Meera Jasmine: ಕ್ರಿಸ್ಮಸ್ಗೆ ರೆಡಿಯಾಗ್ತಿದ್ದಾರೆ ನಟಿ ಮೀರಾ ಜಾಸ್ಮಿನ್
ನಟಿ ಮೀರಾ ಜಾಸ್ಮಿನ್ ಕ್ರಿಸ್ಮಸ್ ಸಂಭ್ರಮದ ಖುಷಿಯಲ್ಲಿದ್ದಾರೆ. ನಟಿ 20 ದಿನಗಳ ಮುಂಚಿತವಾಗಿ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ನಟಿಯ ಕ್ರಿಸ್ಮಸ್ ಫೋಟೋ ವೈರಲ್ ಆಗಿವೆ.
ಮಿರಾ ಜಾಸ್ಮಿನ್ ಕ್ರಿಸ್ಮಸ್ ಸಲೆಬ್ರೇಷನ್ ಆರಂಭಿಸಿದ್ದಾರೆ. ನಟಿ ಹಂಚಿಕೊಂಡ ಫೋಟೋಗಳಿಗೆ ನೆಟ್ಟಿಗರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
2/ 7
ಮೌರ್ಯ, ಅರಸು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಮೀರಾ ಜಾಸ್ಮಿನ್ ಕನ್ನಡ ಪ್ರೇಕ್ಷಕರ ಮನಸು ಗೆದ್ದಿದ್ದರು. ಈಗ ನಟಿ ಬ್ಲ್ಯಾಕ್ ಡ್ರೆಸ್ನಲ್ಲಿ ಸಿಂಪಲ್ & ಸ್ಟೈಲಿಷ್ ಆಗಿ ಕಾಣಿಸಿದ್ದಾರೆ.
3/ 7
ನಟಿ ಈಗ ತನ್ನ ಮುದ್ದಾದ ಲುಕ್ ಮುಗ್ಧ ನೋಟ ಹಾಗೂ ಗ್ಲಾಮರ್ನಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದಾರೆ. ನಟಿ ತೂಕ ಕೂಡಾ ಕಳೆದುಕೊಂಡಿದ್ದಾರೆ.
4/ 7
ಮಾಲಿವುಡ್ನಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾದ ಮೀರಾ ಜಾಸ್ಮಿನ್ ಯುವಕರ ಫೇವರೇಟ್ ನಟಿಯಾಗಿದ್ದರು. ನಂತರದಲ್ಲಿ ಇತರ ಇಂಡಸ್ಟ್ರಿಯಲ್ಲಿಯೂ ಬೇಡಿಕೆ ಹೆಚ್ಚಾಯಿತು.
5/ 7
ನಟಿ ಇತ್ತೀಚೆಗೆ ಸೋಷಿಯಲ್ ಮೀಡಿಯಾ ಟ್ರೆಂಡ್ ಶುರು ಮಾಡಿದ್ದು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅದೇ ರೀತಿ ಗ್ಲಾಮರಸ್ ಫೋಟೋಶೂಟ್ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.
6/ 7
ನಟಿಯ ಇತ್ತೀಚಿನ ಫೋಟೋಗಳು ಬಹಳ ಬೇಗನೆ ವೈರಲ್ ಆಗುತ್ತಿವೆ. ವಿಶೇಷವಾಗಿ ಕ್ರಿಸ್ಮಸ್ ತಿಂಗಳಾಗಿರುವುದರಿಂದ ಮೀರಾ ಅವರಿಂದ ಇನ್ನಷ್ಟು ಫೆಸ್ಟಿವ್ ಫೋಟೋ ನಿರೀಕ್ಷಿಸಬಹುದಾಗಿದೆ.
7/ 7
ನಟಿ ಸದ್ಯ ಕನ್ನಡ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿಲ್ಲ. ಅದೇ ರೀತಿ ತೆಲುಗಿನಲ್ಲಿಯೂ ಸದ್ದು ಮಾಡುತ್ತಿಲ್ಲ.