ಬಿಗ್ ಬಾಸ್ ಸೀಸನ್ 09ಕ್ಕೆ ಬಂದಿದ್ದ ನೇಹಾ ಗೌಡ ಮತ್ತೆ ತಮ್ಮ ಕಿರುತೆರೆ ಜರ್ನಿ ಶುರು ಮಾಡಿದ್ದಾರೆ. ಹೊಸ ಧಾರಾವಾಹಿಯಲ್ಲಿ ನಟಿಸುತ್ತಿರುವುದಾಗೆ ಹೇಳಿಕೊಂಡಿದ್ದಾರೆ. (ಚಿತ್ರ ಕೃಪೆ: ಇನ್ಸ್ಟಾಗ್ರಾಂ)
2/ 8
ಕಿರುತೆರೆಯಲ್ಲಿ ಗೊಂಬೆ ಅಂದ್ರೆ ಎಕ್ಕರಿಗೂ ನೆನಪಾಗೋದು ಲಕ್ಷ್ಮಿ ಬಾರಮ್ಮ ಧಾರಾವಾಹಿ. ಅದರಲ್ಲಿನ ನೇಹಾ. ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳಿದಿದ್ದರು.
3/ 8
ನಟನೆಯು ಮಾಂತ್ರಿಕವಾಗಿದೆ. ನಿಮ್ಮ ನೋಟ ಮತ್ತು ಮನೋಭಾವವನ್ನು ಬದಲಾಯಿಸಿ ನೀವು ಯಾರಾದರೂ ಆಗಬಹುದು. ಎಲ್ಲಾ ಕಾಯುವಿಕೆ ಕೊನೆಗೂ ಕೊನೆಗೊಂಡಿದೆ. ನಿಮ್ಮೆಲ್ಲರನ್ನೂ ರಂಜಿಸಲು ನಾನು 2 ವರ್ಷಗಳ ನಂತರ ಮತ್ತೆ ಬಂದಿದ್ದೇನೆ ಎಂದು ನೇಹಾ ಗೌಡ ಹೇಳಿದ್ದಾರೆ.
4/ 8
ಈ ಬಾರಿ ಗೊಂಬೆಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದೇನೆ. ಇಷ್ಟು ದಿನ ನೀವೆಲ್ಲರೂ ಗೊಂಬೆ, ಗಾಯತ್ರಿ, ಮೈಥಿಲಿ ಮತ್ತು ಗುಣ ಅವರನ್ನು ಬೆಂಬಲಿಸಿದ್ದೀರಿ ಮತ್ತು ಪ್ರೀತಿಸಿದ್ದೀರಿ ಈಗ ಅದೇ ಪ್ರೀತಿ ಮತ್ತು ಬೆಂಬಲವನ್ನು "ಗಿರಿಜಾ" ಗೆ ಧಾರೆ ಎರೆಯುವ ಸಮಯ ಬಂದಿದೆ ಎಂದು ನೇಹಾ ಪೋಸ್ಟ್ ಹಾಕಿಕೊಂಡಿದ್ದಾರೆ.
5/ 8
ಉದ್ಯಮದಲ್ಲಿ 10 ವರ್ಷಗಳು ಕಾಲ ನಾನು ಹಲವಾರು ಯೋಜನೆಗಳನ್ನು ಮಾಡಿದ್ದೇನೆ. ಮತ್ತು ಎಲ್ಲಾ ಪಾತ್ರವು ಮೆಚ್ಚುಗೆ ಮತ್ತು ಪ್ರೀತಿಯನ್ನು ಪಡೆದಿವೆ. ಈಗ ಅದೇ ಪ್ರೀತಿ ಮತ್ತು ಮೆಚ್ಚುಗೆಯನ್ನು "ನಮ್ಮ ಲಚ್ಚಿ" ಗಾಗಿ ಮಾತ್ರ ಸುರಿಯುವ ಸಮಯ ಬಂದಿದೆ ಎಂದಯ ನೇಹಾ ಹೇಳಿದ್ದಾರೆ.
6/ 8
ಶೀಘ್ರದಲ್ಲೇ ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ ಬರಲಿದೆ ಅದರಲ್ಲಿ ನೇಹಾ ಗೌಡ ಗಿರಿಜಾ ಆಗಿ ಪಾತ್ರ ನಿರ್ವಹಿಸಲಿದ್ದಾರೆ. ನೇಹಾ ಅಭಿನಯ ನೋಡಲು ಮತ್ತೆ ಅಭಿಮಾನಿಗಳು ಕಾಯ್ತಾ ಇದ್ದಾರೆ.
7/ 8
ನೇಹಾ ಗೌಡ ಬಿಗ್ ಬಾಸ್ ಸೀಸನ್ 09 ಕ್ಕೆ ನವೀನರಾಗಿ ಬಂದಿದ್ದರು. ಆದ್ರೆ ಬಂದು ನಾಲ್ಕೇ ವಾರಕ್ಕೆ ತಮ್ಮ ಆಟ ಮುಗಿಸಿ, ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದರು.
8/ 8
2 ವರ್ಷಗಳ ಬಳಿಕ ನೇಹಾ ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಗಿರಿಜಾಳನ್ನು ಮತ್ತೆ ಬೆಂಬಲಿಸಿ ಎಂದು ಕೇಳಿಕೊಂಡಿದ್ದಾರೆ.