ಒಂದು ದಿನ ಸೋನಾಲಿ ಬೇಂದ್ರೆ ಅವರಿಗೆ ಮಧ್ಯರಾತ್ರಿ 2 ಗಂಟೆಗೆ ಕರೆ ಬಂತು. ರಿಸೀವರ್‌ನ ಇನ್ನೊಂದು ಕಡೆಯಿಂದ 'ನಾನು ಸುನೀಲ್ ಶೆಟ್ಟಿ ಮಾತನಾಡುತ್ತಿದ್ದೇನೆ, ನಾವು ಓಡಿಹೋಗೋಣ ಎಂಬ ಧ್ವನಿ ಕೇಳಿಸಿತು. ಆಗ ಸೋನಾಲಿ ಬೇಂದ್ರೆ ಒಂಟಿಯಾಗಿದ್ದು ಸುನಿಲ್ ಶೆಟ್ಟಿ ಆಗಾಗಲೇ ಮದುವೆಯಾಗಿದ್ದರು. ಒಂದು ಕಾಲದಲ್ಲಿ ಒಳ್ಳೆಯ ಗೆಳೆಯರಾಗಿದ್ದ ಇಬ್ಬರ ನಡುವೆ ಟೆನ್ಶನ್ ಹೆಚ್ಚಾಯಿತು.
ಸೋನಾಲಿ ಬೇಂದ್ರೆ 90 ರ ದಶಕದ ಟಾಪ್ ನಟಿಯರಲ್ಲಿ ಒಬ್ಬರು. ಅವರು 1994 ರ ಚಲನಚಿತ್ರ 'ಆಗ್' ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ನಂತರ ಅವರು 'ಮೇಜರ್ ಸಾಬ್', 'ಝಕ್ಮ್', 'ಸರ್ಫರೋಶ್' ಮತ್ತು 'ಹಮ್ ಸಾಥ್ ಸಾಥ್ ಹೈ' ನಂತಹ ಕೆಲವು ಸ್ಮರಣೀಯ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅನೇಕ ಕೋಸ್ಟಾರ್‌ಗಳೊಂದಿಗೆ ಅವರ ಸಂಬಂಧದ ಬಗ್ಗೆ ಚರ್ಚೆಗಳು ನಡೆದವು. ಅವರಲ್ಲಿ ಸುನಿಲ್ ಶೆಟ್ಟಿ ಒಬ್ಬರು.
ಇನ್ನು ಸೋನಾಲಿ, 'ನಾನು ಒಂಟಿಯಾಗಿದ್ದೆ. ಆದ್ದರಿಂದ ವದಂತಿಗಳು ವಿವಾಹಿತ ಸುನೀಲ್ ಶೆಟ್ಟಿ ಅವರ ವೈಯಕ್ತಿಕ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿರಬಹುದು ಎಂದು ನಾನು ಊಹಿಸಬಲ್ಲೆ. ಅಪರಿಚಿತ ವ್ಯಕ್ತಿಯೊಬ್ಬ ತನಗೆ ಕರೆ ಮಾಡಿ ಸುನಿಲ್ ಶೆಟ್ಟಿಯಂತೆ ನಟಿಸಿ ಓಡಿಹೋಗೋಣ ಎಂದು ಹೇಳಿದ್ದ. ರಾತ್ರಿ 2 ಗಂಟೆಗೆ ಯಾರಾದರೂ ನಿಮಗೆ ಕಾಲ್ ಮಾಡಿದರೆ ಅದು ತಮಾಷೆ ಅಲ್ಲ ಎಂದು ನಟಿ ಹೇಳಿದ್ದರು.
ಸುನೀಲ್ ಶೆಟ್ಟಿ ಜೊತೆಗಿನ ಸಂಬಂಧದ ಬಗ್ಗೆ ಅಪರಿಚಿತರು ಸೋನಾಲಿಗೆ ಕೇಳುತ್ತಿದ್ದರು. ಕಾಲೇಜಿನಲ್ಲಿ ನಟಿಯ ತಂಗಿಯ ಬಳಿ ಹೋಗಿ ಸುನಿಲ್ ಶೆಟ್ಟಿ ಜೊತೆ ನಿಮ್ಮ ಅಕ್ಕನಿಗೆ ಸಂಬಂಧ ಇದೆಯಾ ಎಂದು ಕೇಳುತ್ತಿದ್ದರು. ನಿಮ್ಮ ಆಸೆಯಂತೆ ಹಣ ಸಿಗುತ್ತಿದೆಯಲ್ಲಾ ಎಂದು ಕೆಲ ಸಂಬಂಧಿಕರು ನಟಿಯ ಪೋಷಕರ ಬಳಿ ಹೇಳುತ್ತಿದ್ದರು. ನಿಮ್ಮ ಮಗಳು ಯಾವುದೇ ನಟನ ಜೊತೆ ಏನು ಮಾಡಿದರೂ ಈಗ ನೀವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದರು.