Kannadathi Serial ಮೂಲಕ ಮನೆಮಾತಾಗಿದ್ದ ರಮೋಲಾ: ಸೀರಿಯಲ್ ಬಿಟ್ಟು ಏನ್ ಮಾಡ್ತಿದ್ದಾರೆ ನೋಡಿ..
ನನ್ನ ಈ ಹಿಂದಿನ ಮೂರು ಸಿನಿಮಾಗಳು ರಿಲೀಸ್ ಆಗಲಿಲ್ಲ. ನಾನು ಫ್ಯಾಷನ್ ಡಿಸೈನಿಂಗ್ ಶಿಕ್ಷಣ ಪೂರೈಸುತ್ತಿದ್ದೇನೆ. ಧಾರಾವಾಹಿಯಲ್ಲಿ ನಟಿಸುತ್ತಿರೋದರಿಂದ ಕಾಲೇಜಿಗೆ ಹೋಗಲು ಸಮಯವೇ ಸಿಗುತ್ತಿರಲಿಲ್ಲ. ಹೀಗಾಗಿ ಸದ್ಯಕ್ಕೆ ಸೀರಿಯಲ್ ನಿಲ್ಲಿಸಿದ್ದೇನೆ ಎಂದು ರಮೋಲಾ ಹೇಳಿದ್ದಾರೆ.
'ಕನ್ನಡತಿ' ಧಾರಾವಾಹಿಯಲ್ಲಿ ಹರ್ಷ (Harsha), ಭುವನೇಶ್ವರಿಗೆ ಕೆಟ್ಟದು ಮಾಡುತ್ತ, ರತ್ನಮಾಲಾ ಆಸ್ತಿಯನ್ನು ಕೊಳ್ಳೆ ಹೊಡೆಯುವಲ್ಲಿ ಸದಾ ಯೋಜನೆ ಹಾಕುವ ಪಾತ್ರದಲ್ಲಿ ನಟಿ ರಮೋಲಾ (Ramola) ಅಭಿನಯಿಸಿದ್ದರು. ಪಕ್ಕಾ ನೆಗೆಟಿವ್ ಶೇಡ್ ಆದ ಸಾನಿಯಾ ಪಾತ್ರವನ್ನು ವೀಕ್ಷಕರು ಇಷ್ಟಪಟ್ಟಿದ್ದರು.
2/ 8
ಆದರೆ ಈಗ ಈ ಪಾತ್ರದಿಂದ ನಟಿ ರಮೋಲಾ ಅವರು ಹೊರನಡೆದಿದ್ದಾರೆ. ರತ್ನಾಮಾಲಾ ಅವರ ಕುಟುಂಬದ ಸೊಸೆಯಾಗಿ, ಮಾಲಾ ಶಿಕ್ಷಣ ಸಂಸ್ಥೆಯ ಎಂ.ಡಿ. ಆಗಿ ಅವರು ಕಾಣಿಸಿಕೊಂಡಿದ್ದರು. ಈ ಕ್ಯಾರೆಕ್ಟರ್(Character) ದಿನಕಳೆದಂತೆ ಮಹತ್ವ ಪಡೆದುಕೊಳ್ಳುತ್ತಾ ಸಾಗಿತ್ತು.
3/ 8
ರಮೋಲಾ ಧಾರಾವಾಹಿ ತಂಡ ತೊರೆದಿದ್ದಾರೆ. ಏಕಾಏಕಿ ಈ ನಟಿ ಸೀರಿಯಲ್ ತೊರೆಯಲು ಕಾರಣವೇನು ಅಂತ ಸೀರಿಯಲ್ ಪ್ರಿಯರು ಕೇಳುತ್ತಿದ್ದರು.
