ನಯನತಾರಾ ಅವರು ಟೊಯೊಟಾ ಇನ್ನೋವಾ ಕ್ರಿಸ್ಟಾ, ಫೋರ್ಡ್ ಎಂಡೀವರ್ ಮತ್ತು ಐಷಾರಾಮಿ ಬಿಎಂಡಬ್ಲ್ಯು 7-ಸಿರೀಸ್ ಅನ್ನು ಹೊಂದಿದ್ದಾರೆ. ಇದರ ಬೆಲೆ ಸುಮಾರು 1.76 ಕೋಟಿ ರೂ. ಮಾಹಿತಿ ಪ್ರಕಾರ ನಯನತಾರಾ ಬಳಿ ಖಾಸಗಿ ಜೆಟ್ ಮಾತ್ರವಲ್ಲದೆ ಹಲವು ಐಷಾರಾಮಿ ಕಾರುಗಳಿವೆ. ಕಾರ್ ದೇಖೋ ಪ್ರಕಾರ, ನಟಿ 74.50 ಲಕ್ಷ ಮೌಲ್ಯದ BMW 5 ಸಿರೀಸ್ ಮತ್ತು 88 ಲಕ್ಷ ಮೌಲ್ಯದ Mercedes GLS 350d ಅನ್ನು ಹೊಂದಿದ್ದಾರೆ.
ತನ್ನ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು ಮತ್ತು ಹೂಡಿಕೆಗಳ ಕುರಿತು ಮಾತನಾಡಿದ ನಟಿ ತನ್ನ ಒಪ್ಪಂದಗಳಿಂದ ಸುಮಾರು 5 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ. ಅವರು ತನಿಷ್ಕ್, ಟಾಟಾ ಸ್ಕೈ, ಕೆ ಬ್ಯೂಟಿ ಮತ್ತು ಉಜಾಲಾ ಮುಂತಾದ ಜನಪ್ರಿಯ ಬ್ರಾಂಡ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. ತನ್ನ ಹೂಡಿಕೆಗಳ ಬಗ್ಗೆ ಮಾತನಾಡುತ್ತಾ, ನಟಿ "ದಿ ಲಿಪ್ ಬಾಮ್ ಕಂಪನಿ" ಎಂಬ ತನ್ನ ಸ್ವಂತ ಸ್ಕಿನ್‌ಕೇರ್ ಬ್ರ್ಯಾಂಡ್ ಅನ್ನು ಆರಂಭಿಸಿದ್ದಾರೆ. ಇದರಲ್ಲಿ ಅವರು ಡಾ. ರೆನಿತಾ ರಾಜನ್ ಅವರೊಂದಿಗೆ ಪಾರ್ಟ್ನರ್ಶಿಪ್ ಹೊಂದಿದ್ದಾರೆ.