Kannada Serials Actors: ಶೂಟಿಂಗ್ನಲ್ಲಿ ಲವ್, ಸೀರಿಯಲ್ ಮುಗಿದ ಮೇಲೆ ಮದುವೆ! ಪ್ರೀತಿಸಿ ಕೈ ಹಿಡಿದ ಕಿರುತೆರೆ ಜೋಡಿಗಳಿವು
ಶೂಟಿಂಗ್ ಸೆಟ್ನಲ್ಲೇ ಲವ್, ಧಾರಾವಾಹಿ ಮುಗಿದ ಮೇಲೆ ಮದುವೆ. ಹೀಗೆ ಇವ್ರೆಲ್ಲ ತಮ್ಮ ವೃತ್ತಿಯವರನ್ನೇ ಲವ್ ಮಾಡಿ, ಯಶಸ್ವಿ ಜೀವನ ಕಂಡಿರುವ ಕಿರುತೆರೆ ತಾರೆಗಳು! ಹಾಗಾದ್ರೆ ಈ ಲಿಸ್ಟ್ನಲ್ಲಿ ಯಾರ್ಯಾರು ಇದ್ದಾರೆ?
ಕಾಮಿಡಿ ಕಿಲಾಡಿಗಳಲ್ಲಿ ಸ್ಪರ್ಧಿಗಳಾಗಿದ್ದ ಗೋವಿಂದೇಗೌಡ ಮತ್ತು ದಿವ್ಯಶ್ರಿ ಅದೇ ಶೋನಿಂದ ಸ್ನೇಹಿತರಾಗಿದ್ದರು. ಸ್ನೇಹಾ ಪ್ರೀತಿಯಾಗಿ ಬದಲಾಗಿ ಮದುವೆ ಆಗಿದ್ದಾರೆ. ಈಗ ಮುದ್ದಾದ ಹೆಣ್ಣುಮಗುವಿನ ಪೋಷಕರಾಗಿದ್ದಾರೆ.
2/ 8
ಕಲರ್ಸ್ ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಚಂದನ್ ಕುಮಾರ್, ಕವಿತಾ ಗೌಡ ಸ್ನೇಹಿತರಾಗಿದ್ದರು. ಅದರ ಮೂಲಕ ಪ್ರೀತಿಯಾಗಿ ವಿವಾಹವಾಗಿದ್ದಾರೆ.
3/ 8
ಮಿಸ್ಟರ್ ಅಂಡ್ ಮಿಸೆಸ್ ರಂಗೇಗೌಡ ಧಾರಾವಾಹಿ ಮೂಲಕ ಹೆಸರುವಾಸಿಯಾಗಿದ್ದ ಅಮೃತಾ-ರಘು ಪ್ರೀತಿಸಿ ಮದುವೆ ಆಗಿದ್ದಾರೆ. ಇವರಿಗೆ ಮುದ್ದಾದ ಹೆಣ್ಣು ಮಗು ಇದೆ. ಅಮೃತಾ ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ರಘು ತೆಲುಗು ಸೀರಿಯಲ್ಗೆ ಹೋಗಿದ್ದಾರೆ.
4/ 8
ಕುಲವಧು ಧಾರಾವಾಹಿ ಮೂಲಕ ಪರಿಚಯವಾದ ದೀಪಿಕಾ ಮತ್ತು ಆಕರ್ಷ್ ಸಹ ಪ್ರೀತಿಸಿ ಮದುವೆ ಆಗಿದ್ದಾರೆ. ಇವರ ಪ್ರೀತಿಗೂ ಧಾರಾವಾಹಿಯೇ ಕಾರಣ. ಅದೇ ಸೆಟ್ ನಲ್ಲಿ ಪರಿಚಯವಾಗಿತ್ತು.
5/ 8
ಸಿಲ್ಲಿ ಲಲ್ಲಿಯಲ್ಲಿ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದ ರೂಪಾ ಮತ್ತು ಪ್ರಶಾಂತ್ ಲವ್ ಮಾಡಿ ಮದುವೆ ಆಗಿದ್ದಾರೆ. ಇವರಿಗೆ ಒಬ್ಬ ಮಗನಿದ್ದಾನೆ. ಧಾರಾವಾಹಿ ಮೂಲಕವೇ ಇವರಿಗೂ ಸ್ನೇಹ ಹುಟ್ಟಿತ್ತು.
6/ 8
ಬಿಗ್ ಬಾಸ್ ಸೀಸನ್ 05 ರ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಲ್ಲಿ ಸ್ನೇಹಿತರಾಗಿದ್ದರು. ಆಚೆ ಬಂದ ಮೇಲೆ ಇಬ್ಬರು ಪ್ರೀತಿ ಮಾಡಿ ಮದುವೆ ಆಗಿದ್ದಾರೆ.
7/ 8
ಐಶ್ವರ್ಯಾ ಮತ್ತು ವಿನಯ್ ಅವರ ಪರಿಚಯ ಸಹ ಧಾರಾವಾಹಿ ಮೂಲಕವೇ ಆಯಿತಂತೆ. ಅಲ್ಲಿಂದ ಸ್ನೇಹ ಬೆಳೆದು ಪ್ರೀತಿಯಾಗಿ ಮದುವೆ ಆಗಿದ್ದರು. ಕಳೆದ ಬಾರಿ ರಾಜಾ ರಾಣಿ ಸೀಸನ್ಗೆ ಬಂದಿದ್ದರು.
8/ 8
ಮಹಾಸತಿ ಸೀರಿಯಲ್ ಮೂಲಕ ಪರಿಚಯವಾದ ಸಾಗರ್ ಪುರಾಣಿಕ್ ಮತ್ತು ದೀಪಾ ಜಗದೀಶ್ ಪ್ರೀತಿಸಿ ಮದುವೆ ಆಗಿದ್ದರು. 10 ವರ್ಷಗಳಿಂದ ಇಬ್ಬರು ಸ್ನೇಹಿತರಾಗಿದ್ದರು.