Sreeja Konidela-Kalyan Dev: 3ನೇ ಮದುವೆಗೆ ರೆಡಿಯಾಗ್ತಿದ್ದಾರೆ ಚಿರಂಜೀವಿ ಪುತ್ರಿ!? ಇತ್ತ ಮಿಸ್ ಯೂ ಅಂತಿದ್ದಾರೆ ಶ್ರೀಜಾ ಪತಿ ಕಲ್ಯಾಣ್

Sreeja Konidela: ಶ್ರೀಜಾ ಕಲ್ಯಾಣ್ ದೇವ್​ಗೆ ವಿಚ್ಛೇದನ ನೀಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಮೆಗಾ ಸ್ಟಾರ್ ಕುಟುಂಬ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಕಲ್ಯಾಣ್ ದೇವ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

First published:

  • 18

    Sreeja Konidela-Kalyan Dev: 3ನೇ ಮದುವೆಗೆ ರೆಡಿಯಾಗ್ತಿದ್ದಾರೆ ಚಿರಂಜೀವಿ ಪುತ್ರಿ!? ಇತ್ತ ಮಿಸ್ ಯೂ ಅಂತಿದ್ದಾರೆ ಶ್ರೀಜಾ ಪತಿ ಕಲ್ಯಾಣ್

    ಚಿರಂಜೀವಿ ಅವರ ಕಿರಿಯ ಮಗಳು ಶ್ರೀಜಾ ಕೊನಿಡೇಲಾ ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕಲ್ಯಾಣ್ ದೇವ್ ಜೊತೆ ಶ್ರೀಜಾ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಮೆಗಾ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    MORE
    GALLERIES

  • 28

    Sreeja Konidela-Kalyan Dev: 3ನೇ ಮದುವೆಗೆ ರೆಡಿಯಾಗ್ತಿದ್ದಾರೆ ಚಿರಂಜೀವಿ ಪುತ್ರಿ!? ಇತ್ತ ಮಿಸ್ ಯೂ ಅಂತಿದ್ದಾರೆ ಶ್ರೀಜಾ ಪತಿ ಕಲ್ಯಾಣ್

    ಕಲ್ಯಾಣ್ ದೇವ್ ಅವರನ್ನು ಎರಡನೇ ಮದುವೆಯಾಗಿದ್ದ ಶ್ರೀಜಾ ಅವರಿಗೂ ವಿಚ್ಛೇದನ ನೀಡಿದ್ದು, ಮೂರನೇ ಮದುವೆಗೂ ರೆಡಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಜಾ ಮತ್ತು ಕಲ್ಯಾಣ್ ದೇವ್ ಅವರ ವಿಚ್ಛೇದನದ ವಿಚಾರ ಭಾರೀ ಸುದ್ದಿಯಾಗಿದೆ.

    MORE
    GALLERIES

  • 38

    Sreeja Konidela-Kalyan Dev: 3ನೇ ಮದುವೆಗೆ ರೆಡಿಯಾಗ್ತಿದ್ದಾರೆ ಚಿರಂಜೀವಿ ಪುತ್ರಿ!? ಇತ್ತ ಮಿಸ್ ಯೂ ಅಂತಿದ್ದಾರೆ ಶ್ರೀಜಾ ಪತಿ ಕಲ್ಯಾಣ್

    ಶ್ರೀಜಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಕಲ್ಯಾಣ್ ದೇವ್ ಹೆಸರನ್ನು ತೆಗೆದು ಹಾಕಿದ್ದಾರೆ. ಅಲ್ಲದೇ ಕಲ್ಯಾಣ್ ದೇವ್ ವರ್ಷಗಳಿಂದ ಮೆಗಾ ಫ್ಯಾಮಿಲಿ ಜೊತೆ ಕೂಡ ಕಾಣಿಸಿಕೊಂಡಿಲ್ಲ.

    MORE
    GALLERIES

  • 48

    Sreeja Konidela-Kalyan Dev: 3ನೇ ಮದುವೆಗೆ ರೆಡಿಯಾಗ್ತಿದ್ದಾರೆ ಚಿರಂಜೀವಿ ಪುತ್ರಿ!? ಇತ್ತ ಮಿಸ್ ಯೂ ಅಂತಿದ್ದಾರೆ ಶ್ರೀಜಾ ಪತಿ ಕಲ್ಯಾಣ್

    ಶ್ರೀಜಾ ಜೊತೆಗಿನ ಭಿನ್ನಾಭಿಪ್ರಾಯದ ವಿಚಾರ ಬೆಳಕಿಗೆ ಬಂದ ನಂತರ ಕಲ್ಯಾಣ್ ದೇವ್ ಅಭಿನಯದ 2 ಚಿತ್ರಗಳು ತೆರೆಕಂಡಿದ್ದವು. ಈ 2 ಚಿತ್ರಗಳಿಗೆ ಮೆಗಾ ಫ್ಯಾಮಿಲಿ ಸಪೋರ್ಟ್ ಇಲ್ಲದಿರುವುದು ಹಾಗೂ ಚಿರಂಜೀವಿ ಜೊತೆಗೆ ಸೂಪರ್ ಮಚ್ಚಿ, ಕಿನ್ನರಸಾನಿ ಚಿತ್ರಗಳ ಪ್ರಚಾರಕ್ಕೆ ಮೆಗಾ ಫ್ಯಾಮಿಲಿ ಎಂಟ್ರಿ ಆಗದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    MORE
    GALLERIES

