ದಕ್ಷಿಣದ ಜನಪ್ರಿಯ ನಟಿ ಸಮಂತಾ ಪ್ರಭು ಕೂಡ ಎಸ್‌ಆರ್‌ಕೆ ಅವರ ಅನೇಕ ಅಭಿಮಾನಿಗಳಲ್ಲಿ ಒಬ್ಬರು. ಅವರು ಕಿಂಗ್ ಖಾನ್ ಬಗ್ಗೆ ಹೆಚ್ಚು ಗೌರವವನ್ನು ಹೊಂದಿದ್ದಾರೆ. ಒಮ್ಮೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನಟನ ವೀಡಿಯೊ ಒಂದರಿಂದ ಸ್ಕ್ರೀನ್‌ಶಾಟ್ ಶೇರ್ ಮಾಡಿದ್ದರು. SRK ಕುರಿತು ಇವರು ನಂಬಲು ಅಸಾಧ್ಯ ಎಂಬಂತಹ ವ್ಯಕ್ತಿ ಎಂದು ಬರೆದಿದ್ದಾರೆ. ಸಂದರ್ಶನವೊಂದರಲ್ಲಿ ತಾನು ಕೆಲಸ ಮಾಡಲು ಇಷ್ಟಪಡುವ ಟಾಪ್ 3 ಸ್ಟಾರ್‌ಗಳ ಬಗ್ಗೆ ಕೇಳಿದಾಗ ಸಮಂತಾ ಶಾರುಖ್ ಹೆಸರು ಹೇಳಿದ್ದರು.
ಪುಷ್ಪ ನಟ ಅಲ್ಲು ಅರ್ಜುನ್ ಕೂಡ ಶಾರುಖ್ ಅವರ ದೊಡ್ಡ ಅಭಿಮಾನಿ. ಎಸ್‌ಆರ್‌ಕೆ ಮತ್ತು ಅವರ ಚಲನಚಿತ್ರಗಳ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ ಅಲ್ಲು ಅರ್ಜುನ್. ಒಮ್ಮೆ ಎಸ್‌ಆರ್‌ಕೆ ಅವರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆಯ ಸ್ಟಿಲ್ ಅನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 'ತುಜೆ ದೇಖಾ ತೋ ಯೇ ಜಾನಾ ಸನಮ್' ಎಂದು ಬರೆದಿದ್ದಾರೆ. 1995 ರಲ್ಲಿ ನಾನು ಈ ಸಿನಿಮಾ ನೋಡಿದಾಗ ನನ್ನ ಜೀವನದ ಅತ್ಯಂತ ಮಾಂತ್ರಿಕ ಕ್ಷಣವನ್ನು ನಾನು ಅನುಭವಿಸಿದೆ. ಇಂದು 23 ವರ್ಷಗಳ ನಂತರ ನಾನು ಅದನ್ನು ಮತ್ತೆ ನೋಡಿದೆ. ಇಂದೂ ಅದನ್ನು ಅನುಭವಿಸಿದ್ದೇನೆ ಎಂದಿದ್ದಾರೆ.