ಬಾಲಿವುಡ್ ನಟಿ ಸೋನಂ ಕಪೂರ್ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನಕ್ಕಾಗಿ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನಟಿ ಸೋನಂ ಕಪೂರ್ ವೈಯಕ್ತಿಕ ವಿಚಾರದ ಮಾಹಿತಿ ಹಂಚಿಕೊಳ್ತಾರೆ.
2/ 8
ಬಾಲಿವುಡ್ ನಲ್ಲಿ ಅನೇಕ ಸಿನಿಮಾಗಳನ್ನು ಮಾಡಿ ನಂ 1 ನಟಿಯಾಗಿದ್ದ ಸೋನಂ ಕಪೂರ್ ಇದೀಗ ಮಗನ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.
3/ 8
ಮದುವೆ ಬಳಿಕ ಸೋನಂ ಕಪೂರ್ ಸದ್ಯ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.
4/ 8
ಸೋನಂ ಕಪೂರ್ ಇತ್ತೀಚೆಗೆ ತಾಯಿಯಾದರು. ನಟಿ ಕೆಲವು ತಿಂಗಳ ಹಿಂದೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು.
5/ 8
ಸೋನಂ ಕಪೂರ್ ತಮ್ಮ ಮಗನಿಗೆ ವಾಯು ಎಂದು ಹೆಸರಿಟ್ಟಿದ್ದಾರೆ. ನಟಿಯ ಮಗನ ಹೆಸರಿನ ಬಗ್ಗೆ ಕೂಡ ಭಾರೀ ಚರ್ಚೆಯಾಗಿತ್ತು.
6/ 8
ಅಭಿಮಾನಿಗಳು ಸೋನಂ ಕಪೂರ್ ಅವರ ಮಗನನ್ನು ನೋಡಲು ಕಾಯ್ತಿದ್ದಾರೆ. ಆದರೆ ನಟಿ ಮಾತ್ರ ಇನ್ನೂ ಮಗ ವಾಯುವಿನ ಒಂದೇ ಒಂದು ಫೋಟೋವನ್ನು ಹಂಚಿಕೊಂಡಿಲ್ಲ.
7/ 8
ನಟಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಅದರಲ್ಲಿ ಮಗನ ಮುಖ ಕಾಣಿಸುತ್ತಿಲ್ಲ. ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಸೋನಮ್ ಕಪೂರ್ ಅವರು ವಾಯು ಫೋಟೋವನ್ನು ಯಾವಾಗ ಹಂಚಿಕೊಳ್ಳುತ್ತಾರೆ ಎಂಬ ವಿಚಾರದ ಬಗ್ಗೆ ಮಾತಾಡಿದ್ದಾರೆ.
8/ 8
ಈ ಬಗ್ಗೆ ಮಾತಾಡಿದ ಸೋನಂ, ವಾಯು ದೊಡ್ಡವನಾದ ನಂತರ ಫೋಟೋವನ್ನು ಶೇರ್ ಮಾಡುತ್ತೇನೆ ಅದು ಅವನೇ ನಿರ್ಧರಿಸಿದಾಗ ಮಾತ್ರ ಎಂದಿದ್ದಾರೆ. ಈ ಮಾತು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಸೋನಂ ಮಗನನ್ನ ನೋಡೋಕೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕಿದೆ.