Balakrishna: 62 ವರ್ಷದ ಬಾಲಯ್ಯ ಜೊತೆ 21 ವರ್ಷದ ಶ್ರೀಲೀಲಾ ರೊಮ್ಯಾನ್ಸ್ ಮಾಡ್ತಾರಾ?

    ಈ ಸಿನಿಮಾದಲ್ಲಿ ಬಾಲಕೃಷ್ಣ ಅವರ ಪತ್ನಿಯಾಗಿ ಕಾಜಲ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮೇಲಾಗಿ ಇದರಲ್ಲಿ ಮತ್ತೊಬ್ಬ ನಾಯಕಿಗೆ ಸ್ಕೋಪ್ ಇದ್ದು, ಫ್ಲಾಷ್ ಬ್ಯಾಕ್ ನಲ್ಲಿ ಮತ್ತೊಬ್ಬ ನಾಯಕಿ ಕಾಣಿಸಿಕೊಳ್ಳಲಿದ್ದಾರೆ ಎಂದು ಗೊತ್ತಾಗಿದ್ದು, ಎಲ್ಲರಲ್ಲೂ ಕುತೂಹಲ ಮೂಡಿದೆ.

    MORE
    GALLERIES