ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅಪ್ಪ-ಅಮ್ಮ ಆಗ್ತಾರೆ ಎನ್ನುವು ಸುದ್ದಿ ನಿನ್ನೆಯಿಂದ ಎಲ್ಲೆಡೆ ಹರಿದಾಡ್ತಾ ಇತ್ತು. ಅದಕ್ಕೆ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
2/ 8
ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇಬ್ಬರು ಸೇರಿಕೊಂಡು ರೀಲ್ಸ್ ಮಾಡುತ್ತಾರೆ. ಇಬ್ಬರು ರೀಲ್ಸ್ ಹಾಕಿದ ಕೆಲವೇ ಗಂಟೆಯಲ್ಲೇ ಸಾವಿರಾರು ಲೈಕ್ಸ್ ಬರುತ್ತೆ.
3/ 8
ಈಗ ತಮಾಷೆಗಾಗಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಮಾಡಿದ ರೀಲ್ಸ್ ನಿಂದ ಎಡವಟ್ಟು ಆಗಿದೆ. ರೀಲ್ಸ್ ಒಂದರಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾರನ್ನು ನಾನು ಹೇಳುವುದನ್ನು ಕೂಡಿಸಿ ಹೇಳು ಎಂದು ಹೇಳ್ತಾರೆ. Fat + Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಕೇಳಿದ್ದಾರೆ.
4/ 8
Fat + Her ಅಂತಾರೆ ಬಳಿಕ ಸರಿಯಾಗಿ ಕೂಡಿಸು ಎಂದು ಹೇಳಿದಾಗ ನಿವೇದಿತಾ ಗೌಡ ಫಾದರ್ ಎಂದು ನಾಚಿಕೊಳ್ತಾರೆ. ಹಾಗಾಗಿ ಚಂದನ್ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದರು.
5/ 8
ಈ ಸುದ್ದಿಗೆ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. 'ಸ್ನೇಹಿತರೆ ನಾನು ತಂದೆ ಆಗುವ ವಿಚಾರವನ್ನು ನಿವಿನೇ ರಿವೀಲ್ ಮಾಡಬೇಕು. ಹಾಸ್ಯ ಮಾಡೋ ಉದ್ದೇಶಕ್ಕೆ ಮಾಡಿರುವ ವಿಡಿಯೋ ಇದು. ಶುಭಾಶಯಗಳನ್ನು ತಿಳಿಸುವುದಕ್ಕೆ ತುಂಬಾ ಜನ ಕರೆ ಮಾಡುತ್ತಿದ್ದಾರೆ. ಮಗು ಮಾಡಿಕೊಳ್ಳಲು ನಾವು ಇನ್ನೂ ರೆಡಿಯಾಗಿಲ್ಲ ಎಂದ ಹೇಳಿದ್ದಾರೆ.
6/ 8
ನಿಜಕ್ಕೂ ತಂದೆ-ತಾಯಿ ಆದಾಗ ನಾವೇ ಅನೌನ್ಸ್ ಮಾಡುತ್ತೀವಿ. ಏನೇ ಹೇಳಿ ಇಂಗ್ಲಿಷ್ ಭಾಷೆ ತುಂಬಾನೇ ಫನ್ನಿ. Fat + Her = Father, not Fat her' ಎಂದು ಚಂದನ್ ಹೇಳಿದ್ದಾರೆ.
7/ 8
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಬಿಗ್ ಬಾಸ್ ಸೀನಸ್ 05ರಲ್ಲಿ ಇದ್ದರು. ಅಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು. ಅಲ್ಲಿಂದ ಬಂದ ಮೇಲೆ ಇಬ್ಬರು ಪ್ರೀತಿ ಮಾಡಲು ಶುರು ಮಾಡಿದ್ದರು.
8/ 8
ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದ ಸಹ ಕಾಂಟ್ರವರ್ಸಿ ಆಗಿತ್ತು. 2019ರಲ್ಲಿ ನಡೆದ ಯುವ ದಸರ ಕಾರ್ಯಕ್ರಮದಲ್ಲಿ ಚಂದನ್ ರೊಮ್ಯಾಂಟಿಕ್ ಸಾಂಗ್ ಹಾಡಿದ ನಂತರ ಮಂಡಿಯೂರಿ ಪ್ರಪೋಸ್ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಒಳಗಾಗಿತ್ತು.