South Movies: ನಿಜ ಘಟನೆ ಆಧಾರಿತ ಸೂಪರ್​ ಹಿಟ್ ಸಿನಿಮಾಗಳಿವು!

South Movies: ದಕ್ಷಿಣ ಭಾರತದ ಈ ಸಿನಿಮಾಗಳು ಸಖತ್ ಫೇಮಸ್. ವಿಶೇಷ ಏನೆಂದರೆ ಇವು ನಿಜ ಘಟನೆ ಆಧಾರಿತ ಸಿನಿಮಾಗಳು. ನೀವು ನೋಡಿದ್ದೀರಾ?

First published:

 • 18

  South Movies: ನಿಜ ಘಟನೆ ಆಧಾರಿತ ಸೂಪರ್​ ಹಿಟ್ ಸಿನಿಮಾಗಳಿವು!

  ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳು ಸಿದ್ಧವಾಗುತ್ತವೆ. ಕಡಿಮೆ ಬಜೆಟ್​ನ ಸಾಲು ಸಾಲು ಸಿನಿಮಾ ಕೆಲವೊಮ್ಮೆ ಪ್ರೇಕ್ಷಕರ ಮನಸು ಗೆದ್ದುಬಿಡುತ್ತದೆ. ದಕ್ಷಿಣದಲ್ಲಿ ಸಿದ್ಧವಾದ ನಿಜಘಟನೆಯಾಧಾರಿತ ಸಿನಿಮಾಗಳಿವು.

  MORE
  GALLERIES

 • 28

  South Movies: ನಿಜ ಘಟನೆ ಆಧಾರಿತ ಸೂಪರ್​ ಹಿಟ್ ಸಿನಿಮಾಗಳಿವು!

  ಕಾಟ್ರಿನ್ ಮೊಳಿ (ಗಾಳಿಯ ಭಾಷೆ) 2018ರಲ್ಲಿ ಬಿಡುಗಡೆಯಾದ ಸಿನಿಮಾ. ಕಾಲಿವುಡ್ ಮೂವಿಯನ್ನು ರಾಧಾ ಮೋಹನ್ ಬರೆದು ನಿರ್ದೇಶಿಸಿದ್ದಾರೆ. ಇದರಲ್ಲಿ ಜ್ಯೋತಿಕಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.ಇದು ತುಮಾರಿ ಸುಲು ಸಿನಿಮಾದ ರಿಮೇಕ್. ಲೇಟ್​ನೈಟ್ ರಿಲೇಷನ್​ಶಿಪ್ ಅಡ್ವೈಸ್ ಶೋಗೆ ಒಬ್ಬ ಗೃಹಿಣಿ ರೇಡಿಯೋ ಜಾಕಿಯಾಗುವ ಕಥೆ ಇದಾಗಿದೆ.

  MORE
  GALLERIES

 • 38

  South Movies: ನಿಜ ಘಟನೆ ಆಧಾರಿತ ಸೂಪರ್​ ಹಿಟ್ ಸಿನಿಮಾಗಳಿವು!

  ರಜನೀಕಾಂತ್ ಅಭಿನಯದ ಕಾಲಾ ಸಿನಿಮಾ ಮಾಫಿಯಾ ಲೀಡರ್ ಹಾಜಿ ಮಸ್ತಾನ್ ಬಯೋಪಿಕ್ ಎಂದು ಹೇಳಲಾಗುತ್ತದೆ. ಆದರೆ ಇದು ಹಲವು ಘಟನೆಗಳನ್ನು ಆಧರಿಸಿದ ಸಿನಿಮಾ. ತಿರುನಲ್​ವೆಲ್ಲಿಯಿಂದ ಮುಂಬೈಗೆ ಹೋದ ಬಾಲಕನ ಪಾತ್ರವನ್ನು ರಜನೀಕಾಂತ್ ಮಾಡಿದ್ದಾರೆ ಎಂದು ಚಿತ್ರತಂಡ ಹೇಳಿತ್ತು.

  MORE
  GALLERIES

 • 48

  South Movies: ನಿಜ ಘಟನೆ ಆಧಾರಿತ ಸೂಪರ್​ ಹಿಟ್ ಸಿನಿಮಾಗಳಿವು!

