ಉಪೇಂದ್ರ ಅವರೊಂದಿಗೆ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ್ದ ಸೌಂದರ್ಯಾ ಮೊದಲ ಚಿತ್ರದಲ್ಲೇ ಎಲ್ಲರ ಮೆಚ್ಚುಗೆಗಳಿಸಿದ್ದರು. ಆ ಬಳಿಕ ತೆಲುಗಿನಲ್ಲಿ ಮಿಸ್ಟರ್ ಪ್ರೇಮಿಕುಡು, ಕನ್ನಡದಲ್ಲಿ ಪಾರು ವೈಫ್ ಆಫ್ ದೇವದಾಸ್, ಸಿಂಹಾದ್ರಿ ಚಿತ್ರಗಳಲ್ಲಿ ಅಭಿನಯಿಸಿದ್ದರು.
ಕೊರೋನಾ ಲಾಕ್ಡೌನ್ನಿಂದ ಲಂಡನ್ನಲ್ಲಿ ಸಿಲುಕಿದ್ದ ಹಿರಿಯ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಅವರ ಪುತ್ರಿ ಸೌಂದರ್ಯ ತಾವು ಅನುಭವಿಸಿದ ನೋವಿನ ಕತೆಯನ್ನು ಹಂಚಿಕೊಂಡಿದ್ದಾರೆ.
2/ 13
ಇಂಗ್ಲೆಂಡ್ನಲ್ಲಿ ಕೊರೋನಾದಿಂದ ಏಕಾಏಕಿ ಲಾಕ್ಡೌನ್ ಹೇರಲಾಗಿತ್ತು. ಇದರಿಂದ ನಾನು ಸೇರಿದಂತೆ ಇತರರು ಎರಡು ತಿಂಗಳುಗಳ ಕಾಲ ಎಲ್ಲೂ ಹೊರಹೋಗದಂತೆ ಬಂಧಿಯಾಗಿದ್ದವು.
3/ 13
ನಾನು ಇಂಗ್ಲೆಂಡ್ನ ವೇಲ್ಸ್ನ 'ಸ್ವಾನ್ಸೀ ವಿವಿ' ಯಲ್ಲಿ ಅಂತಿಮ ವರ್ಷದ ಬಿ.ಎಸ್ಸಿ (ಬಾಟನಿ) ಆನರ್ಸ್ ವ್ಯಾಸಂಗ ಮಾಡುತ್ತಿದ್ದೆ. ಹಾಗೆಯೇ ಫ್ರೆಂಡ್ ಜೊತೆ ಅಲ್ಲಿಯೇ ಅಪಾರ್ಟ್ಮೆಂಟ್ವೊಂದರಲ್ಲಿ ಬಾಡಿಗೆಗೆ ನೆಲೆಸಿದ್ದೆವು.
4/ 13
ಇಂಗ್ಲೆಂಡ್ನಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಂತೆ, ವಿದೇಶಿ ವಿದ್ಯಾರ್ಥಿಗಳು ಹೋರ ಹೋಗದಂತೆ ನಿರ್ಬಂಧ ಹೇರಲಾಯಿತು. ಇದರ ಬೆನ್ನಲ್ಲೇ ನಮ್ಮ ವಿವಿಯ ಇಬ್ಬರು ಪ್ರೊಫೆಸರ್ಗಳು ಹಾಗೂ ಒಬ್ಬ ವಿದ್ಯಾರ್ಥಿ ಕೂಡ ಮೃತಪಟ್ಟರು.
5/ 13
ಇದರಿಂದ ನಮ್ಮ ಪರಿಸ್ಥಿತಿ ಮತ್ತಷ್ಟು ಸಂಕಷ್ಟಕ್ಕೀಡಾಗುವಂತಾಯಿತು. ಇಡೀ ವಿವಿಯನ್ನು ಸೀಲ್ಡೌನ್ ಮಾಡಲಾಯಿತು. ಇದರಿಂದ ನಾನು ಮಾರ್ಚ್22 ರಂದು ದುಬೈ ಮೂಲಕ ಬೆಂಗಳೂರಿಗೆ ಬರುವ ಪ್ಲ್ಯಾನ್ ಮಾಡಿಕೊಂಡಿದ್ದೆ. ಆದರೆ ಅಲ್ಲಿಯೂ ಪ್ರಯಾಣ ನಿರ್ಬಂಧಿಸಲಾಯಿತು.
