ಸೋನು ಸೂದ್ 20 ವಯಸ್ಸಲ್ಲಿ ಕನಸನ್ನು ನನಸು ಮಾಡಿಕೊಳ್ಳಲು ಮುಂಬೈಗೆ ಬಂದಿದ್ದರು. ಸಂದರ್ಶನವೊಂದರಲ್ಲಿ ಮಾತಾಡಿದ ಸೋನು ಸೂದ್ 20 ವರ್ಷಗಳ ಹಿಂದೆ ನಾನು ಲುಧಿಯಾನದಿಂದ ಡೀಲಕ್ಸ್ ಎಕ್ಸ್ಪ್ರೆಸ್ನಲ್ಲಿ ಕುಳಿತು ಮುಂಬೈಗೆ ತೆರಳಿದ್ದೆ ಎಂದು ನನಗೆ ನೆನಪಿದೆ. ನಾನು ಸ್ಟೇಷನ್ ನಿಂದ ಫಿಲ್ಮ್ ಫೇರ್ ಮ್ಯಾಗಜೀನ್ ಖರೀದಿಸಿದ್ದೆ. ಮುಂಬೈ ತಲುಪಿದ ನಂತರ ಸೋನು ಸೂದ್ ಹೋರಾಟ ಆರಂಭಿಸಿದರು.
ಸೋನು ಸೂದ್ ಆರಂಭದಲ್ಲಿ ಜಾಹೀರಾತು ಮತ್ತು ಕಿರುಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಕೆರಿಯರ್ ಹುಡುಕುತ್ತಿದ್ದರು. ಬಳಿಕ ಸೋನು ಸೂದ್ಗೆ 10 ವರ್ಷಗಳಿಂದ ಬಾಲಿವುಡ್ ನಲ್ಲಿ ವಿಶೇಷ ಮನ್ನಣೆ ಸಿಕ್ಕಿರಲಿಲ್ಲ. 2008ರಲ್ಲಿ, ಸೋನು ಸೂದ್ ತೆಲುಗು ಚಿತ್ರ 'ಅರುಂಧತಿ' ಸಿನಿಮಾದಲ್ಲಿ ಕೆಲಸ ಮಾಡಿದರು. ಈ ಚಿತ್ರದ ಮೂಲಕ ಸೋನು ಸಿನಿ ಕೆರಿಯರ್ ಬದಲಾಯ್ತು .ಬಳಿಕ 'ದಬಾಂಗ್' ಚಿತ್ರದಲ್ಲಿ ಸೋನು ವಿಲನ್ ಪಾತ್ರದಲ್ಲಿ ಮಿಂಚಿದ್ರು. ಇದೀಗ ಸೋನು ಬಾಲಿವುಡ್ನ ಸೂಪರ್ ಸ್ಟಾರ್ ಆಗಿದ್ದು ಕೋಟಿಗಳ ಒಡೆಯರಾಗಿದ್ದಾರೆ. (ಫೋಟೋ ಕೃಪೆ-Instagram@sonu_sood)
ಇದಾದ ನಂತರ 2006ರಲ್ಲಿ ತೆರೆಕಂಡ ‘ಗ್ಯಾಂಗ್ ಸ್ಟರ್’ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ಕಂಗನಾ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಉದ್ಯಮದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ. ಇಂದು ಕಂಗನಾ ರಣಾವತ್ ಕೋಟಿಗಳ ಒಡೆತಿಯಾಗಿದ್ದು, ಈಗ ನಿರ್ದೇಶಕಿಯೂ ಆಗಿದ್ದಾರೆ. ಕಂಗನಾ ಅಭಿನಯದ ಎಮರ್ಜೆನ್ಸಿ ಚಿತ್ರ ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. (ಫೋಟೋ ಕೃಪೆ-Instagram @kangaranaut)
