ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

First published:

 • 117

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಅದು 2018. ಸ್ಯಾಂಡಲ್​ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಕೊಲೆಗೆ ಸಂಚು ರೂಪಿಸಲಾಗಿದೆ ಎಂಬ ಬೆಚ್ಚಿಬೀಳಿಸುವ ಸುದ್ದಿಯೊಂದು ಅಂದು ಹೊರಬಿದ್ದಿತ್ತು.

  MORE
  GALLERIES

 • 217

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸೈಕಲ್ ರವಿ ವಿಚಾರಣೆ ವೇಳೆ ಈ ಬೆಚ್ಚಿಬೀಳಿಸೋ ಸತ್ಯವನ್ನು ಬಾಯಿಬಿಟ್ಟಿದ್ದ. ಆದರೆ... ಆ ಬಳಿಕ ಖುದ್ದು ರಾಕಿಂಗ್ ಸ್ಟಾರ್ ಈ ವಿಷಯಗಳಿಗೆ ತೆರೆ ಎಳೆದಿದ್ದರು.

  MORE
  GALLERIES

 • 317

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಇದೀಗ ಕುಖ್ಯಾತ ರೌಡಿ ಶೀಟರ್ ಸ್ಲಂ ಭರತ್ ಪೊಲೀಸರ ಎನ್​ಕೌಂಟರ್​ಗೆ ಬಲಿಯಾಗಿದ್ದಾನೆ. ಇದೇ ಭರತ್ ಈ ಹಿಂದೆ ಸುಪಾರಿ ಕಿಲ್ಲರ್​ಗಳ ಜೊತೆ ಸೇರಿ ಯಶ್ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದೆ.

  MORE
  GALLERIES

 • 417

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಗುರುವಾರ ನಸುಕಿನ ಜಾವ ಸ್ಲಂ ಭರತನನ್ನು ಕರೆದೊಯ್ಯುತ್ತಿದ್ದಾಗ ಆತನ ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ನಡೆಸಿ ಸಿನಿಮೀಯ ರೀತಿಯಲ್ಲಿ ಬಿಡಿಸಿಕೊಂಡು ಹೋಗಿದ್ದರು.

  MORE
  GALLERIES

 • 517

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ರೌಡಿ ಪಡೆಯನ್ನು ಬೆನ್ನತ್ತಿದ್ದ ರಾಜಗೋಪಾಲ ನಗರ ಪೊಲೀಸರು ಕೊನೆಗೂ ರೌಡಿ ಭರತ್​ನ್ನನ್ನು ಎನ್‌ಕೌಂಟರ್ ಮಾಡಿ ಪರಲೋಕಕ್ಕೆ ಕಳುಹಿಸಿದ್ದರು. ಈ ಕೊಲೆಯೊಂದಿಗೆ ಸ್ಲಂ ಭರತನ ಹಿಸ್ಟರಿಗಳು ಒಂದೊಂದಾಗಿ ಹೊರಬೀಳುತ್ತಿವೆ.

  MORE
  GALLERIES

 • 617

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಆರಂಭದಿಂದಲೂ ಸೈಕಲ್ ರವಿ ಜೊತೆ ಉತ್ತಮ ಒಡನಾಟವನ್ನು ಸ್ಲಂ ಭರತ್ ಹೊಂದಿದ್ದ. ರವಿಯ ಬಂಧನದ ಬಳಿಕ ಸ್ಯಾಂಡಲ್​ವುಡ್ ನಟನ ಹತ್ಯೆ ಸ್ಕೆಚ್ ಹಾಕಿರುವ ವಿಚಾರವೊಂದು ಬಹಿರಂಗವಾಗಿತ್ತು.

  MORE
  GALLERIES

 • 717

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಆದರೆ ಆ ಸುಪಾರಿ ಪಡೆದವರು ಯಾರು? ಯಾಕಾಗಿ ರಾಕಿಂಗ್ ಸ್ಟಾರ್ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ವಿಚಾರಗಳು ಬಹಿರಂಗವಾಗಿರಲಿಲ್ಲ. ಈ ಸುದ್ದಿ ಮಹತ್ವ ಪಡೆಯುತ್ತಿದ್ದಂತೆ ಯಶ್ ಸುದ್ಧಿಗೋಷ್ಠಿ ನಡೆಸಿದ್ದರು.

