ಸೌತ್ ನಟಿ ಶುಭ್ರ ಅಯ್ಯಪ್ಪ ಅವರ ವಿವಾಹ ಕಾರ್ಯಕ್ರಮದ ಫೋಟೋಗಳು ಈ ಹಿಂದೆ ವೈರಲ್ ಆಗಿದ್ದವು. ಇದೀಗ ಹನಿಮೂನ್ ಮೂಡ್ ನಲ್ಲಿರುವ ಜೋಡಿ ಫೋಟೋಶೂಟ್ ಮಾಡಿಸಿದ್ದು, ಪತಿ ವಿಶಾಲ್ ಶಿವಪ್ಪ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
2/ 7
ಸೌತ್ ನಟಿ ಶುಭ್ರ ಅಯ್ಯಪ್ಪ ತನ್ನ ಹುಟ್ಟೂರು ಕೊಡಗಿನಲ್ಲಿ ಅದ್ಧೂರಿಯಾಗಿ ವಿವಾಹವಾದ್ರು. 150 ವರ್ಷ ಹಳೆಯ ಪೂರ್ವಿಕರ ಮನೆಯಲ್ಲಿ ನಟಿ ವೈವಾಹಿಕ ಜೀವನಕ್ಕೆ ಕಾಲಿಟ್ರು. ಇದೀಗ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
3/ 7
ನಟಿ ಶುಭ್ರ ಅಯಪ್ಪ ಅವರು ಪತಿ ವಿಶಾಲ್ ಜೊತೆಗಿನ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಸ್ಟೈಲಿಶ್ ಡ್ರೆಸ್ ಧರಿಸಿದ್ದು, ವಿಶಾಲ್ ಶಿವಪ್ಪ ಕಪ್ಪು ಸೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.
4/ 7
ದಂಪತಿಯ ರೊಮ್ಯಾಂಟಿಕ್ ಫೋಟೋಗೆ ಲೈಕ್ ಗಳ ಸುರಿಮಳೆಯಾಗಿದೆ. ಫೋಟೋ ಹಂಚಿಕೊಂಡ ನಟಿ ಕಾಕ್ಟೈಲ್ ನೈಟ್ ಬರೆದುಕೊಂಡಿದ್ದಾರೆ.
5/ 7
ವಜ್ರಕಾಯ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಶುಭ್ರಾ ಅಯ್ಯಪ್ಪ ಅವರು ಜನವರಿ 18ರಂದು ವಿಶಾಲ್ ಶಿವಪ್ಪ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
6/ 7
ಶುಭ್ರಾ ಅವರು ಮದುವೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ನವಜೋಡಿಗೆ ಶುಭಕೋರಿದ್ದರು.
7/ 7
ಮಾಡೆಲ್ ಹಾಗೂ ನಟಿಯಾಗಿ ಶುಭ್ರಾ ಫೇಮಸ್ ಆಗಿದ್ದಾರೆ. 2014ರಲ್ಲೇ ಚಿತ್ರರಂಗಕ್ಕೆ ನಟಿ ಶುಭ್ರಾ ಎಂಟ್ರಿ ಕೊಟ್ಟಿದ್ರು. ಕಳೆದ ವರ್ಷ ತೆರೆಗೆ ಬಂದ ‘ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ’ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಶುಭ್ರಾ ಅವರು ‘ರಾಮನ ಅವತಾರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ವಿವಾಹವಾಗಿದ್ದಾರೆ.