4/ 8
'ಕನ್ನಡತಿ' ಧಾರಾವಾಹಿಯಿಂದ ರಮೋಲಾಗೆ ಒಳ್ಳೆಯ ಖ್ಯಾತಿ ಸಿಕ್ಕಿತ್ತು. ವಿಲನ್ ಆದ್ರೂ ಸಾನಿಯಾರನ್ನು ಜನರು ಇಷ್ಟಪಟ್ಟಿದ್ದರು, ಅವರ ಹೆಸರಲ್ಲಿ ಫ್ಯಾನ್ ಪೇಜ್ಗಳು ಹುಟ್ಟಿಕೊಂಡಿದ್ದವು. ಈಗ ಸಾನಿಯಾ ಪಾತ್ರಕ್ಕೆ ಹೊಸ ನಟಿಯ ಎಂಟ್ರಿಯಾಗಿದೆ.
5/ 8
ಬೇರೆ ಭಾಷೆಯಿಂದ ಆಫರ್ ಬಂದ ಕಾರಣ ಸಾನಿಯಾ ಈ ಧಾರಾವಾಹಿ ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.‘ಬಿಗ್ ಬಾಸ್ ಸೀಸನ್ 8’ ಪೂರ್ಣಗೊಳ್ಳುತ್ತಿದ್ದಂತೆ ಮಿನಿ ಬಿಗ್ ಬಾಸ್ ಆರಂಭವಾಗಿತ್ತು. ಕಲರ್ಸ್ ಕನ್ನಡ ವಾಹಿನಿ ಸೀರಿಯಲ್ನಲ್ಲಿ ನಟಿಸುತ್ತಿರುವ ಕಲಾವಿದರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ಇದರಲ್ಲಿ ರಮೋಲಾ ಕೂಡ ಇದ್ದರು.
6/ 8
ವೈಯಕ್ತಿಕ ಕಾರಣಗಳಿಂದ 'ಕನ್ನಡತಿ' ಧಾರಾವಾಹಿ ಬಿಟ್ಟಿದ್ದೇನೆ. ನಿಜಕ್ಕೂ ಧಾರಾವಾಹಿ ತಂಡವನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ. ಬಿಗ್ ಬಾಸ್ ಮಿನಿ ಸೀಸನ್ನಲ್ಲಿ ಭಾಗವಹಿಸಿದಾಗಲೂ ಕೂಡ ನಾನು ಇದೇ ಮಾತು ಹೇಳಿದ್ದೆ. ಸಿಕ್ಕಾಪಟ್ಟೆ ಜವಾಬ್ದಾರಿ ಕಲಿತಿದ್ದೇನೆ. ಎಂದು ಹೇಳಿದ್ದಾರೆ.
7/ 8
ನನ್ನ ಈ ಹಿಂದಿನ ಮೂರು ಸಿನಿಮಾಗಳು ರಿಲೀಸ್ ಆಗಲಿಲ್ಲ. ನಾನು ಫ್ಯಾಷನ್ ಡಿಸೈನಿಂಗ್ ಶಿಕ್ಷಣ ಪೂರೈಸುತ್ತಿದ್ದೇನೆ. ಧಾರಾವಾಹಿಯಲ್ಲಿ ನಟಿಸುತ್ತಿರೋದರಿಂದ ಕಾಲೇಜಿಗೆ ಹೋಗಲು ಸಮಯವೇ ಸಿಗುತ್ತಿರಲಿಲ್ಲ. ಹೀಗಾಗಿ ಸದ್ಯಕ್ಕೆ ಸೀರಿಯಲ್ ನಿಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
8/ 8
'ಕನ್ನಡತಿ' ಧಾರಾವಾಹಿಯಲ್ಲಿ ನನ್ನ ಸಾನಿಯಾ ಪಾತ್ರ ನೋಡಿ ನಿಜ ಜೀವನದಲ್ಲಿಯೂ ನಾನು ಕೆಟ್ಟವಳು ಎಂದು ಭಾವಿಸಿದ್ದರು. ಬಿಗ್ ಬಾಸ್ ಮೂಲಕ ಪ್ರೇಕ್ಷಕರಿಗೆ ನಾನು ಏನು ಎಂದು ತಿಳಿದಿದೆ ಅಂದಿದ್ದಾರೆ ನಟಿ ರಮೋಲಾ.