South Actors Education: ಸೌತ್ನ ಈ ಟಾಪ್ ನಟರು ಎಷ್ಟು ಓದಿದ್ದಾರೆ ಗೊತ್ತೇ?
South Actors Education Qualification: ಸೌತ್ನಲ್ಲಿ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ಕೊಡುವ ನಿಮ್ಮ ನೆಚ್ಚಿನ ಹೀರೋಗಳು ಎಷ್ಟೆಷ್ಟು ಓದಿದ್ದಾರೆ ಗೊತ್ತೇ? ಸ್ಟಾರ್ ನಟರ ಎಜಕೇಷನ್ ಕ್ವಾಲಿಫಿಕೇಷನ್ ಇಲ್ಲಿದೆ.
ಚಿಕ್ಕ ವಯಸ್ಸಿನಲ್ಲಿಯೇ ನಟನೆ ಆರಂಭಿಸಿ ಇಂದು ದೊಡ್ಡ ಸ್ಟಾರ್ಗಳಾಗಿರುವ ಬಹಳಷ್ಟು ನಟರು ದಕ್ಷಿಣ ಸಿನಿರಂಗದಲ್ಲಿದ್ದಾರೆ. ಧನುಷ್ ಅವರಿಂದ ಹಿಡಿದು ವಿಜಯ್ ದೇವರಕೊಂಡ ತನಕ ಯಾವ ನಟ ಎಷ್ಟು ಓದಿದ್ದಾರೆ ಎನ್ನುವುದು ಗೊತ್ತೇ?
2/ 7
ಗ್ರೇ ಮ್ಯಾನ್ ಸಿನಿಮಾ ಮೂಲಕ ಹಾಲಿವುಡ್ನಲ್ಲಿಯೂ ಮಿಂಚಿದ ಕಾಲಿವುಡ್ ನಟ ಧನುಷ್ ಅವರು ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುವ ಮುನ್ನ ಪಿಯುಸಿ ಮುಗಿಸಿಕೊಂಡಿದ್ದರು.
3/ 7
ಲೈಗರ್ ನಟ ವಿಜಯ್ ದೇವರಕೊಂಡ ಅವರು ಡಿಗ್ರಿ ಮುಗಿಸಿದ್ದಾರೆ. ಟಾಲಿವುಡ್ನ ಟಾಪ್ ನಟ ಬಿ. ಕಾಂ ಪದವಿ ಪಡೆದಿದ್ದಾರೆ.
4/ 7
ನಟ ಸೂರ್ಯ ಅವರೂ ಬಹಳ ಕಷ್ಟಪಟ್ಟು ಇಂಡಸ್ಟ್ರಿಯಲ್ಲಿ ಬೆಳೆದವರು. ಅವರೂ ಕೂಡಾ ನಟನಾಗುವ ಮುನ್ನ ಬಿ.ಕಾಂ ಮುಗಿಸಿದ್ದರು.
5/ 7
ನಟ ಯಶ್ ಅವರು 12ನೇ ತರಗತಿಯವರೆಗೆ ಕಲಿತು ನಂತರ ಡ್ರಾಮಾ ಕಂಪೆನಿಯೊಂದಿಗೆ ಸೇರಿಕೊಂಡರು. ಕಿರುತೆರೆಯಲ್ಲಿ ಮಿಂಚಿ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗುವವರೆಗೆ ಬೆಳೆದಿದ್ದಾರೆ.
6/ 7
ಸಿನಿಮಾ ಹಿನ್ನೆಲೆಯಿಂದಲೇ ಬಂದ ಮಹೇಶ್ ಬಾಬು ಅವರು ಶಿಕ್ಷಣ ಕಡೆಗಣಿಸಿಲ್ಲ. ಸಿನಿಮಾ ಸೇರುವ ಮೊದಲು ನಟ ಬಿ. ಕಾಂ ಪದವಿ ಪಡೆದಿದ್ದರು.
7/ 7
ನಟ ಅಲ್ಲು ಅರ್ಜುನ್ ಕೂಡಾ ಸಿನಿಮಾ ಹಿನ್ನೆಲೆ ಉಳ್ಳವರು. ಆದರೂ ನಟ ಆ್ಯಕ್ಟರ್ ಆಗಿ ಗುರುತಿಸಿಕೊಳ್ಳುವ ಮೊದಲೇ ಬಿಬಿಎ ಪೂರ್ತಿಗೊಳಿಸಿದ್ದಾರೆ.