ನಟಿ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರನ್ ಮದುವೆಯಾಗಿ ಹಲವು ತಿಂಗಳುಗಳೇ ಕಳೆದಿವೆ. ಆದರೂ ಆಗಾಗ ಈ ದಂಪತಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನಟಿ ಮಹಾಲಕ್ಷ್ಮೀ ಸೀರೆ ಉಟ್ಟು ಕಂಗೊಳಿಸಿದ ಫೋಟೋ ವೈರಲ್ ಆಗಿದ್ದು, ಹೆಂಡತಿಯ ಸೌಂದರ್ಯವನ್ನು ರವೀಂದ್ರನ್ ಹೊಗಳಿದ್ದಾರಂತೆ!
ಸೌತ್ ಚಿತ್ರಗಳಲ್ಲಿ ಕೆಲಸ ಮಾಡಿರುವ ನಟಿ ಮಹಾಲಕ್ಷ್ಮಿ ಅವರು ಸೀರೆಯಲ್ಲಿ ತಮ್ಮ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕಪ್ಪು ಕಾಂಬಿನೇಷನ್ನ ಸೀರೆಯಲ್ಲಿ ಸಖತ್ತಾಗಿ ಪೋಸ್ ನೀಡುತ್ತಿದ್ದು, ಆಕೆಯ ಗ್ಲಾಮರಸ್ ಸ್ಟೈಲ್ ಇದರಲ್ಲಿ ಕಾಣಿಸುತ್ತಿದೆ.
2/ 8
ಕಪ್ಪು ಸೀರೆಯಲ್ಲಿ ಪೋಸ್ ನೀಡುತ್ತಿರುವ ಮಹಾಲಕ್ಷ್ಮಿ ಅದ್ಭುತವಾಗಿ ಕಾಣುತ್ತಿದ್ದಾರೆ. ಅವರ ಚಿತ್ರಗಳು ಕಡಿಮೆ ಸಮಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿವೆ.
3/ 8
ಅಂದಹಾಗೆ, ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಅವರನ್ನು ಮದುವೆಯಾದ ಬಳಿಕ ನಟಿ ಮಹಾಲಕ್ಷ್ಮೀ ಸದಾ ಸುದ್ದಿಯಲ್ಲಿದ್ದಾರೆ. ಆದರೂ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚಿತ್ರಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
4/ 8
ಸೋಷಿಯಲ್ ಮೀಡಿಯಾ ಬಳಕೆದಾರರು ದಂಪತಿಯನ್ನು ಸಾಕಷ್ಟು ಟ್ರೋಲ್ ಮಾಡುತ್ತಾರೆ. ಇದಕ್ಕೆ ಕಾರಣ ಮಹಾಲಕ್ಷ್ಮಿ ಗಂಡ ರವೀಂದ್ರನ್!
5/ 8
ಅದಕ್ಕೆ ಡೋಂಟ್ ಕೇರ್ ಎನ್ನದ ಮಹಾಲಕ್ಷ್ಮೀ ತನ್ನ ಗಂಡನ ಮೇಲೆ ಬಹಳಷ್ಟು ಪ್ರೀತಿಯನ್ನು ತೋರಿಸುತ್ತಾರೆ. ಆಗಾಗ್ಗೆ ಫೋಟೋಗಳನ್ನು ಸಹ ಹಂಚಿಕೊಳ್ಳುತ್ತಾರೆ.
6/ 8
ಅವರಿಬ್ಬರೂ ತಿರುಪತಿಯಲ್ಲಿ ವಿವಾಹವಾದರು. ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಸಹ ಮಾಡಿದರು. ಮದುವೆಯ ನಂತರ, ಈ ಮಧ್ಯೆ, ಟಿವಿ ಆಂಕರ್ ಮಹಾಲಕ್ಷ್ಮಿ ಮತ್ತು ರವೀಂದ್ರನ್ ಚಂದ್ರಶೇಖರನ್ ಅವರ ವಯಸ್ಸಿನ ಅಂತರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
7/ 8
ಮಹಾಲಕ್ಷ್ಮಿ 21 ಮಾರ್ಚ್ 1990 ರಂದು ಜನಿಸಿದರು. ಅವರ ವಯಸ್ಸು 32 ವರ್ಷಗಳು. ಆದರೆ ಅವರ ಎರಡನೇ ಪತಿ ರವೀಂದ್ರನ್ ಚಂದ್ರಶೇಖರನ್ 1 ಜೂನ್ 1970 ರಂದು ಜನಿಸಿದರು. ಅವರಿಗೆ 52 ವರ್ಷ. ಈ ರೀತಿಯಾಗಿ, ಇಬ್ಬರ ವಯಸ್ಸಿನಲ್ಲೂ 20 ವರ್ಷಗಳ ವ್ಯತ್ಯಾಸವಿದೆ.
8/ 8
ಟಿವಿ ನಿರೂಪಕಿ ಮಹಾಲಕ್ಷ್ಮಿ ನಿರ್ಮಾಪಕ ರವೀದ್ರನ್ ಚಂದ್ರಶೇಖರನ್ ಅವರಿಗಿಂತ 20 ವರ್ಷ ಚಿಕ್ಕವರು. ಆದರೂ ಪ್ರೀತಿಯಲ್ಲಿ ಯಾವುದೇ ವಯಸ್ಸಿನ ಮಿತಿಯಿಲ್ಲ ಎನ್ನುದನ್ನು ಈ ಜೋಡಿ ತೋರಿಸಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿದ್ದು, ಮದುವೆಯಾಗಲು ಅಸಲಿ ಕಾರಣ ಏನು ಅನ್ನೋದರ ಬಗ್ಗೆಯೂ ಚರ್ಚೆಯಾಗುತ್ತಿದೆ.