Sidharth Shukla Passes Away: ಕಿರುತೆರೆ ನಟ ಹಾಗೂ ಹಿಂದಿ ಬಿಗ್ ಬಾಸ್ ಸೀಸನ್ 13ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಇಂದು ನಿಧನರಾಗಿದ್ದಾರೆ. ಹೃದಯಾಘಾತದಿಂದ ಸಿದ್ಧಾರ್ಥ್ ಸುಕ್ಲಾ ಕೊನೆಯುಸಿರೆಳೆದಿದ್ದಾರೆ ಎಂದು ಕೂಪರ್ ಆಸ್ಪತ್ರೆಯ ಮೂಲಗಳು ತಿಳಿಸಿವೆ. (ಚಿತ್ರಗಳು ಕೃಪೆ: ಸಿದ್ಧಾರ್ಥ್ ಶುಕ್ಲಾ ಇನ್ಸ್ಟಾಗ್ರಾಂ ಖಾತೆ)
ಹಿಂದಿ ಕಿರುತೆರೆಯಲ್ಲಿ ಅಭಿನಯಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದ ನಟ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ. ವೆಬ್ ಸರಣಿ, ಆಲ್ಬಂ ಸಾಂಗ್ ಹೀಗೆ ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದರು ಈ ನಟ.
2/ 10
ಸಿದ್ಧಾರ್ಥ್ ಶುಕ್ಲಾ ಅವರು ಹಿಂದಿ ಬಿಗ್ ಬಾಸ್ ಸೀಸನ್ 13ರಲ್ಲಿ ಸ್ಪರ್ಧಿಸಿದ್ದು ವಿನ್ನರ್ ಆಗಿದ್ದರು.
3/ 10
ಸಿದ್ಧಾರ್ಥ್ ಶುಕ್ಲಾ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
4/ 10
ಸಿದ್ಧಾರ್ಥ್ ಶುಕ್ಲಾ ಅವರು ನಿನ್ನೆ ರಾತ್ರಿ ಮಲಗುವಾಗ ಯಾವುದೋ ಔಷಧಿ ತೆಗೆದುಕೊಂಡಿದ್ದು, ಬೆಳಿಗ್ಗೆ ಎದ್ದೇಳಲೇ ಎಲ್ಲವಂತೆ.
5/ 10
ಕೂಪರ್ ಆಸ್ಪತ್ರೆಯ ಮೂಲಗಳು ತಿಳಿಸಿರುವಂತೆ ಸಿದ್ಧಾರ್ಥ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರಂತೆ.
6/ 10
ಸಿದ್ಧಾರ್ಥ್ ಅವರ ಮೃತದೇಹ ಕೂಪರ್ ಆಸ್ಪತ್ರೆಯಲ್ಲಿದೆ.
7/ 10
ಸಿದ್ಧಾರ್ಥ್ ಅವರು ಬಾಲಿಕಾ ವಧು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಬಾಲಿಕಾ ವಧುವಿನ ಎರಡನೇ ಪತಿಯ ಪಾತ್ರದಲ್ಲಿ ಅಭಿನಯಿಸಿದ್ದರು.
8/ 10
ಕಿರುತೆರೆಯ ಜೊತೆಗೆ ಆಲ್ಬಂ ಹಾಡಿನಲ್ಲೂ ನಟಿಸಿದ್ದಾರೆ. ಶೋನಾ ಶೋನಾ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.
9/ 10
ಬ್ರೋಕನ್ ಬಟ್ ಬ್ಯೂಟಿಫುಲ್ ವೆಬ್ ಸರಣಿಯಲ್ಲಿ ಸಿದ್ಧಾರ್ಥ್ ನಟಿಸಿದ್ದಾರೆ. ಇದರಲ್ಲಿ ಇದ್ದ ಚುಂಬನದ ದೃಶ್ಯ ಆಗ ಕೆಲವು ತಿಂಗಳ ಹಿಂದೆ ವೈರಲ್ ಆಗಿತ್ತು.
10/ 10
ಸಿದ್ಧಾರ್ಥ್ ಶುಕ್ಲಾ ಅಗಲಿಕೆಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಹಾಗೂ ಸ್ನೇಹಿತರು ಕಂಬನಿ ಮಿಡಿಯುತ್ತಿದ್ದಾರೆ.