  MORE
  GALLERIES

 • 817

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ನನ್ನ​ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬುದು ಕೇವಲ ವದಂತಿಯಷ್ಟೆ. ಇಂತಹ ಸುದ್ದಿಯಿಂದ ನನ್ನ ಮನೆಯವರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಕಿರಿಕಿರಿಯಾಗುತ್ತಿದೆ. ಪದೇ ಪದೇ ಮಾಧ್ಯಮಗಳಲ್ಲಿ ಈ ಕುರಿತ ಸುದ್ದಿ ನೋಡಿದಾಗ ನನ್ನನ್ನು ಇಷ್ಟಪಡುವವರ ಮೇಲೆ ಬೇರೆ ರೀತಿಯ ಪರಿಣಾಮ ಬೀರುತ್ತದೆ.

  MORE
  GALLERIES

 • 917

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಯಾರೂ ಅಷ್ಟು ಸುಲಭವಾಗಿ ನನ್ನನ್ನು ಏನೂ ಮಾಡಲು ಆಗುವುದಿಲ್ಲ. ಹತ್ಯೆ ಮಾಡಲು ನಾನೇನು ಕುರಿ ಕೋಳಿಯಲ್ಲ. ಇದರ ಸತ್ಯಾಸತ್ಯತೆಯನ್ನು ಪೊಲೀಸರು ಪತ್ತೆ ಮಾಡುತ್ತಾರೆ' ಎಂದು ಸುದ್ದಿಗೋಷ್ಠಿಯಲ್ಲಿ ಎಂದು ಈ ಹಿಂದೆ ಯಶ್ ಹೇಳಿದ್ದರು.

  MORE
  GALLERIES

 • 1017

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಇದೀಗ ಯಶ್​ ಅವರಿಗೆ ಆಗದವರು ಸ್ಲಂ ಭರತ್‌ ಹಾಗೂ ಸೈಕಲ್ ರವಿ ಮೂಲಕ ಹತ್ಯೆಗೆ ಸುಪಾರಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ತಮಿಳುನಾಡು ಮೂಲದವನಾದ ಭರತ್ ರಾಜಗೋಪಾಲ ನಗರದ ನಿವಾಸಿಯಾಗಿದ್ದ.

  MORE
  GALLERIES

 • 1117

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಆರಂಭದಲ್ಲಿ ಪುಡಾಂಟಿಕೆ, ಸಣ್ಣ ಪುಟ್ಟ ರೌಡಿಸಂ ಮೂಲಕ ಗುರುತಿಸಿಕೊಂಡಿದ್ದ. ಆ ಬಳಿಕ ಸೈಕಲ್ ರವಿ ಸೇರಿದಂತೆ ಒಂದಷ್ಟು ರೌಡಿಗಳ ಸ್ನೇಹ ಸಂಪಾದಿಸಿ ಫೀಲ್ಡ್​ನಲ್ಲಿ ಮರೆದಿದ್ದ. ಹಾಗೆಯೇ ರೌಡಿ ಲಕ್ಷ್ಮಣ ಹತ್ಯೆಯ ನಂತರ ಬೆಂಗಳೂರಿನಲ್ಲಿ ಡಾನ್ ಆಗಲು ಹೊರಟಿದ್ದನು.

  MORE
  GALLERIES

 • 1217

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

   ಸ್ಲಂ ಭರತ್​ ಕಾಮಾಕ್ಷಿಪಾಳ್ಯ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಪ್ರಮುಖ ಆರೋಪಿಯಾಗಿದ್ದ. ಇತ್ತೀಚೆಗೆ ಆತನನ್ನು ಬಂಧಿಸಲು ಮುಂದಾಗಿದ್ದ ರಾಜಗೋಪಾಲನಗರ ಪೊಲೀಸರ ಕಾರಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ.

  MORE
  GALLERIES

 • 1317

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಬನಶಂಕರಿ ಬಳಿ ಇರುವ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಎಸ್ಕೇಪ್ ಆಗಿದ್ದ ರೌಡಿಶೀಟರ್ ಭರತ್ ನಂತರ ಉತ್ತರ ಭಾರತದ ಕಡೆ ಹೋಗಿ ತಲೆಮರೆಸಿಕೊಂಡಿದ್ದ. ತನ್ನ ಗೆಳತಿಯೊಂದಿಗೆ ಮುರದಾಬಾದ್ ನಲ್ಲಿ ಇರುವ ವಿಚಾರ ತಿಳಿದ ಬೆಂಗಳೂರು ಪೊಲೀಸರು ಉತ್ತರ ಪ್ರದೇಶಕ್ಕೆ ಗೆ ತೆರಳಿದ್ದರು.

