ನಾನು ಮಧುರೈನಲ್ಲಿ ಶೂಟಿಂಗ್ ಮಾಡುತ್ತಿದ್ದೆ ವೇಳೆ ನಾನು ಕುರ್ಚಿಯ ಮೇಲೆ ಕುಳಿತಿದ್ದೆ, ನಾನು ತಲೆಯೆತ್ತಿ ನೋಡಿದೆ ಮತ್ತು ಎಲ್ಲರೂ ಚಿಕ್ಕನಿದ್ರೆ ಜಾರಿದ್ರು. ಎಲ್ಲರೂ ಏಕೆ ಮಲಗುತ್ತಿದ್ದಾರೆ ಎಂದು ನಾನು ಒಬ್ಬ ಹುಡುಗನನ್ನು ಕೇಳಿದೆ. ಚಿಕ್ಕನಿದ್ರೆ ತೆಗೆದುಕೊಂಡ ನಂತರ ನಾವು ರಿಫ್ರೆಶ್ ಆಗುತ್ತೇವೆ ಎಂದು, ಇದು ಕೂಡ ಅಲ್ಲಿನ ಸಂಸ್ಕೃತಿ ಎಂದು ಸೋನು ಸೂದ್ ಹೇಳಿದ್ದಾರೆ.
'ಸೂರ್ಯೋದಯಕ್ಕೆ ಕಾಲ್ ಶೀಟ್' ಅಂದರೆ ದಕ್ಷಿಣದಲ್ಲಿ ಸೂರ್ಯ ಉದಯಿಸಿದ ತಕ್ಷಣ ಮೊದಲ ಶಾಟ್ ಮಾಡುವ ಪರಿಕಲ್ಪನೆ ನಿಜಕ್ಕೂ ಕುತೂಹಲಕಾರಿಯಾಗಿದೆ ಎಂದು ಸೋನು ಸೂದ್ ಹೇಳಿದ್ದಾರೆ. ಸೂರ್ಯೋದಯವಾದ ತಕ್ಷಣ ಮೊದಲ ಶಾಟ್ ತೆಗೆಯಲು ಅಲ್ಲಿನ ಚಿತ್ರತಂಡಗಳು ಇಷ್ಟಪಡುತ್ತಾರೆ. 5-5:30ಕ್ಕೆ ಎಲ್ಲಾ ಸೆಟ್ನಲ್ಲಿ ಇರುತ್ತಾರೆ. ಸೂರ್ಯ ಉದಯಿಸಿದ ತಕ್ಷಣ ರೆಡಿಯಾಗಿ ಕೆಲವು ಶಾಟ್ಗಳನ್ನು ಮುಗಿಸುತ್ತೇನೆ ಎಂದು ಸೋನು ವಿವರಿಸಿದರು.