  ಸೈರ ಸಿಂಹ ರೆಡ್ಡಿ ಸಿನಿಮಾ ಆಂಧ್ರಪ್ರದೇಶದ ರಾಯಲ್​ಸೀಮ ಪ್ರದೇಶದಲ್ಲಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಜೀವನಾಧಾರಿತವಾಗಿದೆ. ಇದರಲ್ಲಿ ತಮನ್ನಾ, ಚಿರಂಜೀವಿ, ನಯನತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  MORE
  GALLERIES

 • 58

  South Movies: ನಿಜ ಘಟನೆ ಆಧಾರಿತ ಸೂಪರ್​ ಹಿಟ್ ಸಿನಿಮಾಗಳಿವು!

  ಮಲಯಾಳಂನ ಉಯರೆ ಸಿನಿಮಾ ನಿಜ ಜೀವನ ಕಥೆಗಳನ್ನು ಆಧರಿಸಿದೆ. ಬಹಳಷ್ಟು ಯುವತಿಯರು ಟಾಕ್ಸಿಕ್ ರಿಲೇಷನ್​ಶಿಪ್​ನಲ್ಲಿರುವುದನ್ನು ಕಾಣಬಹುದು. ನಾವು ಆ ಕಥೆಯನ್ನು ಶೇರ್ ಮಾಡಲು ಬಯಸಿದ್ದೆವು. ಅದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಉಯರೆ ಸಿನಿಮಾ ತಂಡ ಹೇಳಿತ್ತು.

  MORE
  GALLERIES

 • 68

  South Movies: ನಿಜ ಘಟನೆ ಆಧಾರಿತ ಸೂಪರ್​ ಹಿಟ್ ಸಿನಿಮಾಗಳಿವು!

  1971ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭ ಸಂಶಯಾಸ್ಪದವಾಗಿ ಮುಳುಗಿದ ಪಿಎನ್​ಎಸ್ ಘಾಸಿ ಘಟನೆಯ ಕುರಿತು ದಿ ಘಾಸಿ ಅಟ್ಯಾಕ್ ಸಿನಿಮಾ ಮಾಡಲಾಗಿದೆ. ಇದು ಭಾರತೀಯ ನೌಕಾಪಡೆಯ ಸಬ್​ ಮೆರಿನ್ ಕುರಿತ ಸಿನಿಮಾ ಆಗಿದೆ.

  MORE
  GALLERIES

 • 78

  South Movies: ನಿಜ ಘಟನೆ ಆಧಾರಿತ ಸೂಪರ್​ ಹಿಟ್ ಸಿನಿಮಾಗಳಿವು!

  Awe ಸಿನಿಮಾ ತೆಲುಗು ಭಾಷೆಯ ಸೈಕಲಾಜಿಕಲ್ ಸಿನಿಮಾ. ಇದನ್ನು ಪ್ರಶಾಂತ್ ವರ್ಮ ಅವರು ಬರೆದು ನಿರ್ದೇಶಿಸಿದ್ದಾರೆ. ಈ ಸಿನಿಮಾ 2018ರಲ್ಲಿ ರಿಲೀಸ್ ಆಯಿತು.

  MORE
  GALLERIES

 • 88

  South Movies: ನಿಜ ಘಟನೆ ಆಧಾರಿತ ಸೂಪರ್​ ಹಿಟ್ ಸಿನಿಮಾಗಳಿವು!

  ಮಹಾನಟಿ 2018ರ ತೆಲುಗು ಭಾಷೆಯ ಸಿನಿಮಾ. ಇದು ನಟಿ ಸಾವಿತ್ರಿ ಅವರ ಬಯೋಪಿಕ್. ಇದನ್ನು ನಾಗ್ ಅಶ್ವಿನ್ ಬರೆದು ನಿರ್ದೇಶಿಸಿದ್ದಾರೆ. ಪ್ರಿಯಾಂಕಾ ದತ್ ಇದನ್ನು ನಿರ್ಮಿಸಿದ್ದಾರೆ. ಇದರಲ್ಲಿ ಕೀರ್ತಿ ಸುರೇಶ್, ದುಲ್ಕರ್ ಸಲ್ಮಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  MORE
  GALLERIES