  MORE
  GALLERIES

 • 1417

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಸ್ಲಂ ಭರತ್​ನನ್ನು ಬಂಧಿಸಿ, ಇಂದು ಬೆಂಗಳೂರಿಗೆ ಕರೆತರುತ್ತಿದ್ದಾಗ ಪೀಣ್ಯ ಬಳಿ ಭರತ್​ನ ಗ್ಯಾಂಗ್​ನವರು 2 ಕಾರುಗಳಲ್ಲಿ ಬಂದು ಪೊಲೀಸರ ಕಾರನ್ನು ಅಡ್ಡಗಟ್ಟಿದ್ದರು. ಪೊಲೀಸರು ಕಾರಿನಿಂದ ಇಳಿಯುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಿದ್ದರು. ಇದರಿಂದ ಪೊಲೀಸರು ಗಾಬರಿಗೊಂಡು, ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾದಾಗ ಅವರ ವಶದಲ್ಲಿದ್ದ ಸ್ಲಂ ಭರತ್​ ಪೊಲೀಸರ ಕೈ ಕಚ್ಚಿ ತನ್ನ ಗ್ಯಾಂಗ್​ನೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದ.

  MORE
  GALLERIES

 • 1517

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಪೊಲೀಸರ ಕಾರಿಗೆ ಅಡ್ಡಗಟ್ಟಿದ ಭರತ್​ನ ಗ್ಯಾಂಗ್​ನವರು ಪೊಲೀಸರ ಮೇಲೆ ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದ್ದರು. ಈ ವೇಳೆ ಪೊಲೀಸ್ ಪೇದೆ ಸುಭಾಷ್ ಎಂಬುವವರಿಗೆ ಗಾಯವಾಗಿತ್ತು. ಸ್ಲಂ ಭರತ್​ನನ್ನು ಬೆನ್ನತ್ತಿದ್ದ ಪೊಲೀಸರು ಬೈಕ್​ನಲ್ಲಿ ಸಹಚರನೊಂದಿಗೆ ಪರಾರಿಯಾಗುತ್ತಿದ್ದ ಆತನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪಿಸ್ತೂಲ್​ನಿಂದ ಪೊಲೀಸ್​ ಇನ್​ಸ್ಪೆಕ್ಟರ್​ಗೆ ಭರತ್​ ಶೂಟ್ ಮಾಡಿದ್ದ. ಆದರೆ, ಇನ್​ಸ್ಪೆಕ್ಟರ್​ ದಿನೇಶ್​ ಪಾಟೀಲ್ ಧರಿಸಿದ್ದ ಬುಲೆಟ್​ ಪ್ರೂಫ್​ ಜಾಕೆಟ್​ನಿಂದ ಹೆಚ್ಚಿನ ಅಪಾಯವೇನೂ ಆಗಿರಲಿಲ್ಲ.

  MORE
  GALLERIES

 • 1617

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಅದೇ ವೇಳೆ ಇನ್ನೋರ್ವ ಪೊಲೀಸ್ ಇನ್​ಸ್ಪೆಕ್ಟರ್​ ಲೋಹಿತ್​ ರೌಡಿ ಶೀಟರ್​ ಭರತ್​ನ ಎದೆಗೆ ಗುಂಡು ಹಾರಿಸಿದ್ದರು. ತಕ್ಷಣ ಕುಸಿದುಬಿದ್ದ ಭರತ್​ನನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆತ ಮೃತಪಟ್ಟಿದ್ದ. ಬೆಂಗಳೂರಿನಲ್ಲೇ ಸ್ಲಂ ಭರತನ ಮೇಲೆ  50ಕ್ಕೂ ಹೆಚ್ಚು ಕೇಸುಗಳಿವೆ. ಕಳೆದ ತಿಂಗಳಲ್ಲಿ ರಾಜಗೋಪಾಲ ನಗರದ ಶ್ರೀನಿವಾಸ ಅವರು ಹಫ್ತಾ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳನ್ನು ಜಖಂ ಮಾಡಿಸಿದ್ದನು.

  MORE
  GALLERIES

 • 1717

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇನಾ?

  ಅಷ್ಟೇ ಅಲ್ಲದೆ ಈ ಹಿಂದಿನ ಯಶ್ ಹತ್ಯೆಯ ಸುಪಾರಿಯನ್ನು ಪೂರ್ಣಗೊಳಿಸಲು ತಿಂಗಳುಗಳ ಹಿಂದೆಯಷ್ಟೇ ಸಹಚರರ ಜೊತೆ ಸೇರಿ ಯೋಜನೆ ರೂಪಿಸಿದ್ದ ಎನ್ನಲಾಗುತ್ತಿದೆ. ಇದೀಗ ಭರತ್ ಸಾವಿನೊಂದಿಗೆ ಯಶ್ ಹತ್ಯೆಯ ಸುಪಾರಿ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

  MORE
  GALLERIES