ಬಾಹುಬಲಿ ಸ್ಟಾರ್, ರಾಣಾ ದಗ್ಗುಬಾಟಿ ಮತ್ತು ಲೇಡಿ ಲವ್ ಮಿಹೀಕಾ ಬಜಾಜ್ ಅವರು ಆಗಸ್ಟ್ 8, 2020 ರಂದು ಹೈದರಾಬಾದ್‍ನ ರಾಮನಾಯ್ಡು ಸ್ಟುಡಿಯೋದಲ್ಲಿ ಮದುವೆ ಆಗಿದ್ದರು. ಮಿಹೀಕಾ ಅವರ ತಾಯಿ ಉದ್ಯಮಿ ಮತ್ತು ವರದಿಯ ಪ್ರಕಾರ ಕ್ರಸಲಾ ಜ್ಯುವೆಲ್ಸ್ ಎಂಬ ಬ್ರ್ಯಾಂಡ್‍ನ ನಿರ್ದೇಶಕಿ ಮತ್ತು ಸೃಜನಶೀಲ ಮುಖ್ಯಸ್ಥರು. ಇದಲ್ಲದೆ, ಇವರು ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಕೂಡ ಹೌದು.
ದಕ್ಷಿಣ ಭಾರತದ ನಟ, ಸೂರ್ಯ ಮತ್ತು ಜ್ಯೋತಿಕಾ ಸೆಪ್ಟೆಂಬರ್ 11, 2006 ರಂದು ಗಾಲಾ ವಿವಾಹ ಸಮಾರಂಭದಲ್ಲಿ ವಿವಾಹವಾದರು. ಡಿಎನ್‍ಎಯಲ್ಲಿನ ವರದಿಗಳ ಪ್ರಕಾರ, ಜ್ಯೋತಿಕಾ ಅವರ ಮದುವೆಯ ಉಡುಪಿನ ಬೆಲೆ ರೂ. 3 ಲಕ್ಷ. ಅಷ್ಟೇ ಅಲ್ಲ ದಕ್ಷಿಣ ಭಾರತದ ಚಿತ್ರರಂಗದ ಹಲವು ಗಣ್ಯರು ಮದುವೆಗೆ ಆಗಮಿಸಿದ್ದರು. ಜ್ಯೋತಿಕಾ ಅವರ ತಂದೆ ಚಂದರ್ ಸದನಾ ಅವರು ಚಲನಚಿತ್ರ ನಿರ್ಮಾಪಕರು. ಮತ್ತು ದಕ್ಷಿಣದ ಪ್ರಮುಖ ನಟಿ, ನಗ್ಮಾ ಅವರ ಮಲತಂಗಿ.
ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅತ್ಯಂತ ಆಕರ್ಷಕ ನಟರಲ್ಲಿ ಒಬ್ಬರಾದ ರಾಮ್ ಚರಣ್ ಉಪಾಸನಾ ಕಾಮಿನೇನಿ ಅವರೊಂದಿಗೆ ಜೂನ್ 14, 2012 ರಂದು ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಉಪಾಸನಾ ಅಪೆÇೀಲೋ ಆಸ್ಪತ್ರೆಗಳ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಪ್ರತಾಪ್ ಸಿ. ರೆಡ್ಡಿ ಅವರ ಮೊಮ್ಮಗಳು ಮತ್ತು ಅವರ ತಂದೆ ಅನಿಲ್ ಕಾಮಿನೇನಿ ಕೆಇಐ ಗ್ರೂಪ್‍ನ ಸಂಸ್ಥಾಪಕರಾಗಿದ್ದಾರೆ. ಇದಲ್ಲದೆ, ಸೆಲೆಬ್ ಅವರ ಪತ್ನಿ ಅಪೆÇಲೊ ಫೌಂಡೇಶನ್‍ನ ಉಪಾಧ್ಯಕ್ಷರೂ ಆಗಿದ್ದಾರೆ.