Viral Photos: ಥೈಲ್ಯಾಂಡ್ನಲ್ಲಿ ಸೌತ್ ನಟಿ ಮಸ್ತಿ; ಪತಿ ಜೊತೆಗಿನ ಲಿಪ್ ಲಾಕ್ ಫೋಟೋ ಹಂಚಿಕೊಂಡ ಪೂಜಾ
ಸೌತ್ ನಟಿ ಕಾಂಚನಾ 2 ಖ್ಯಾತಿಯ ಪೂಜಾ ರಾಮಚಂದ್ರನ್ ಗರ್ಭಿಣಿಯಾಗಿದ್ದು, ಪತಿ ಜೊತೆ ಥೈಲ್ಯಾಂಡ್ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ. ಪತಿಯೊಂದಿಗೆ ಲಿಪ್ ಲಾಕ್ ಮಾಡಿದ ಫೋಟೋಗಳು ವೈರಲ್ ಆಗಿದೆ.
ಸೌತ್ ನಟಿ ಪೂಜಾ ರಾಮಚಂದ್ರನ್ ಪತಿಯೊಂದಿಗೆ ರೋಮ್ಯಾಂಟಿಕ್ ಮೂಡ್ ನಲ್ಲಿದ್ದಾರೆ. ಇತ್ತೀಚಿಗಷ್ಟೇ ತಾನು ತಾಯಿಯಾಗಲಿದ್ದೇನೆ ಎಂದು ಬೇಬಿ ಬಂಪ್ನೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಕಿಸ್ ಮಾಡ್ತಿರೋ ಫೋಟೋಗಳನ್ನು ಶೇರ್ ಮಾಡಿದ್ದಾರೆ. (ಫೋಟೋ: Instagram)
2/ 8
ಥೈಲ್ಯಾಂಡ್ನ ಫುಕೆಟ್ ನ ಕಡಲತೀರದಲ್ಲಿ ಹಾಲಿ ಡೇ ಎಂಜಾಯ್ ಮಾಡ್ತಿದ್ದಾರೆ. ಪೂಜಾ ರಾಮಚಂದ್ರನ್ ಸಂಜೆ ಕಡಲತೀರದಲ್ಲಿ ರೆಡ್ ಅಂಡ್ ವೈಟ್ ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ಕಾಣಿಸಿಕೊಂಡರು.
3/ 8
ಸೋಷಿಯಲ್ ಮೀಡಿಯಾದಲ್ಲಿ ಪೂಜಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯು ಗರ್ಭಿಣಿಯಾಗಿದ್ದು, ಸಖತ್ ಖುಷಿಯಲ್ಲಿರುವ ಪೂಜಾ ಗಂಡನ ಜೊತೆ ಸಮಯ ಕಳೆಯುತ್ತಿದ್ದಾರೆ.
4/ 8
ಪೂಜಾ ರಾಮಚಂದ್ರನ್ ಫೋಟೋಗಳನ್ನು ನೋಡಿದ ನೆಟಿಗರು ಅವರೇ ಹ್ಯಾಪಿಯೆಸ್ಟ್ ಕಪಲ್ ಎಂದು ಕಮೆಂಟ್ ಗಳನ್ನು ಮಾಡಿದ್ದಾರೆ. ಈ ಫೋಟೋ ಹಾಗೂ ವೀಡಿಯೊಗಳಿಗೆ ಈಗಾಗಲೇ ಸಾವಿರಾರು ಲೈಕ್ ಪಡೆದಿವೆ. ನೆಟಿಜನ್ ಗಳೂ ನೂರಾರು ಕಾಮೆಂಟ್ ಮಾಡ್ತಿದ್ದಾರೆ.
5/ 8
ತೆಲುಗು ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2 ಮೂಲಕ ಪೂಜಾ ರಾಮಚಂದ್ರನ್ ಮತ್ತಷ್ಟು ಫೇಮಸ್ ಆದ್ರು. 38 ವರ್ಷದ ಈ ಟಾಲಿವುಡ್ ನಟಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. (ಫೋಟೋ: Instagram)
6/ 8
ಪೂಜಾ ರಾಮಚಂದ್ರನ್ ಮೊದಲ ಬಾರಿಗೆ 2010 ರಲ್ಲಿ ವಿಜೆ ಕ್ರೇಗ್ ರನ್ನು ವಿವಾಹವಾಗಿ 2017 ರಲ್ಲಿ ವಿಚ್ಛೇದನ ಪಡೆದರು. ಇದರ ನಂತರ, 2019 ರಲ್ಲಿ ಜಾನ್ ಕೊಕನ್ ರನ್ನು 2ನೇ ಮದುವೆಯಾದ ನಟಿ 4 ವರ್ಷಗಳ ನಂತರ ಈಗ ಗರ್ಭಿಣಿಯಾಗಿದ್ದಾರೆ. (ಫೋಟೋ: Instagram)
7/ 8
ಪೂಜಾ ಪತಿ ಜಾನ್ ಕೂಡ ಸಿನಿಮಾ ರಂಗದವರೇ ಆಗಿದ್ದಾರೆ. 'ಬಾಹುಬಲಿ' ಮತ್ತು 'ಕೆಜಿಎಫ್ ಚಾಪ್ಟರ್-1' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. (ಫೋಟೋ: Instagram)
8/ 8
ಪೂಜಾ ರಾಮಚಂದ್ರನ್ 2ನೇ ಮದುವೆಯಾಗಿದ್ದರೂ ಪತಿಯೊಂದಿಗೆ ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಪತಿ ಜೊತೆಗಿನ ಅನೇಕ ಫೋಟೋಗಳನ್ನು ನಟಿ ಹಂಚಿಕೊಳ್ಳುತ್ತಾರೆ. (ಫೋಟೋಗಳು-ಇನ್ಸ್ಟಾಗ್ರಾಮ್)