ಕಾರ್ತಿಕ್ ಆರ್ಯನ್: ಬಾಲಿವುಡ್ನ ಚಾಕೊಲೇಟಿ ಹೀರೋ ಕಾರ್ತಿಕ್ ಆರ್ಯನ್ ಕೂಡ ತಮ್ಮ ಕನಸಿಗಾಗಿ ಚಿಕ್ಕ ವಯಸ್ಸಿನಲ್ಲೇ ಮನೆ ತೊರೆದಿದ್ದಾರೆ. ತನ್ನ ಕನಸಿನ ಬೆನ್ನತ್ತಿ ಮುಂಬೈ ತಲುಪಿದ ಕಾರ್ತಿಕ್, 2012ರಲ್ಲಿ ಸಿನಿ ಕೆರಿಯರ್ ಆರಂಭಿಸಿದ್ರು. ಈಗ ಕಾರ್ತಿಕ್ 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ನ ಹಿಟ್ ಹೀರೋಗಳಲ್ಲಿ ಒಬ್ಬರಾಗಿದ್ದಾರೆ. ಐಷಾರಾಮಿ ಮನೆ, ಐಷಾರಾಮಿ ಕಾರು, ಕೋಟಿಗಟ್ಟಲೆ ಒಡೆಯ ಕಾರ್ತಿಕ್ ಆರ್ಯನ್ ಕೂಡ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಶ್ರಮಿಸಿದ್ದಾರೆ. (ಫೋಟೋ ಕೃಪೆ-Instagram @kartikaaryan)
ಯಶ್ : ಕೆಜಿಎಫ್ ಚಿತ್ರದ ಮೂಲಕ ದೇಶದಾದ್ಯಂತ ಫೇಮಸ್ ಆಗಿರುವ ನಟ ಯಶ್ ಈಗ ಸೂಪರ್ ಸ್ಟಾರ್ ಆಗಿದ್ದಾರೆ. ಯಶ್ ಅವರ ತಂದೆ ಯಶ್ ಅವರನ್ನು ಸರ್ಕಾರಿ ಅಧಿಕಾರಿಯನ್ನಾಗಿ ಮಾಡಲು ಬಯಸಿದ್ದರು. ಆದರೆ ಯಶ್ ಕನಸಿನ ಬೆನ್ನತ್ತಿ ಹೋದ್ರು. ಜೇಬಿನಲ್ಲಿ ಕೇವಲ 300 ರೂಪಾಯಿ ಇಟ್ಟುಕೊಂಡು ಮನೆ ಬಿಟ್ಟ ಯಶ್ ಇದೀಗ ಕೋಟಿ ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ 13 ಮಿಲಿಯನ್ಗಿಂತಲೂ ಹೆಚ್ಚು ಜನರು ಯಶ್ ಅವರನ್ನು ಫಾಲೋ ಮಾಡುತ್ತಿದ್ದಾರೆ. (ಫೋಟೋ ಕೃಪೆ-Instagram@thenameisyash)
ಶೆಹನಾಜ್ ಗಿಲ್: ಪಂಜಾಬ್ನ ಕತ್ರಿನಾ ಕೈಫ್, ನಟಿ ಶೆಹನಾಜ್ ಗಿಲ್ ಬಿಗ್ ಬಾಸ್ಗೆ ಎಂಟ್ರಿ ಪಡೆದ ತಕ್ಷಣ, ಅವರ ಅದೃಷ್ಟವು ರಾತ್ರೋರಾತ್ರಿ ಬದಲಾಯಿತು. ಹಲವು ವರ್ಷಗಳಿಂದ ತನ್ನ ಬದುಕಿಗಾಗಿ ಹುಡುಕಾಟ ನಡೆಸುತ್ತಿರುವ ಶಹನಾಜ್ ಜನರಿಗೆ ಇಷ್ಟವಾದ್ರು. ಶಹನಾಜ್ ಗಿಲ್ ಶಹನಾಜ್ ಗಿಲ್ ಕೂಡ ತನ್ನ 22 ನೇ ವಯಸ್ಸಿನಲ್ಲಿ ತನ್ನ ಕನಸನ್ನು ನನಸಾಗಿಸಲು ಮನೆ ಬಿಟ್ಟು ಹೋಗಿದ್ರು. ಇದಾದ ನಂತರ ಮಾಡೆಲಿಂಗ್ ಮಾಡಿ ಹಲವು ವರ್ಷಗಳ ಕಾಲ ಸಾಕಷ್ಟು ಕಷ್ಟ ಪಟ್ಟಿದ್ದರು. ಆದರೆ ಶಹನಾಜ್ ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಸ್ಟಾರ್ ನಟಿಯಾದ್ರು. (ಫೋಟೋ ಕೃಪೆ-Instagram @shehnaazgill)