ಬಳ್ಳಾರಿಯಲ್ಲಿ ನಡೆದ ಬಳ್ಳಾರಿ ಉತ್ಸವದಲ್ಲಿ ಸೌತ್ನ ಫೇಮಸ್ ಸಿಂಗರ್ ಮಂಗ್ಲಿ ಅವರು ಭಾಗವಹಿಸಿ ಗಮನ ಸೆಳೆದರು. ಸೌತ್ನ ಸಂಗೀತ ಪ್ರಿಯರ ಫೇವರಿಟ್ ಗಾಯಕಿ ಈ ಉತ್ಸವದಲ್ಲಿ ಹಾಡಿದ್ದಾರೆ. ಶನಿವಾರ ರಾತ್ರಿ ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಘಟನೆಯಲ್ಲಿ ಪುಂಡರು ಗಾಯಕಿ ಮಂಗ್ಲಿ ಅವರ ಕಾರಿಗೆ ಕಲ್ಲೆಸೆದಿದ್ದಾರೆ. ಬಳ್ಳಾರಿ ಉತ್ಸವದ ಹಿನ್ನೆಲೆ ಉತ್ಸವದ ಕಾರ್ಯಕ್ರಮಕ್ಕೆ ಬಂದಿದ್ದ ಸಿಂಗರ್ ಮಂಗ್ಲಿ ಈ ಕಾರ್ಯಕ್ರಮದಲ್ಲಿ ಸ್ಟೇಜ್ ಪ್ರೋಗ್ರಾಂ ಕೂಡಾ ಕೊಟ್ಟು ಜನರನ್ನು ರಂಜಿಸಿದರು. ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆದಿದ್ದು ವೇದಿಕೆ ಮೇಲೆ ಹಾಡುಗಳನ್ನ ಹೇಳಿ ವಾಪಸ್ ತೆರಳುವಾಗ ಮಂಗ್ಲಿಯನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ವಿಶೇಷವಾಗಿ ಯುವಕರ ದಂಡು ಮಂಗ್ಲಿ ಅವರನ್ನು ಕಾಣಲು ಮುಗಿಬಿದ್ದಿದ್ದರು. ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್ಗೂ ಯುವಕರು ನುಗ್ಗಿ ಬಂದಿದ್ದಾರೆ. ಈ ರೀತಿ ಯುವಕರು ನುಗ್ಗಿ ಬಂದ ಕೂಡಲೇ ಪೋಲಿಸರು ಲಘು ಲಾಟಿ ಪ್ರಹಾರ ಮಾಡಿದ್ದಾರೆ. ಆ ವೇಳೆ ಕಿಡಿಗೇಡಿಗಳು ಮಂಗ್ಲಿ ಹೋಗುತ್ತಿದ್ದ ಕಾರಿಗೆ ಕಲ್ಲೆಸೆದಿದ್ದಾರೆ. ಬಳ್ಳಾರಿ ಉತ್ಸವದಲ್ಲಿ ಸಾವಿರಾರು ಜನ ಭಾಗಿಯಾಗಿದ್ದು, ಅನುಶ್ರೀ, ಅರ್ಜುನ್ ಜನ್ಯ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮದಲ್ಲಿ ಹಾಜರಿದ್ದರು.