ಕೆಲ ದಿನಗಳ ಹಿಂದೆ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅಪ್ಪ-ಅಮ್ಮ ಆಗ್ತಾರೆ ಎನ್ನುವ ಸುದ್ದಿ ಹರಡಿತ್ತು. ಎಲ್ಲರೂ ನಿಜ ಅಂದುಕೊಂಡು ವಿಶ್ ಮಾಡಿದ್ದರು.
2/ 8
ತಮಾಷೆಗಾಗಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಮಾಡಿದ ರೀಲ್ಸ್ ನಿಂದ ಎಲ್ಲರೂ ತಪ್ಪು ತಿಳಿದುಕೊಂಡಿದ್ದರು. ರೀಲ್ಸ್ ಒಂದರಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾರನ್ನು ನಾನು ಹೇಳುವುದನ್ನು ಕೂಡಿಸಿ ಹೇಳು ಎಂದು ಹೇಳ್ತಾರೆ. Fat + Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಕೇಳಿದ್ದಾರೆ.
3/ 8
Fat + Her ಸರಿಯಾಗಿ ಕೂಡಿಸು ಎಂದು ಚಂದನ್ ಹೇಳಿದಾಗ ನಿವೇದಿತಾ ಗೌಡ ಫಾದರ್ ಎಂದು ನಾಚಿಕೊಳ್ತಾರೆ. ಹಾಗಾಗಿ ಚಂದನ್ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದರು.
4/ 8
ಆಗ ಚಂದನ್ ಶೆಟ್ಟಿ, ನಿಜಕ್ಕೂ ತಂದೆ-ತಾಯಿ ಆದಾಗ ನಾವೇ ಅನೌನ್ಸ್ ಮಾಡುತ್ತೀವಿ. ಏನೇ ಹೇಳಿ ಇಂಗ್ಲಿಷ್ ಭಾಷೆ ತುಂಬಾನೇ ಫನ್ನಿ. Fat + Her = Father, not Fat her ಎಂದು ಸ್ಪಷ್ಟನೆ ನೀಡಿದ್ದರು.
5/ 8
ಚಂದನ್ ಅವರ ಸ್ನೇಹಿತರು, ಆತ್ಮೀಯರು ಹೇಗೂ ಸುದ್ದಿ ಆಗಿದೆ. ತಂದೆ ಆಗಿ ಬಿಡು ಎಂದು ಹೇಳಿದ್ರಂತೆ. ಅಲ್ಲದೇ ನಿವಿ ಕೂಡ ನಾನು ತಾಯಿ ಆದ್ರೆ ಏನ್ ಮಾಡ್ತೀರಾ ಎಂದಿದ್ರಂತೆ.
6/ 8
ನಿವಿಗೆ ನಾನು ಹೇಳಿದೆ, ನೀನು ತಾಯಿ ಆದ್ರೆ, ನಾನೇ 24 ಗಂಟೆ ಮಗುವನ್ನು ನೋಡಿಕೊಂಡು ಅಮ್ಮ ಆಗಿರಬೇಕು ಎಂದು ಹೇಳಿದ್ರಂತೆ. ನಾವು ಇನ್ನೂ ಜೀವನದಲ್ಲಿ ಸಾಧನೆ ಮಾಡಬೇಕು ಅಂತಿದ್ದಾರೆ ಚಂದನ್.
7/ 8
ನಾನು ಅಪ್ಪ ಆದ್ರೆ, ನಾನೇ ಅನೌನ್ಸ್ ಮಾಡ್ತೀನಿ. ಅದು ಬಿಗ್ ಟ್ವಿಸ್ಟ್ ನೊಂದಿಗೆ ಹೇಳ್ತಿನಿ. ಆದ್ರೂ ಇಬ್ಬರೂ ಈಗ ಕೆಲಸಗಳಲ್ಲಿ ಬ್ಯುಸಿ ಆಗಿದ್ದೇವೆ ಎಂದು ಹೇಳಿದ್ದಾರೆ.
8/ 8
ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ಇಬ್ಬರು ಸೇರಿಕೊಂಡು ರೀಲ್ಸ್ ಮಾಡುತ್ತಾರೆ. ಇಬ್ಬರು ರೀಲ್ಸ್ ಹಾಕಿದ ಕೆಲವೇ ಗಂಟೆಯಲ್ಲೇ ಸಾವಿರಾರು ಲೈಕ್ಸ್ ಬರುತ್ತೆ.