6/ 13
ಇದರಿಂದ ಮತ್ತೆ ಲಂಡನ್ಗೆ ಬರಬೇಕಾದ ಪರಿಸ್ಥಿತಿ. ಇತ್ತ ಅದಾಗಲೇ ನಾವು ಬಾಡಿಗೆ ಮನೆ ಖಾಲಿ ಮಾಡಿದ್ದೆವು. ಇದರಿಂದ ಲಂಡನ್ ವಿಮಾನ ನಿಲ್ದಾಣದಲ್ಲೇ ನಿರಾಶ್ರಿತಳಾಗಿ ಉಳಿಯುವಂತಾಯಿತು ಎಂದು ಸ್ಮರಿಸಿದರು ಸೌಂದರ್ಯ.
7/ 13
ಆ ಬಳಿಕ ಕುವೈತ್ನ ಸ್ನೇಹಿತೆಯ ಸಹಾಯದಿಂದ ಮತ್ತೆ ಬಾಡಿಗೆ ಮನೆ ಮಾಲೀಕರಿಗೆ ವಿಷಯ ಮುಟ್ಟಿಸಿದೆ. ಆನಂತರ ಮನೆಗೆ ತೆರಳಿದೆ. ಆದರೆ ಅದಾಗಲೇ ವಿದ್ಯುತ್, ನೀರು, ಇಂಟರ್ನೆಟ್, ಫೋನ್ ಸೇರಿದಂತೆ ಎಲ್ಲಾ ಸಂಪರ್ಕ ಕಡಿತಗೊಳಿಸಲಾಗಿತ್ತು.
8/ 13
ಇರುವುದರಲ್ಲೇ ನೆಮ್ಮದಿ ಕಂಡುಕೊಂಡ ನನಗೆ ಸ್ನೇಹಿತೆ ಸಹಾಯ ಮಾಡಿದಳು. ಹೀಗೆ ಭಯದಲ್ಲೇ ದಿನದೂಡುತ್ತಿರುವಾಗ ಕೇಂದ್ರ ಸರ್ಕಾರದಿಂದ ಏರ್ಲಿಫ್ಟ್ ಸುದ್ದಿ ಬಂತು. ಈ ಹಿಂದೆ ಕೂಡ ಇದೇ ರೀತಿಯ ಸುದ್ದಿಗಳು ಹರಿದಾಡಿದ್ದರಿಂದ ನಾನು ಮತ್ತೆ ಸುಳ್ಳು ಸುದ್ದಿ ಎಂದುಕೊಂಡಿದ್ದೆ.
9/ 13
ಆದರೆ ಏರ್ ಇಂಡಿಯಾ ವಿಮಾನ ಸಂಸ್ಥೆಯಿಂದ ಕರೆ ಬಂದಾಗ ಹೋದ ಜೀವ ಮರಳಿ ಬಂದಂತಾಗಿತ್ತು. ಲಂಡನ್ನಿಂದ ಬೆಂಗಳೂರಿನ ಹೊರಟ ಮೊದಲ ವಿಮಾನದಲ್ಲೇ ನನಗೆ ಟಿಕೆಟ್ ಲಭಿಸಿತ್ತು.
10/ 13
ಸದ್ಯ ಬೆಂಗಳೂರಿನ ಹೊಟೇಲ್ವೊಂದರಲ್ಲಿ ಕ್ವಾರೆಂಟೈನ್ ಆಗಿದ್ದೇನೆ. ನಮ್ಮ ವಿಮಾನದಲ್ಲಿದ್ದ ಎಲ್ಲರ ಪರೀಕ್ಷೆ ನಡೆಸಲಾಗಿದ್ದು, ಎಲ್ಲರೂ ಸೇಫ್ ಎಂಬ ರಿಸಲ್ಟ್ ಸಿಕ್ಕಿದೆ.
11/ 13
ಆದರೆ ಕಳೆದೆರಡು ತಿಂಗಳು ನಾನು ಅನುಭವಿಸಿದ ಯಾತನೆ ನೆನಸಿಕೊಂಡರೆ ಮತ್ತೆ ಯಾವತ್ತೂ ಬೇರೆ ದೇಶಕ್ಕೆ ಹೋಗಬಾರದು. ವಿದೇಶಗಳಿಗಿಂತ ನಮ್ಮೂರೇ ಸಾಕು ಎಂದೆನಿಸಿದೆ ಎಂದರು ಸೌಂದರ್ಯ ಜಯಮಾಲಾ.