ಟಾಲಿವುಡ್ ಅಂಗಳದಲ್ಲಿ ಇತ್ತೀಚೆಗೆ ಬೆಂಕಿನ ಉಂಡೆಯಂತೆ ಇವರ ವಿಚ್ಛೇದನ ವಿಚಾರ ಹರಿದಾಡುತ್ತಿತ್ತು. ಇದೆಲ್ಲಾ ಬರೀ ಅಂತೆಕಂತೆ, ಇವರಿಬ್ಬರೂ ಅನನ್ಯ ವಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ವಿಚ್ಛೇದನದ ಬಗ್ಗೆ ಕೊನೆಗೂ ಮಾತನಾಡಿರುವ ಸ್ಟಾರ್ ದಂಪತಿ, ತಾವು ವಿಚ್ಛೇದನ ಪಡೆಯುತ್ತಿರುವ ವಿಷಯವನ್ನು ತಿಳಿಸಿದ್ದಾರೆ. ನಟಿ ಸಮಂತಾ ಹಾಗೂ ನಾಗಚೈತನ್ಯ ತಮ್ಮ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಜೋಡಿಯ ಬಗ್ಗೆ ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ.
ಪ್ರೀತಿಸಿ ಮದುವೆಯಾಗಿ ಈ ರೀತಿ ಬೇರೆಯಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇನ್ನು ಈ ರೀತಿಯ ನಿರ್ಧಾರಕ್ಕೆ ನಾಗಚೈತನ್ಯ ಕಾರಣ ಎಂದು ಹೇಳಲಾಗುತ್ತಿದೆ. ನಾಗಚೈತನ್ಯ ಸಮಂತಾ ಅವರ ಬಗ್ಗೆ ತುಂಬಾ ಪೊಸೆಸಿವ್ ಆಗಿದ್ದರಂತೆ. ಇದು ಸಮಂತ ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ತನಗಿಷ್ಟ ಬಂದ ಕೆಲಸ ಹಾಗೂ ತನಗಿಷ್ಟ ಬಂದ ರೀತಿಯಲ್ಲಿ ಬದುಕಲು ಸಮಂತಾ ಇಷ್ಟಪಟ್ಟಿದ್ದರು. ಹೀಗಾಗಿ ಇವರ ಮಧ್ಯೆ ಸಣ್ಣ ಸಣ್ಣ ವಿಚಾರಕ್ಕೂ ಮನಸ್ತಾಪ ಉಂಟಾಗುತ್ತಿತ್ತು. ಇದೇ ಕಾರಣದಿಂದ ಇಬ್ಬರು ದೂರ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ವಿಚಾರಕ್ಕೆ ಕೂಡ ಇವರಿಬ್ಬರ ನಡುವೆ ಕೊಂಚ ಗಲಾಟೆಯಾಗಿತ್ತು ಅಂತ ಹೇಳಲಾಗಿತ್ತು. ನಾಗಚೈತನ್ಯ ಅವರ ಕುಟುಂಬದಲ್ಲೂ ಈ ಬಗ್ಗೆ ಕೊಂಚ ಅಸಮಾಧಾನವಿತ್ತು. ಇದಾದ ಬಳಿಕ ಬಾಲಿವುಡ್ ನಲ್ಲಿ ಸಮಂತಾಗೆ ಬೇಡಿಕೆ ಹೆಚ್ಚಾಯಿತು. ಮುಂಬೈಗೆ ಹೋಗಲು ನಿರ್ಧರಿಸಿದ್ದ ಸಮಂತಾರ ನಿರ್ಧಾರ, ನಾಗಚೈತನ್ಯ ಅವರಿಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಈ ರೀತಿಯ ನಿರ್ಧಾರ ಕೈಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.