Sonu Nigam: ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಎಂದ ಗಾಯಕ ಸೋನು ನಿಗಮ್..!
12th Bengaluru international film festival: ನಾನು ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಅನ್ನೋ ಬಲವಾದ ನಂಬಿಕೆ ನನ್ನದು ಎನ್ನುವ ಮೂಲಕ ಸೋನು ನಿಗಮ್ ಕನ್ನಡಿಗರ ಮನ ಗೆದ್ದಿದ್ದಾರೆ. 12ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ಸೋನು ನಿಗಮ್ ವೇದಿಕೆ ಮೇಲೆ ಕನ್ನಡ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಕಳೆ ಕಟ್ಟಿದರು. (ಚಿತ್ರಗಳು ಕೃಪೆ: ಸೋನು ನಿಗಮ್ ಇನ್ಸ್ಟಾಗ್ರಾಂ ಖಾತೆ)
ನಾನು ಕನ್ನಡಿಗನಾಗಿದ್ದೆ..... ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಅನ್ನೋ ಬಲವಾದ ನಂಬಿಕೆ ನನ್ನದು ಎನ್ನುವ ಮೂಲಕ ಸೋನು ನಿಗಮ್ ಕನ್ನಡಿಗರ ಮನ ಗೆದ್ದಿದ್ದಾರೆ.
2/ 11
12ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ಸೋನು ನಿಗಮ್ ವೇದಿಕೆ ಮೇಲೆ ಕನ್ನಡ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಕಳೆ ಕಟ್ಟಿದರು.
3/ 11
ಮುಂಗಾರು ಮಳೆ ಸಿನಿಮಾದ 'ಅನಿಸುತಿದೆ ಏಕೋ ಇಂದು...' ಹಾಡನ್ನು ಹಾಡುವ ಮೂಲಕ ನೆರೆದವರನ್ನು ರಂಜಿಸಿದರು.
4/ 11
ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದಿರಬೇಕು... ಅದಕ್ಕೆ ನನಗೆ ಕನ್ನಡ ಅಂದರೆ ತುಂಬಾ ಪ್ರೀತಿ, ಗೌರವ ಎಂದಿದ್ದಾರೆ ಸೋನು ನಿಗಮ್.
5/ 11
ಸಂಗೀತ ಕಾರ್ಯಕ್ರಮಕ್ಕಾಗಿ ಅಮೆರಿಕ, ಸಿಂಗಪೂರ ಸೇರಿದಂತೆ ಇತರೆ ದೇಶಗಳಿಗೆ ಹೋದಾಗ, ನೆರೆದವರಲ್ಲಿ ಯಾರಾದರೂ ಕನ್ನಡ ಎಂದು ಕೂಗಿದರೆ ಸಾಕು ಕನ್ನಡದ ಹಾಡು ಹಾಡುವ ಆಸೆಯಾಗುತ್ತದೆ ಎಂದು ಕನ್ನಡದ ಬಗ್ಗೆ ಇರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ ಸೋನು ನಿಗಮ್.
6/ 11
ಬಿ-ಟೌನ್ನಲ್ಲಿ ಒಂದು ಕಾಲದಲ್ಲಿ ಟಾಪ್ ಸಿಂಗರ್ ಆಗಿದ್ದ ಸೋನು ನಿಗಮ್ ಸಾಕಷ್ಟು ಹಿಟ್ ಹಾಡುಗಳನ್ನು ಹಾಡಿದ್ದಾರೆ.
7/ 11
ಹಿಂದಿಯಲ್ಲಿ ಒಳ್ಳೆಯ ಗಾಯಕನಾಗುವ ಕನಸು ಹೊತ್ತು ಬಂದ ನನಗೆ ಹಿಂದಿಗಿಂತ ಹೆಚ್ಚಾಗಿ ಕನ್ನಡದಲ್ಲೇ ಒಳ್ಳೆಯ ಹಾಡುಗಳನ್ನು ಹಾಡಿದ್ದೇನೆ ಎಂದಿದ್ದಾರೆ ಸೋನು ನಿಗಮ್. ಹೀಗೆಂದು ಅವರೇ 12ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೊತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.