ತೆಲುಗಿನ ಹಿಟ್ ಸಿನಿಮಾ ಪೆಳ್ಳಿ ಸಂದಡಿ ಚಿತ್ರದಲ್ಲಿ ಹೀರೋಯಿನ್ ಆಗಿ ಮಿಂಚಿದ ನಟಿ ಶ್ರೀಲೀಲಾ ಈಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಧಮಾಕಾ ಮೂಲಕ ಹಿಟ್ ಸಿನಿಮಾ ಕೊಟ್ಟ ನಟಿ ಈಗ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
2/ 7
ಧಮಾಕಾ ಹಿಟ್ ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆಗಿ ಹೊರಹೊಮ್ಮಿದ ಶ್ರೀಲೀಲಾ ಇದೀಗ ಗ್ಲಾಮರ್ ಮತ್ತು ಆ್ಯಕ್ಷನ್ ಪಾತ್ರಗಳಿಗೆ ಓಕೆ ಎಂದು ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
3/ 7
ಶ್ರೀಲೀಲಾ ಶೇರ್ ಮಾಡಿರುವ ಫೋಟೋಗಳನ್ನು ನೋಡಿದ ನೆಟ್ಟಿಗರು ನೀವು ಸುಂದರವಾಗಿರೋ ಹೀರೋಯಿನ್ ಅಲ್ಲ, ದೇವತೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ತನ್ನ ಟ್ರೆಡಿಷನಲ್ ಲುಕ್ ಫೋಟೋಗಳನ್ನು ಶೇರ್ ಮಾಡಿದ ನಾಲ್ಕೇ ಗಂಟೆಯೊಳಗೆ ಆಕೆ ಎರಡೂವರೆ ಲಕ್ಷ ಲೈಕ್ಸ್ ಪಡೆದಿದ್ದಾರೆ.
4/ 7
ಧಮಾಕಾ ಚಿತ್ರದ ಮೂಲಕ ಭರ್ಜರಿ ಹಿಟ್ ಗಳಿಸಿದ ಕನ್ನಡತಿ ಶ್ರೀಲೀಲಾ ಈಗ ಗ್ಲಾಮರ್ ಡೋಸ್ ಹೆಚ್ಚಿಸಿಕೊಂಡಿದ್ದಾರೆ. ಈಗ ಸುಂದರವಾದ ಲಂಗ ದಾವಣಿ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
5/ 7
ಪೆಲ್ಲಿ ಸಂದಡಿನಲ್ಲಿ ಶ್ರೀಲೀಲಾ ತಮ್ಮ ನಟನೆಯ ಜೊತೆಗೆ ತಮ್ಮ ಸೌಂದರ್ಯದಿಂದಲೂ ಮೋಡಿ ಮಾಡಿದ್ದಾರೆ. ಆದರೆ ಗ್ಲಾಮರ್ ನಲ್ಲಿ ನಂಬಿಕೆ ಇಲ್ಲ, ನಟನೆಯಲ್ಲೂ ಇಂಪ್ರೆಸ್ ಮಾಡುತ್ತೇನೆ ಎನ್ನುತ್ತಾರೆ ಶ್ರೀಲೀಲಾ.
6/ 7
ಒಂದೇ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಕನ್ನಡದ ನಟಿ ಶ್ರೀಲೀಲಾ ಕೈಯಲ್ಲಿ ಸದ್ಯ ಏಳೆಂಟು ಪ್ರಾಜೆಕ್ಟ್ ಗಳಿವೆಯಂತೆ. ಭರ್ಜರಿ ಆಫರ್ ಪಡೆಯುತ್ತಿದ್ದಾರೆ ನಟಿ.
7/ 7
ಶ್ರೀಲೀಲಾ ಬಾಲಯ್ಯ, ಮಹೇಶ್ ಬಾಬು ಶರ್ವಾನಂದ್ ಮತ್ತು ನಿತಿನ್ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಟಾಲಿವುಡ್ನಲ್ಲಿ ಹೊಸ ನಾಯಕಿಯರಿಗೆ ಅವಕಾಶಗಳು ಬರುತ್ತಲೇ ಇರುತ್ತವೆ.