  • 58

    Sreeja Konidela-Kalyan Dev: 3ನೇ ಮದುವೆಗೆ ರೆಡಿಯಾಗ್ತಿದ್ದಾರೆ ಚಿರಂಜೀವಿ ಪುತ್ರಿ!? ಇತ್ತ ಮಿಸ್ ಯೂ ಅಂತಿದ್ದಾರೆ ಶ್ರೀಜಾ ಪತಿ ಕಲ್ಯಾಣ್

    ಶ್ರೀಜಾ ಮತ್ತು ಕಲ್ಯಾಣ್ ದೇವ್ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಈ ವೇಳೆ ಕಲ್ಯಾಣ್ ದೇವ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಫೆಬ್ರವರಿ 11 ರಂದು ತಮ್ಮ ಮಗಳು ನಾವಿಷ್ಕಾ ಹುಟ್ಟುಹಬ್ಬ ಎಂದು ಕಲ್ಯಾಣ್ ದೇವ್ ಭಾವನಾತ್ಮಕ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

    MORE
    GALLERIES

  • 68

    Sreeja Konidela-Kalyan Dev: 3ನೇ ಮದುವೆಗೆ ರೆಡಿಯಾಗ್ತಿದ್ದಾರೆ ಚಿರಂಜೀವಿ ಪುತ್ರಿ!? ಇತ್ತ ಮಿಸ್ ಯೂ ಅಂತಿದ್ದಾರೆ ಶ್ರೀಜಾ ಪತಿ ಕಲ್ಯಾಣ್

    ನಾವಿಷ್ಕಾ ಜೊತೆಗಿನ ನೆನಪುಗಳನ್ನು ಮೆಲುಕು ಹಾಕುತ್ತಾ ಮಿಸ್ಸಿಂಗ್ ಯೂ ಎಂದು ಕಮೆಂಟ್ ಮಾಡಿದ್ದಾರೆ. ಇದರೊಂದಿಗೆ ಕಲ್ಯಾಣ್ ದೇವ್-ಶ್ರೀಜಾ ವಿಚ್ಛೇದನದ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇಬ್ಬರೂ ಬೇರೆಯಾದ ಕಾರಣ ಕಲ್ಯಾಣ್ ಮಗಳ ನೆನಪುಗಳೊಂದಿಗೆ ಭಾವುಕರಾಗಿದ್ದಾರೆ.

    MORE
    GALLERIES

  • 78

    Sreeja Konidela-Kalyan Dev: 3ನೇ ಮದುವೆಗೆ ರೆಡಿಯಾಗ್ತಿದ್ದಾರೆ ಚಿರಂಜೀವಿ ಪುತ್ರಿ!? ಇತ್ತ ಮಿಸ್ ಯೂ ಅಂತಿದ್ದಾರೆ ಶ್ರೀಜಾ ಪತಿ ಕಲ್ಯಾಣ್

    ಶ್ರೀಜಾ ,ಕಲ್ಯಾಣ್ ದೇವ್ ಅವರನ್ನು 2016 ರಲ್ಲಿ ವಿವಾಹವಾದರು ಬಳಿಕ 2018 ರಲ್ಲಿ ಮಗುವನ್ನು ಹೊಂದಿದ್ದರು. ಮಗುವಿಗೆ ನಾವಿಷ್ಕಾ ಎಂದು ಹೆಸರಿಡಲಾಗಿದೆ. ಸದ್ಯ ನಾವಿಷ್ಕಾ ಶ್ರೀಜಾ ಜೊತೆಗಿದ್ದಾರೆ ಎಂಬ ಕಲ್ಯಾಣ್ ದೇವ್ ಪೋಸ್ಟ್ ನಲ್ಲಿ ಫುಲ್ ಕ್ಲಾರಿಟಿ ಬಂದಿದೆ.

    MORE
    GALLERIES

  • 88

    Sreeja Konidela-Kalyan Dev: 3ನೇ ಮದುವೆಗೆ ರೆಡಿಯಾಗ್ತಿದ್ದಾರೆ ಚಿರಂಜೀವಿ ಪುತ್ರಿ!? ಇತ್ತ ಮಿಸ್ ಯೂ ಅಂತಿದ್ದಾರೆ ಶ್ರೀಜಾ ಪತಿ ಕಲ್ಯಾಣ್

    ಶ್ರೀಜಾ , ಮೊದಲು ಶಿರೀಷ್ ಭಾರದ್ವಾಜ್ ಎಂಬಾತನನ್ನು ಮದುವೆಯಾಗಿ ಕೆಲಕಾಲ ಆತನೊಂದಿಗೆ ಇದ್ದರು. ಬಳಿಕ ಚಿರಂಜೀವಿ ಹತ್ತಿರದ ಸಂಬಂಧಿ ಕಲ್ಯಾಣ್ ದೇವ್ ಅವರನ್ನು ವಿವಾಹವಾದರು. ಈಗ ಈ ಬಂಧವೂ ಮುರಿದು ಬಿದ್ದಂತಿದೆ. ಈ ಬಗ್ಗೆ ಮೆಗಾ ಫ್ಯಾಮಿಲಿ ಪ್ರತಿಕ್ರಿಯಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕು.

    MORE
    GALLERIES