Singer Mangli: ತುಳು ಸಿನಿಮಾ ಹಾಡಿಗೆ ಧ್ವನಿಯಾದ ಮಂಗ್ಲಿ; ಯಾವ ಸಿನಿಮಾ? ಯಾವ ಹಾಡು?
ತೆಲುಗಿ ಗಾಯಕಿ ಮಂಗ್ಲಿ ಇದೀಗ ಕರ್ನಾಟಕದಲ್ಲೂ ಫುಲ್ ಫೇಮಸ್ ಆಗಿದ್ದಾರೆ. ವಿಭಿನ್ನ ಕಂಠದಿಂದಲೇ ಅಭಿಮಾನಿಗಳ ಮನಗೆದ್ದಿರುವ ಮಂಗ್ಲಿ ಕಂಠಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೂ ಭಾರೀ ಡಿಮ್ಯಾಂಡ್ ಇದೆ. ಇದೀಗ ತುಳು ಹಾಡಿಗೂ ಮಂಗ್ಲಿ ದನಿಯಾಗಿದ್ದಾರೆ.
ಕನ್ನಡದಲ್ಲಿ ಅನೇಕ ಹಾಡುಗಳನ್ನು ಹಾಡಿರುವ ತೆಲುಗು ಗಾಯಕಿ ಮಂಗ್ಲಿಗೆ ಕರುನಾಡಿನಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಆನೇಕ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡಿ ಅಭಿಮಾನಿಗಳನ್ನು ಇಷ್ಟವಾಗಿದ್ದಾರೆ.
2/ 8
ಇದೀಗ ತುಳು ಹಾಡಿಗೂ ಮಂಗ್ಲಿ ಧ್ವನಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಮಂಗ್ಲಿ ತುಳು ಹಾಡು ಹಾಡಿದ್ದಾರೆ.
3/ 8
ಎ.ಆರ್. ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ಅರುಣ್ ರೈ ತೋಡಾರ್ ನಿರ್ಮಾಣ ಮಾಡುತ್ತಿರುವ ‘ಬಿರ್ದ್ದ ಕಂಬಳ’ ಚಿತ್ರದಲ್ಲಿ ಒಂದು ಹಾಡಿಗೆ ಮಂಗ್ಲಿ ಧ್ವನಿ ನೀಡಿದ್ದಾರೆ.
4/ 8
ಕನ್ನಡದಲ್ಲೂ ‘ವೀರ ಕಂಬಳ’ ಟೈಟಲ್ ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ತುಳು ಮತ್ತು ಕನ್ನಡ ಎರಡೂ ಭಾಷೆಯಲ್ಲೂ ಮಂಗ್ಲಿ ಅವರೇ ಹಾಡಿದ್ದಾರೆ.
5/ 8
ಮಂಗ್ಲಿ ಅವರ ಕಂಠದಲ್ಲಿ ಮೂಡಿಬರುತ್ತಿರುವ ಈ ಹಾಡಿಗೆ ತುಳುವಿನಲ್ಲಿ ಕೆ.ಕೆ. ಪೇಜಾವರ ಹಾಗೂ ಕನ್ನಡದಲ್ಲಿ ರಘು ಶಾಸ್ತ್ರಿ ಸಾಹಿತ್ಯ ಬರೆದಿದ್ದಾರೆ. ಕದ್ರಿ ಮಣಿಕಾಂತ್ ಈ ಹಾಡಿಗೆ ಸಂಗೀತ ನೀಡಿದ್ದಾರೆ.
6/ 8
ಕನ್ನಡದಲ್ಲಿ ಮಂಗ್ಲಿ ಹಾಡಿರುವ ಅನೇಕ ಹಾಡುಗಳು ಕೂಡ ಸೂಪರ್ ಹಿಟ್ ಆಗಿದೆ. ಈ ಹಾಡು ಜನರಿಗೆ ಇಷ್ಟವಾಗುತ್ತೆ ಎಂದು ಸಿನಿಮಾ ತಂಡ ಹೇಳ್ತಿದೆ.
7/ 8
ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಯಾಗಿಯೂ ಗುರುತಿಸಿಕೊಂಡಿರುವ ಮಂಗ್ಲಿ, ಈ ವರೆಗೂ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿರಲಿಲ್ಲ. ಇದೀಗ ಕನ್ನಡದಲ್ಲಿ ಪಾದರಾಯ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
8/ 8
ನಾಗಶೇಖರ್ಗೆ ಜೋಡಿಯಾಗಿ ಮಂಗ್ಲಿ ಅಭಿನಯಿಸುತ್ತಿದ್ದಾರೆ. ನೈಜ ಘಟನೆ ಆಧರಿತ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡುತ್ತಿದ್ದಾರೆ.